ಆ್ಯಪ್ನಗರ

ಕೊರೊನಾ ಲಸಿಕೆ ಸಾಗಣೆ ಬಾಕ್ಸ್ ಮೇಲೆ ಸರ್ವೇ ಸಂತು ನಿರಾಮಯಾಃ ಎಂಬ ಸಂಸ್ಕೃತ ಶ್ಲೋಕ, ಏನಿದರ ಅರ್ಥ?

ಕೊರೊನಾ ಲಸಿಕೆ ಇರುವ ಬಾಕ್ಸ್‌ ಮೇಲಿನ ಸರ್ವೇ ಸಂತು ನಿರಾಮಯಾಃ ಎಂದರೆ ಎಲ್ಲರೂ ಆರೋಗ್ಯವಿರಲಿ ಅಥವಾ ರೋಗ ರಹಿತವಾಗಿರಲಿ ಎಂಬುವುದಾಗಿದೆ. ಹೀಗಾಗಿ ಕೊರೊನಾ ಲಸಿಕೆ ಮೂಲಕ ಎಲ್ಲರೂ ರೋಗ ರಹಿತರಾಗಿ ಎನ್ನುವುದೇ ಬಾಕ್ಸ್ ಮೇಲಿನ ಶ್ಲೋಕದ ಅರ್ಥವಾಗಿದೆ.

Vijaya Karnataka Web 14 Jan 2021, 9:29 am
ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿದ್ದ ಕೊರೊನಾ ಎಂಬ ವೈರಸ್‌ನ ಅಂತ್ಯಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಕೊರೊನಾ ಸಂಹರಿಸಲು ಕೊರೊನಾ ಲಸಿಕೆಗಳು ಈಗಾಗಲೇ ಲಗ್ಗೆ ಇಟ್ಟಿದೆ. ನಗರ-ನಗರಗಳಿಗೆ ಕೊರೊನಾ ಲಸಿಕೆ ರವಾನೆಯಾಗುತ್ತಿದೆ. ಈ ಪೈಕಿ ಭಾರತದಲ್ಲಿ ಪುಣೆಯ ಸೇರಂ ಇನ್ಸ್ಟಿಟ್ಯೂಟ್‌ ತಯಾರಿಸಿರುವ ಕೋವಿಶೀಲ್ಡ್ ಕೊರೊನಾ ಲಸಿಕೆ ಈಗಾಗಲೇ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ರವಾನೆಯಾಗಿದೆ.
Vijaya Karnataka Web sarve santhu niramaya


ಆದರೆ ಕೊರೊನಾ ಲಸಿಕೆ ಸಾಗಣೆ ಮಾಡುವ ಬಾಕ್ಸ್‌ ಮೇಲೆ ಬರೆದಿರುವ ಸಂಸ್ಕೃತ ಶ್ಲೋಕ ಇದೀಗ ಭಾರೀ ಕುತೂಹಲ ಕೆರಳಿಸಿದೆ. ಹೌದು, ಕೊರೊನಾ ಲಸಿಕೆ ಇರುವ ಎಲ್ಲಾ ಬಾಕ್ಸ್‌ಗಳ ಮೇಲೂ ಸರ್ವೇ ಸಂತು ನಿರಾಮಯಾಃ ಎಂಬ ಸಂಸ್ಕೃತ ಶ್ಲೋಕ ಇದೆ. ಇದರ ಫೋಟೊಗಳು ಟ್ವಿಟ್ಟರ್‌ ಸೇರಿ ಹಲವು ಪ್ರಮುಖ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಮೂಲ ಶ್ಲೋಕ ಯಾವುದು!
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್
ಓಂ ಶಾಂತಿಃ ಶಾಂತಿಃ ಶಾಂತಿಃ

ಎಂಬುವುದು ಮೂಲ ಸಂಸ್ಕೃತ ಶ್ಲೋಕವಾಗಿದೆ, ಇದರ ಒಂದು ಸಾಲನ್ನು ಕೊರೊನಾ ಲಸಿಕೆ ಬಾಕ್ಸ್‌ ಮೇಲೆ ಬಳಸಲಾಗಿದೆ. ಇನ್ನು ಈ ಸಾಲುಗಳ ಅರ್ಥವನ್ನು ನೋಡುವುದಾದರೆ; ಸರ್ವೇ ಭವಂತು ಸುಖಿನಃ ಅಂದರೆ ಎಲ್ಲರಿಗೂ ಸುಖವಿರಲಿ ಎಂಬುವುದಾಗಿದೆ. ಇನ್ನು ಸರ್ವೇ ಸಂತು ನಿರಾಮಯಾಃ ಎಂದರೆ ಎಲ್ಲರೂ ಆರೋಗ್ಯವಿರಲಿ ಅಥವಾ ರೋಗ ರಹಿತವಾಗಿರಲಿ ಎಂಬುವುದಾಗಿದೆ.

ಕೋಳಿ ಮಾಂಸ, ಮೊಟ್ಟೆ ಮಾರಾಟಕ್ಕೆ ನಿಷೇಧ

ಸರ್ವೇ ಭದ್ರಾಣಿ ಪಶ್ಯಂತು ಎಂದರೆ ಎಲ್ಲರೂ ಒಳ್ಳೆಯದನ್ನೇ ಕಾಣಲಿ, ಮಾ ಕಶ್ಚಿತ್ ದುಃಖ ಭಾಗ್ಭವೇತ್ ಅಂದರೆ ದುಃಖ ಬಾರದಿರಲಿ ಎಂಬುವುದು ಅರ್ಥವಾಗಿದೆ. ಒಟ್ಟಾರೆ ಕೊರೊನಾ ಲಸಿಕೆ ಇರುವ ಬಾಕ್ಸ್‌ ಮೇಲಿನ ಸರ್ವೇ ಸಂತು ನಿರಾಮಯಾಃ ಎಂದರೆ ಎಲ್ಲರೂ ಆರೋಗ್ಯವಿರಲಿ ಅಥವಾ ರೋಗ ರಹಿತವಾಗಿರಲಿ ಎಂಬುವುದಾಗಿದೆ. ಹೀಗಾಗಿ ಕೊರೊನಾ ಲಸಿಕೆ ಮೂಲಕ ಎಲ್ಲರೂ ರೋಗ ರಹಿತರಾಗಿ ಎನ್ನುವುದೇ ಬಾಕ್ಸ್ ಮೇಲಿನ ಶ್ಲೋಕದ ಅರ್ಥವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ