ಆ್ಯಪ್ನಗರ

ಅಪ್ಪ - ಅಮ್ಮನನ್ನು ಕಡೆಗಣಿಸಿದ್ರೆ ಸರಕಾರಿ ನೌಕರರ ಸಂಬಳ ಕಟ್

ಪೋಷಕರು ಹಾಗೂ ಒಡಹುಟ್ಟಿದವರನ್ನು ಕಡೆಗಣಿಸಿದರೆ ಇನ್ನು ಮುಂದೆ ಅಸ್ಸಾಂ ಸರಕಾರಿ ನೌಕರರ ಸಂಬಳ ಕಟ್ ಆಗಲಿದೆ. ಅಸ್ಸಾಂ ರಾಜ್ಯ ಸರಕಾರ ಈ ಕಾನೂನು ಜಾರಿಗೆ ತಂದಿದ್ದು, ಅಕ್ಟೋಬರ್ 2 ರಿಂದ ಜಾರಿಗೆ ಬರಲಿದೆ.

TIMESOFINDIA.COM 28 Jul 2018, 12:27 pm
ಗುವಾಹಟಿ: ಪೋಷಕರು ಹಾಗೂ ಒಡಹುಟ್ಟಿದವರನ್ನು ಕಡೆಗಣಿಸಿದರೆ ಇನ್ನು ಮುಂದೆ ಅಸ್ಸಾಂ ಸರಕಾರಿ ನೌಕರರ ಸಂಬಳ ಕಟ್ ಆಗಲಿದೆ. ಅಸ್ಸಾಂ ರಾಜ್ಯ ಸರಕಾರ ಈ ಕಾನೂನು ಜಾರಿಗೆ ತಂದಿದ್ದು, ಅಕ್ಟೋಬರ್ 2 ರಿಂದ ಜಾರಿಗೆ ಬರಲಿದೆ.
Vijaya Karnataka Web salary cut


ಅವಲಂಬಿತ ಪೋಷಕರು, ದಿವ್ಯಾಂಗ ಸಹೋದರ - ಸಹೋದರಿಯರನ್ನು ಸರಿಯಾಗಿ ನೋಡಿಕೊಳ್ಳದಿರುವುದು ಸಾಬೀತಾದರೆ, ಇಂತಹ ಸರಕಾರಿ ನೌಕರರ ಒಂದು ತಿಂಗಳ ಒಟ್ಟು ವೇತನದಲ್ಲಿ ಶೇ. 10 - 15 ರಷ್ಟು ಕಡಿತಗೊಳ್ಳಲಿದೆ. ಯಾವುದೇ ಆದಾಯವಿಲ್ಲದ ಪೋಷಕರನ್ನು ಸರಕಾರಿ ನೌಕರಿಯಲ್ಲಿರುವ ಮಕ್ಕಳೇ ನೋಡಿಕೊಳ್ಳಬೇಕು. ಅಲ್ಲದೆ, ಸರಕಾರಿ ನೌಕರಿಯಲ್ಲಿರುವ ವ್ಯಕ್ತಿ ಮೇಲೆ ಅವಲಂಬಿತರಾಗಿರುವ ದಿವ್ಯಾಂಗ ಸಹೋದರ ಹಾಗೂ ಸಹೋದರಿಯರನ್ನು ನೌಕರರು ಸರಿಯಾಗಿ ನೋಡಿಕೊಳ್ಳಬೇಕೆಂದು ಈ ಕಾನೂನನ್ನು ಜಾರಿಗೆ ತರಲಿದ್ದೇವೆ ಎಂದು ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮ ತಿಳಿಸಿದ್ದಾರೆ.

ಅಸ್ಸಾಂ ನೌಕರರ ಪೋಷಕರ ಜವಾಬ್ದಾರಿ ನಿಯಮ ಹೊಣೆಗಾರಿಕೆ ಮೇಲ್ವಿಚಾರಣೆ ಕಾಯಿದೆ, 2017 ಅನ್ನು ದೇಶದಲ್ಲೇ ಮೊದಲ ಬಾರಿಗೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಸ್ಸಾಂ ಬಿಜೆಪಿ ಸರಕಾರ ಮಂಡಿಸಿತ್ತು. ಪ್ರಣಾಮ್ ಕಾಯಿದೆ ಎಂದು ಕರೆಯಲ್ಪಡುವ ಈ ಕಾನೂನಿನ ನಿಯಮವಾಳಿಗಳಿಗೆ ಅಸ್ಸಾಂ ಸಂಪುಟ ಸೋಮವಾರ ಅಂಕಿತ ಹಾಕಿದ್ದು, ಅಕ್ಟೋಬರ್ 2 ರಿಂದ ನೂತನ ಕಾನೂನು ಜಾರಿಗೆ ಬರಲಿದೆ ಎಂದು ಶರ್ಮ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ