ಆ್ಯಪ್ನಗರ

ಪೆಲೆಟ್‌ ಗನ್‌ ಬದಲಿ ವ್ಯವಸ್ಥೆಗೆ 2 ವಾರದ ಗಡುವು

ಗಲಭೆಯನ್ನು ಹತೋಟಿಗೆ ತರಲು ಪೊಲೀಸರು ಬಳಸುವ ಪೆಲೆಟ್‌ ಗನ್‌ ಬದಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಟೈಮ್ಸ್ ಆಫ್ ಇಂಡಿಯಾ 27 Mar 2017, 6:23 pm
ಹೊಸದಿಲ್ಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಡೆಯುವ ಗಲಭೆಯನ್ನು ಹತೋಟಿ ತರಲು ಪೊಲೀಸರು ಬಳಸುವ ಪೆಲೆಟ್‌ ಗನ್‌ ಬದಲು ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.
Vijaya Karnataka Web sc gives centre two weeks to present alternatives to pellet guns in jk
ಪೆಲೆಟ್‌ ಗನ್‌ ಬದಲಿ ವ್ಯವಸ್ಥೆಗೆ 2 ವಾರದ ಗಡುವು


ಪೆಲೆಟ್‌ ಗನ್‌ ಬಳಸದಂತೆ ಕಾಶ್ಮೀರ ಹೈಕೋರ್ಟ್ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಸೋಮವಾರದಂದು ಕೇಂದ್ರ ಸರಕಾರಕ್ಕೆ, ಮುಂದಿನ ಎರಡು ವಾರದಲ್ಲಿ ಪೆಲೆಟ್‌ ಗನ್‌ ಬದಲೀ ವ್ಯವಸ್ಥೆಯನ್ನು ಮಾಡಿ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಕಾಶ್ಮೀರದಲ್ಲಿ ನಡೆಯುವ ಗಲಭೆ ವೇಳೆ ಆರ್ಮಿ ಹಾಗೂ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಲು ಪೆಲೆಟ್‌ ಗನ್‌ ಬಳಸುತ್ತಾರೆ. ಇದರಿಂದ ಹಲವಾರು ಮಂದಿ ಜೀವ ಕಳೆದುಕೊಂಡರೆ, ಮತ್ತೆ ಕೆಲವರ ಕಣ್ಣು ನ್ಯೂನತೆ ಕಂಡಿವೆ. ಹೀಗಾಗಿ ಈ ಗನ್‌ಗಳ ಬಳಕೆ ನಿರ್ಬಂಧಿಸುವಂತೆ ಕೋರಿ ಕಾಶ್ಮೀರ ಹೈಕೋರ್ಟ್ ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ಪರಿಶೀಲಿಸಿದ ನ್ಯಾಯಾಲಯ, ಏ. 10ರೊಳಗೆ ಪೆಲೆಟ್‌ ಗನ್‌ ಬದಲೀ ವ್ಯವಸ್ಥೆಯನ್ನು ಜಾರಿಗೊಳಿಸಿ ಎಂದು ಹೇಳಿದೆ. ವಾದ ಪ್ರತಿವಾದದ ವೇಳೆ ಕೇಂದ್ರವನ್ನು ಪ್ರತಿನಿದಿಸಿದ್ದ ಅಟರ್ನಿ ಜನರಲ್‌ ಮುಕುಲ್‌ ರೋಹ್ಟಗಿ, ಪೆಲೆಟ್‌ ಗನ್‌ ಬಳಸಲು ಸ್ಥಳೀಯ ನ್ಯಾಯಾಧೀಶರ ಅಥವಾ ಹಿರಿಯ ಪೊಲೀಸ್‌ ಅಧಿಕಾರಿಯ ಅನುಮತಿ ಬೇಕು. ಅಲ್ಲದೇ ತೀರಾ ಗಂಭೀರ ಸಮಯದಲ್ಲಿ ಮಾತ್ರ ಬಳಸುವುದಾಗಿ'' ಹೇಳಿದ್ದಾರೆ

ಈ ಹಿಂದೆ ಡಿಸೆಂಬರ್‌ನಲ್ಲಿ ಸುಪ್ರೀಂ, ಗಲಭೆ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿದರೆ ಮಾತ್ರಾ ಪೆಲೆಟ್‌ ಗನ್‌ ಬಳಸುವಂತೆ ಹೇಳಿತ್ತು. ಆದರೆ ಇದಕ್ಕೂ ಮುನ್ನ ವಕೀಲರ ಸಂಘ ಜಮ್ಮು ಕಾಶ್ಮೀರ ಹೈಕೋರ್ಟ್‌ನಲ್ಲಿ ಪೆಲೆಟ್‌ ಗನ್‌ ನಿರ್ಬಂಧ ಹೇರುವಂತೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಪರಿಶೀಲಿಸಿದ್ದ ಜಮ್ಮು ಕಾಶ್ಮೀರ ನ್ಯಾಯಾಲಯ, ರಾಜ್ಯದ ರಸ್ತೆಗಳಲ್ಲಿ ಎಲ್ಲಿಯ ತನಕ ಪ್ರತಿಭಟನೆಗಳು ಹತೋಟಿಗೆ ಬರುವುದಿಲ್ಲವೋ ಅಲ್ಲಿಯ ತನಕ ಪೆಲೆಟ್‌ ಗನ್‌ಗಳ ಮೇಲೆ ನಿರ್ಬಂಧವಿಲ್ಲ ಎಂದು ಹೇಳಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ