ಆ್ಯಪ್ನಗರ

ತಿಮ್ಮಪ್ಪನಿಗೆ ಎಸ್ಸಿ , ಎಸ್ಟಿ ಪುರೋಹಿತರು

ಶೀಘ್ರದಲ್ಲಿಯೇ ಇವರು ಜವಾಬ್ದಾರಿಗೆ ನಿಯೋಜನೆಗೊಳ್ಳಲಿದ್ದಾರೆ ಎಂದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ (ಟಿಟಿಡಿ) ತಿಳಿಸಿದೆ

Vijaya Karnataka 9 Dec 2017, 1:08 pm
ಅಮರಾವತಿ: ತಿರುಪತಿ ತಿಮ್ಮಪ್ಪನ ಪೂಜಾ ಕೈಂಕರ್ಯ ನೆರವೇರಿಸಲು ಇದೇ ಮೊದಲ ಬಾರಿ ತರಬೇತಿ ಹೊಂದಿದ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ಪುರೋಹಿತರ ತಂಡ ಸಜ್ಜುಗೊಂಡಿದೆ. ಶೀಘ್ರದಲ್ಲಿಯೇ ಇವರು ಜವಾಬ್ದಾರಿಗೆ ನಿಯೋಜನೆಗೊಳ್ಳಲಿದ್ದಾರೆ ಎಂದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ (ಟಿಟಿಡಿ) ತಿಳಿಸಿದೆ.
Vijaya Karnataka Web sc st purohit in tirupati
ತಿಮ್ಮಪ್ಪನಿಗೆ ಎಸ್ಸಿ , ಎಸ್ಟಿ ಪುರೋಹಿತರು


ಟಿಡಿಡಿಯ ಪ್ರಾಯೋಗಿಕ ಯೋಜನೆ ಭಾಗವಾಗಿ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಸೇರಿದ 200 ಯುವಕರಿಗೆ ಮೂರು ತಿಂಗಳ ಕಠಿಣ ತರಬೇತಿ ನೀಡಲಾಗಿದ್ದು ಅವರೀಗ ಸಂಪೂರ್ಣ ಸಜ್ಜುಗೊಂಡಿದ್ದಾರೆ. ಶೀಘ್ರವೇ ಇವರು ಪೂಜಾ ಕೈಂಕರ್ಯಗಳಿಗೆ ನೇಮಕಗೊಳ್ಳಲಿದ್ದಾರೆ ಎಂದು ಟಿಟಿಡಿ ಕಾರ್ಯನಿರ್ವಹಕ ಅಧಿಕಾರಿ ಅನಿಲ್‌ ಸಿಂಘಲ್‌ ಹೇಳಿದರು.

ವಿಶ್ವದ ಶ್ರೀಮಂತ ದೇವಸ್ಥಾನ ಎನಿಸಿರುವ ತಿರುಪತಿ ವೆಂಕಟೇಶ್ವರನ ಸೇವೆಗೆ ನಡೆಯುವ ಪುರೋಹಿತರ ನೇಮಕಾತಿ ಪ್ರಕ್ರಿಯೆಯಲ್ಲಿಬ್ರಾಹ್ಮಣೇತರರಿಗೆ ಅವಕಾಶ ನೀಡುತ್ತಿರುವುದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ