ಆ್ಯಪ್ನಗರ

‘ದೋಸೆ ಕಿಂಗ್‌’ ಶರಣಾಗತಿ

ರಾಜಗೋಪಾಲ್‌ ಅವರು ಜುಲೈ 7ರಂದೇ ಶರಣಾಗಬೇಕಿತ್ತು. ಅದೇದಿನ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅನಾರೋಗ್ಯದ ಕಾರಣ ನೀಡಿ ಶರಣಾಗಲು ಕಾಲಾವಕಾಶ ಕೋರಿದ್ದರು.

PTI 10 Jul 2019, 5:00 am
ಚೆನ್ನೈ: ಜೀವಾವಧಿ ಶಿಕ್ಷೆ ಜಾರಿ ಮುಂದೂಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ 'ದೋಸೆ ಕಿಂಗ್‌' ಖ್ಯಾತಿಯ ರೆಸ್ಟೊರೆಂಟ್‌ ಉದ್ಯಮಿ ಪಿ.ರಾಜಗೋಪಾಲ್‌ ಅವರು ಮಂಗಳವಾರ ಸಂಜೆ ನಗರದ ಸೆಷೆನ್ಸ್‌ ಕೋರ್ಟ್‌ನಲ್ಲಿ ಶರಣಾದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಅವರನ್ನು ಆ್ಯಂಬುಲೆನ್ಸ್‌ ಮೂಲಕ ನಾಲ್ಕನೇ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಲಯಕ್ಕೆ ಕರೆ ತರಲಾಯಿತು. ಬಳಿಕ ಅವರನ್ನು ಪುಳಲ್‌ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.
Vijaya Karnataka Web rajagopal


ರಾಜಗೋಪಾಲ್‌ ಅವರು ಜುಲೈ 7ರಂದೇ ಶರಣಾಗಬೇಕಿತ್ತು. ಅದೇದಿನ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅನಾರೋಗ್ಯದ ಕಾರಣ ನೀಡಿ ಶರಣಾಗಲು ಕಾಲಾವಕಾಶ ಕೋರಿದ್ದರು. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ವಿ.ರಮಣನ್‌ ನೇತೃತ್ವದ ಪೀಠವು, ''ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಸಂದರ್ಭ ಅನಾರೋಗ್ಯದ ಬಗ್ಗೆ ಚಕಾರ ಎತ್ತದ ನೀವು ಈಗ ಆ ಬಗ್ಗೆ ಪ್ರಸ್ತಾಪ ಮಾಡಿದ್ದು ಯಾಕೆ? ಇಂತಹ ಕೋರಿಕೆಯನ್ನು ಮನ್ನಿಸಲಾಗದು,'' ಎಂದು ಹೇಳಿತು.
2001ರ ಅಕ್ಟೋಬರ್‌ನಲ್ಲಿ ತಮ್ಮ ಒಡೆತನದ 'ಸರವಣ ಭವನ'ದ ಉದ್ಯೋಗಿ ಶಾಂತಕುಮಾರ್‌ ಅವರ ಪತ್ನಿಯನ್ನು ಮದುವೆಯಾಗಲು ಬಯಸಿದ್ದ ರಾಜಗೋಪಾಲ್‌, ಅದಕ್ಕೆ ಅಡ್ಡಿಯಾಗಿದ್ದ ಉದ್ಯೋಗಿಯನ್ನು ಬರ್ಬರವಾಗಿ ಹತ್ಯೆ ಮಾಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ