ಆ್ಯಪ್ನಗರ

ಕಾಶ್ಮೀರ ಕಣಿವೆಯಲ್ಲಿಸಹಜ ಸ್ಥಿತಿಗೆ ಸುಪ್ರೀಂ ಸೂಚನೆ

ಇದುವರೆಗೂ ರಾಜ್ಯದಲ್ಲಿಸಹಜ ಸ್ಥಿತಿ ಮರುಸ್ಥಾಪನೆಗೆ ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್‌ ಸಲ್ಲಿಸುವಂತೆಯೂ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ಪೀಠ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರಿಗೆ ಸೂಚಿಸಿದೆ.

PTI 17 Sep 2019, 5:00 am
ಹೊಸದಿಲ್ಲಿ: ಕಾಶ್ಮೀರ ಕಣಿವೆಯಲ್ಲಿಸಾಧ್ಯವಾದಷ್ಟು ಬೇಗ ಸಹಜ ಸ್ಥಿತಿ ಮರುಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರ ಹಾಗೂ ಜಮ್ಮು-ಕಾಶ್ಮೀರದ ಆಡಳಿತಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ. ಆದರೆ, ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿರಾಜಿಯಾಗದೆ, ಆಯ್ಕೆ ಆಧರಿತವಾಗಿ ತೀರ್ಮಾನ ಕೈಗೊಳ್ಳುವಂತೆ ನ್ಯಾಯಾಲಯ ಕಿವಿಮಾತು ಹೇಳಿದೆ.
Vijaya Karnataka Web supreme


ಇದುವರೆಗೂ ರಾಜ್ಯದಲ್ಲಿಸಹಜ ಸ್ಥಿತಿ ಮರುಸ್ಥಾಪನೆಗೆ ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್‌ ಸಲ್ಲಿಸುವಂತೆಯೂ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ಪೀಠ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರಿಗೆ ಸೂಚಿಸಿದೆ. ಸಹಜ ಸ್ಥಿತಿ ಮರುಸ್ಥಾಪನೆಗೆ ಅಲ್ಲಿನ ಆಡಳಿತವು ಕೈಗೊಂಡಿರುವ ಕ್ರಮಗಳ ಬಗ್ಗೆ ಅಟಾರ್ನಿ ಜನರಲ್‌ ನ್ಯಾಯಾಲಯಕ್ಕೆ ಸೋಮವಾರ ಮಾಹಿತಿ ನೀಡಿದರಾದರೂ, ಮತ್ತಷ್ಟು ವಿವರವಾಗಿ ಲಿಖಿತ ರೂಪದಲ್ಲಿಸಲ್ಲಿಸುವಂತೆ ಕೋರ್ಟ್‌ ಹೇಳಿತು. ಕಾಶ್ಮೀರ ಕಣಿವೆಯಲ್ಲಿಮೊಬೈಲ್‌ ಸಂಪರ್ಕ ನಿರ್ಬಂಧದ ಬಗ್ಗೆ ಪ್ರಸ್ತಾಪಿಸಿದಾಗ, ಇಂತಹ ವಿಚಾರಗಳನ್ನು ಅಲ್ಲಿನ ಹೈಕೋರ್ಟ್‌ ನೋಡಿಕೊಳ್ಳಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ''ಇಂದಿಗೂ ಪರಿಸ್ಥಿತಿ ಹಾಗೆಯೇ ಇದೆಯೇ? ಕೆಲವೊಂದು ಸ್ಥಳೀಯ ವಿಚಾರಗಳಾದರೆ, ಜಮ್ಮು-ಕಾಶ್ಮೀರ ಹೈಕೋರ್ಟ್‌ ಅವುಗಳನ್ನು ಬಗೆಹರಿಸುವುದು ಉತ್ತಮ. ಅಲ್ಲಿನ ಪರಿಸ್ಥಿತಿಯ ಬಗ್ಗೆ ರಾಜ್ಯದ ಹೈಕೋರ್ಟ್‌ಗಳಿಗೆ ಉತ್ತಮ ಅರಿವಿರುತ್ತದೆ,'' ಎಂದು ನ್ಯಾಯಪೀಠ ಪೀಠ ಹೇಳಿತು.

ಕಾಶ್ಮೀರ್‌ ಟೈಮ್ಸ್‌ ಸಂಪಾದಕರಾದ ಅನುರಾಧಾ ಭಾಸಿನ್‌ ಅವರು ಜಮ್ಮು-ಕಾಶ್ಮೀರದಲ್ಲಿದೂರವಾಣಿ, ಅಂತರ್ಜಾಲ, ಸಾರ್ವಜನಿಕ ಸಾರಿಗೆ ಮುಂತಾದ ಸೇವೆಗಳ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಇವುಗಳ ತೆರವಿಗೆ ತರ್ತು ಕ್ರಮಕ್ಕೆ ಸೂಚಿಸಬೇಕು ಎಂದು ದೂರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿಪತ್ರಕರ್ತರ ಮೇಲೆ ವಿಧಿಸಲಾಗಿರುವ ನಿರ್ಬಂಧಗಳ ತೆರವಿಗೂ ಅವರು ಮನವಿ ಮಾಡಿದ್ದಾರೆ.

ಈ ಮಧ್ಯೆ, ಜಮ್ಮು-ಕಾಶ್ಮೀರ ಆಡಳಿತದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ''ಆ.5ರಿಂದ ಈಚೆಗೆ ಒಂದೇ ಒಂದು ಗುಂಡು ಸಹ ಸಿಡಿಸಿಲ್ಲ, ಯಾವುದೇ ಜೀವಹಾನಿಯಾಗಿಲ್ಲ. 93 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನಿರ್ಬಂಧ ಸಡಿಸಲಾಗಿದೆ ಹಾಗೂ ಲಡಾಖ್‌ನಲ್ಲಿಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಆಸ್ಪತ್ರೆಗಳು, ಔಷಧ ಅಂಗಡಿಗಳು ಮತ್ತು ಸಾರ್ವಜನಿಕ ವಿತರಣಾ ಕೇಂದ್ರಗಳು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿವೆ,'' ಮಾಹಿತಿ ನೀಡಿದರು.

ಮತ್ತೊಂದು ಅರ್ಜಿ ಸಲ್ಲಿಕೆ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮತ್ತು ರಾಜ್ಯದಲ್ಲಿಜಾರಿಗೊಳಿಸಲಾಗಿರುವ ರಾಜ್ಯಪಾಲರ ಆಡಳಿತವನ್ನು ಪ್ರಶ್ನಿಸಿ ಜಮ್ಮು-ಕಾಶ್ಮೀರ ಪೀಪಲ್ಸ್‌ ಕಾನ್ಫರೆನ್ಸ್‌ (ಜೆಕೆಪಿಸಿ) ಪಕ್ಷವು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠವು, ಈ ಅರ್ಜಿಯನ್ನು ಈಗಾಗಲೇ ಈ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳ ಜತೆಗೆ ಸೇರ್ಪಡೆಗೊಳಿಸಿದೆ. ಪಂಚ ಸದಸ್ಯರ ಸಂವಿಧಾನ ಪೀಠವು ಈ ಎಲ್ಲಾಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಸೋಮವಾರ ಸಲ್ಲಿಕೆಯಾದ ಅರ್ಜಿಯನ್ನು ಪ್ರತ್ಯೇಕವಾಗಿ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ