ಆ್ಯಪ್ನಗರ

ವಾರದಲ್ಲಿ 5 ದಿನ ಅಯೋಧ್ಯೆ ವಿಚಾರಣೆ ನಿಶ್ಚಿತ

ಸುಪ್ರೀಂಕೋರ್ಟ್‌ನಲ್ಲಿ ಆ.6ರಿಂದ ಪ್ರಕರಣದ ನಿತ್ಯ ವಿಚಾರಣೆ ನಡೆಯುತ್ತಿದೆ.

PTI 10 Aug 2019, 5:00 am
ಹೊಸದಿಲ್ಲಿ: ವಾರದಲ್ಲಿ ಐದು ದಿನಗಳು ನಿತ್ಯ ಅಯೋಧ್ಯೆ ರಾಮಜನ್ಮಭೂಮಿ ವಿವಾದ ಪ್ರಕರಣದ ವಿಚಾರಣೆಯನ್ನು ನಡೆಸುವುದು ನಿಶ್ಚಿತ ಎಂದು ಶುಕ್ರವಾರ ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ.
Vijaya Karnataka Web supremecourt1-ke4G--621x414@LiveMint

ಅಖಿಲ ಭಾರತ ಸುನ್ನಿ ವಕ್ಫ್ ಮಂಡಳಿ ಪರವಾಗಿ ಹಿರಿಯ ವಕೀಲ ರಾಜೀವ್‌ ಧವನ್‌, ''ವಾರದಲ್ಲಿ ಐದು ದಿನ ನಿತ್ಯ ವಿಚಾರಣೆ ತುರ್ತು ಅಗತ್ಯತೆ ಒಪ್ಪಲು ಆಗುವುದಿಲ್ಲ. ಕೋರ್ಟ್‌ಗೆ ನಾವು ಹಾಜರಾಗುವುದು ಕಷ್ಟವಾಗುತ್ತದೆ. ಇದು ಅಮಾನವೀಯ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಪ್ರತಿಕ್ರಿಯಿಸಿದ್ದು, ನಿತ್ಯ ವಿಚಾರಣೆ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್‌ನಲ್ಲಿ ಆ.6ರಿಂದ ಪ್ರಕರಣದ ನಿತ್ಯ ವಿಚಾರಣೆ ನಡೆಯುತ್ತಿದೆ.
ಮಂಗಳವಾರದಿಂದ ಮತ್ತೆ ವಿಚಾರಣೆ: ಸೋಮವಾರ ಈದ್‌ ಅಂಗವಾಗಿ ವಿಚಾರಣೆಗೆ ರಜೆ ಇದ್ದು, ಮಂಗಳವಾರದಿಂದ ಸಿಜೆಐ ನೇತೃತ್ವದ ಪೀಠ ಪ್ರಕರಣದ ವಿಚಾರಣೆ ಮುಂದುವರಿಸಲಿದೆ. ಸಾಧಾರಣವಾಗಿ ಶುಕ್ರವಾರ ಮತ್ತು ಸೋಮವಾರಗಳನ್ನು ಹೊಸ ಪ್ರಕರಣಗಳ ವಿಚಾರಣೆಗೆ ಮೀಸಲಿರಿಸುವ ಪದ್ಧತಿ ಇದೆ. ಆದರೆ ಪದ್ಧತಿ ಬದಿಗೊತ್ತಿದ ಕೋರ್ಟ್‌ ಶುಕ್ರವಾರವೂ ಮಂದಿರ ಪ್ರಕರಣದ ವಿಚಾರಣೆ ನಡೆಸಿತು.
ವಾರದ ಮಧ್ಯೆ ಬಿಡುವು ಕೊಡೋಣ
ನಿತ್ಯ ವಿಚಾರಣೆಯಿಂದಾಗಿ ಪ್ರಕರಣ ಸಂಬಂಧ ವಾದಕ್ಕೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲು ತೊಡಕಾಗಲಿದೆ ಎಂದು ವಕೀಲ ಧವನ್‌ ಸಿಜೆಐ ನೇತೃತ್ವದ ಪೀಠಕ್ಕೆ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕೋರ್ಟ್‌, ''ಸರಿ ವಾರದ ಮಧ್ಯೆ ಯಾವಾಗಲಾದರೂ ವಿಚಾರಣೆಗೆ ಅಲ್ಪ ವಿರಾಮ ನೀಡೋಣ. ನಿಮ್ಮ ಸಿದ್ಧತೆಗೆ ಅಗತ್ಯವಾದ ಕಾಲಾವಕಾಶ ಒದಗಿಸಲಾಗುವುದು ' ಎಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ