ಆ್ಯಪ್ನಗರ

ದೇಶದ್ರೋಹ ಪ್ರಕರಣ ದಾಖಲಿಸಿ ಸೇಡು ತೀರಿಸಿಕೊಳ್ಳುವ ಟ್ರೆಂಡ್‌ ಹೆಚ್ಚುತ್ತಿದೆ; ಸುಪ್ರೀಂ ಕೋರ್ಟ್‌ ಆತಂಕ

ಸರಕಾರಗಳು ಬದಲಾದ ತಕ್ಷಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಅಧಿಕಾರಿಗಳ ವಿರುದ್ಧ ದೇಶದ್ರೋಹದಂತಹ ಪ್ರಕರಣ ದಾಖಲಿಸುವುದು ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ವಿಚಾರಣೆ ವೇಳೆ ಇಂತಹದ್ದೊಂದು ಅಸಮಾಧಾನವನ್ನು ಹೊರ ಹಾಕಿದೆ.

Vijaya Karnataka 27 Aug 2021, 6:42 am
ಹೊಸದಿಲ್ಲಿ: ಆಡಳಿತ ವ್ಯವಸ್ಥೆ ಬದಲಾದ ಬಳಿಕ ತಮಗೆ ಆಗದವರ ವಿರುದ್ಧ ದೇಶದ್ರೋಹದಂತಹ ಗಂಭೀರ ಪ್ರಕರಣಗಳನ್ನು ದಾಖಲಿಸಿ ಸೇಡು ತೀರಿಸಿಕೊಳ್ಳುವ ಟ್ರೆಂಡ್‌ ಹೆಚ್ಚುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಬೇಸರ ವ್ಯಕ್ತಪಡಿಸಿದೆ.
Vijaya Karnataka Web Supreme Court gets nine new judges


ದೇಶದ್ರೋಹ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಅಮಾನತುಗೊಂಡಿರುವ ಛತ್ತೀಸ್‌ಗಢ ಪೊಲೀಸ್‌ ಅಕಾಡೆಮಿ ನಿರ್ದೇಶಕ ಗುರ್ಜಿಂದರ್‌ ಪಾಲ್‌ ಸಿಂಗ್‌ ಅವರಿಗೆ ಬಂಧನದಿಂದ ರಕ್ಷಣೆ ನೀಡಿದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ವೇಳೆ ಇಂತಹದ್ದೊಂದು ಅಸಮಾಧಾನವನ್ನು ಹೊರ ಹಾಕಿದೆ. ಸರಕಾರಗಳು ಬದಲಾದ ತಕ್ಷಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಅಧಿಕಾರಿಗಳ ವಿರುದ್ಧ ದೇಶದ್ರೋಹದಂತಹ ಪ್ರಕರಣ ದಾಖಲಿಸುವುದು ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.
ಸಂಬಳ ಕೇಳಿದ್ದಕ್ಕೆ 16 ಮಂದಿಯನ್ನು ವಜಾ ಮಾಡಿದ ಬಿ.ಆರ್‌ ಶೆಟ್ಟಿ ನಡೆಸುತ್ತಿರುವ ಉಡುಪಿಯ ಆಸ್ಪತ್ರೆ!
1994ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಗುರ್ಜಿಂದರ್‌ ಪಾಲ್‌ ಸಿಂಗ್‌, ಈ ಮೊದಲು ಬಿಜೆಪಿ ಆಡಳಿತಾವಧಿಯಲ್ಲಿ ರಾಯಪುರ, ದುರ್ಗ್‌ ಮತ್ತು ಬಿಲಾಸ್ಪುರ ಐಜಿ ಆಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಸರಕಾರದ ನಂಬಿಕಸ್ಥ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ನಂತರ ಕಾಂಗ್ರೆಸ್‌ ಆಡಳಿತ ಸೂತ್ರ ಹಿಡಿದ ಬಳಿಕ ಇಕ್ಕಟ್ಟಿಗೆ ಸಿಲುಕಿದ್ದರು. ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ದಾಳಿ ಮಾಡಿಸಲಾಗಿತ್ತು. ನಂತರ ಸರಕಾರದ ವಿರುದ್ಧ ಪಿತೂರಿ ನಡೆಸಿದ ಆರೋಪದಡಿ ದೇಶದ್ರೋಹ ಪ್ರಕರಣ ಕೂಡ ದಾಖಲಿಲಾಗಿತ್ತು.
ಸೈಬರ್‌ ಖದೀಮರ ಬೆನ್ನತ್ತಿ ₹55.22 ಕೋಟಿ ವಸೂಲಿ; ನೀವು ವಂಚನೆಗೊಳಗಾಗಿದ್ರೆ ಇನ್ಮುಂದೆ ಚಿಂತೆ ಬೇಡ!
ಹಲವು ಉನ್ನತ ಸ್ಥಾನಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ಗರ್ಜಿಂದರ್‌ ಪಾಲ್‌ ವಿರುದ್ಧ ಈಗ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಇದು ತೀರಾ ಬೇಸರದ ವಿಷಯ. ಸಣ್ಣಪುಟ್ಟದ್ದಕ್ಕೆಲ್ಲ ದೇಶದ್ರೋಹದಂತ ಗಂಭೀರ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ, ಇನ್ನೂ ನಾಲ್ಕು ವಾರಗಳ ಕಾಲ ಪಾಲ್‌ ವಿರುದ್ಧ ಯಾವುದೇ ಬಂಧನದ ಕ್ರಮ ಕೈಗೊಳ್ಳದಿರುವಂತೆ ಸರಕಾರಕ್ಕೆ ಆದೇಶ ನೀಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ