ಆ್ಯಪ್ನಗರ

ಸದ್ಗುರು ಜಗ್ಗಿ ವಾಸುದೇವ್‌ ಅವರ ಪೇಂಟಿಂಗ್‌ ₹5.1 ಕೋಟಿಗೆ ಹರಾಜು!

ಇಶಾ ಫೌಂಡೇಶನ್‌ ಸಂಸ್ಥಾಪಕರಾಗಿರುವ ಆಧ್ಯಾತ್ಮಿಕ ಚಿಂತಕ ಸದ್ಗುರು ಜಗ್ಗಿ ವಾಸುದೇವ್‌ ಅವರು ರಚಿಸಿದ ವಿಶೇಷ ಎತ್ತಿನ ಪೇಂಟಿಂಗ್‌ವೊಂದು ಬರೋಬ್ಬರಿ 5.1 ಕೋಟಿ ರೂ.ಗೆ ಆನ್‌ಲೈನ್‌ನಲ್ಲಿ ಹರಾಜಾಗಿದೆ.

Vijaya Karnataka Web 7 Jul 2020, 10:55 pm
ಕೊಯಮತ್ತೂರು: ಇಶಾ ಫೌಂಡೇಶನ್‌ ಸಂಸ್ಥಾಪಕರಾಗಿರುವ ಆಧ್ಯಾತ್ಮಿಕ ಚಿಂತಕ ಸದ್ಗುರು ಜಗ್ಗಿ ವಾಸುದೇವ್‌ ಅವರು ರಚಿಸಿದ ವಿಶೇಷ ಎತ್ತಿನ ಪೇಂಟಿಂಗ್‌ವೊಂದು ಬರೋಬ್ಬರಿ 5.1 ಕೋಟಿ ರೂ.ಗೆ ಆನ್‌ಲೈನ್‌ನಲ್ಲಿ ಹರಾಜಾಗಿದೆ. ಈಗಾಗಲೇ ಕೊವಿಡ್‌-19 ಪರಿಹಾರ ನಿಧಿಗೆ 9 ಕೋಟಿ ರೂ. ನೀಡಿರುವ ಸದ್ಗುರು, ಈ ಮೊತ್ತವನ್ನೂ ಇದೇ ಉದ್ದೇಶಕ್ಕೆ ಬಳಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Vijaya Karnataka Web sadguru painting


ಒಂದು ತಿಂಗಳ ಹಿಂದೆ ಸದ್ಗುರು ರಚಿಸಿದ 'ಭೈರವ' ಹೆಸರಿನ ಪೇಂಟಿಂಗ್‌ ಅನ್ನು ಆನ್‌ಲೈನ್‌ನಲ್ಲಿ ಹರಾಜಿಗೆ ಇಡಲಾಗಿತ್ತು. ಅದಕ್ಕೆ 5.1 ಕೋಟಿ ರೂ. ಗರಿಷ್ಠ ಬೆಲೆ ಕಟ್ಟಿ ಖರೀದಿಸಲಾಗಿದೆ.

ಇತ್ತೀಚೆಗೆ ಹರಾಜಾದ ಸದ್ಗುರು ಅವರ ಎರಡನೇ ಪೇಂಟಿಂಗ್‌ ಇದಾಗಿದೆ. ಇದಕ್ಕೂ ಮುನ್ನ ಅವರು ರಚಿಸಿದ 'ಟು ಲೀವ್‌ ಟೋಟಲಿ' ತೈಲ ವರ್ಣಚಿತ್ರವು 4.14 ಕೋಟಿ ರೂ.ಗೆ ಮಾರಾಟವಾಗಿತ್ತು.

ಎಲ್ಲ ಜನರಿಗೂ ಕೊರೊನಾ ವಿಮೆ ನೀಡಿ: ಸರಕಾರಕ್ಕೆ ಎಚ್‌. ಕೆ. ಪಾಟೀಲ್‌ ಪತ್ರ

''ಭೈರವನಿಗೆ ಕೊನೆಗೂ ಒಂದು ಮನೆ ಸಿಕ್ಕಿದೆ. ನಮ್ಮ ಸೌಮ್ಯ ಎತ್ತು ಜೀವನದಾಚೆಗೂ ಸೇವೆ ಸಲ್ಲಿಸಿದೆ. ಇದರಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುವುದು,'' ಎಂದು ಸದ್ಗುರು ಟ್ವೀಟ್‌ ಮಾಡಿದ್ದಾರೆ.

ಪಡಿತರ ಕಾರ್ಡ್‌ ಇಲ್ಲದವರಿಗೂ ಗರೀಬ್‌ ಕಲ್ಯಾಣ ಅನ್ನ ಯೋಜನೆ ವಿಸ್ತರಿಸಿ: ಹೈಕೋರ್ಟ್‌ ನಿರ್ದೇಶನ!

ಮೃತ ಎತ್ತಿನ ನೆನಪಿನಲ್ಲಿ: ಕಳೆದ ಏಪ್ರಿಲ್‌ನಲ್ಲಿ ಸದ್ಗುರು ಅವರ ಆಶ್ರಮದಲ್ಲಿದ್ದ ಎತ್ತು ಮೃತಪಟ್ಟಿತ್ತು. ಇದರ ನೆನಪಿಗಾಗಿ ಸದ್ಗುರು ಈ ಚಿತ್ರ ರಚಿಸಿದ್ದಾರೆ. ಸಗಣಿಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಕಲಾಕೃತಿಯನ್ನು ಇದ್ದಿಲು, ಹರಿಶಿಣ ಮತ್ತು ಲೈಮ್‌ಸ್ಟೋನ್‌ ಬಳಸಿ ತಯಾರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ