ಆ್ಯಪ್ನಗರ

ಗುರುಗ್ರಾಮ್‌: ಬರೋಬ್ಬರಿ 23,000 ರೂ ದಂಡ ತೆತ್ತ ಸ್ಕೂಟಿ ಚಾಲಕ

ಪರಿಷ್ಕೃತ ಮೋಟಾರ್ ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ ಸಂಚಾರ ನಿಯಮಗಳ ಉಲ್ಲಂಘನೆಗೆ ಬೀಳುವ ದಂಡದ ಪ್ರಮಾಣವೂ ಭಾರೀ ಏರಿಕೆ ಕಂಡಿದೆ. ಗುರುಗ್ರಾಮದ ಸ್ಕೂಟಿ ಚಾಲಕನೊಬ್ಬ ಹಲವು ನಿಯಮಗಳ ಉಲ್ಲಂಘನೆಗಾಗಿ ಒಂದೆ ದಿನ ಒಟ್ಟು 23,000 ರೂ.ಗಳ ಬೃಹತ್ ದಂಡ ತೆತ್ತ ಘಟನೆ ಭಾನುವಾರ ನಡೆದಿದೆ.

Times Now 3 Sep 2019, 4:13 pm
ಗುರುಗ್ರಾಮ್‌ (ಹರ್ಯಾಣ): ಪರಿಷ್ಕೃತ ಮೋಟಾರ್ ವಾಹನ ಕಾಯ್ದೆ ದಿಲ್ಲಿಯ ಎನ್‌ಸಿಆರ್‌ ಪ್ರದೇಶದಲ್ಲಿ ಭಾನುವಾರ ಜಾರಿಗೆ ಬಂದ ಬಳಿಕ ಗುರುಗ್ರಾಮ ಪಟ್ಟಣದ ದ್ವಿಚಕ್ರ ವಾಹನ ಸವಾರರೊಬ್ಬರು 23,000 ರೂ.ಗಳ ದಂಡ ತೆತ್ತಿದ್ದಾರೆ.
Vijaya Karnataka Web Delhi Traffic police


ಪೂರ್ವ ದಿಲ್ಲಿಯ ಗೀತಾ ಕಾಲನಿಯ ನಿವಾಸಿ ದಿನೇಶ್ ಮದನ್‌ ಎಂಬ ವ್ಯಕ್ತಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 23,000 ರೂ.ಗಳ ಬರೋಬ್ಬರಿ ದಂಡದ ಚಲನ್‌ ಅನ್ನು ಪಡೆದುಕೊಂಡಿದ್ದಾರೆ. ಪಶ್ಚಿಮ ವಲಯದ ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸ್ಕೂಟಿ ಮಾಲೀಕರಾದ ದಿನೇಶ್ ಮದನ್ ಡ್ರೈವಿಂಗ್ ಲೈಸೆನ್ಸ್‌, ಆರ್‌ಸಿ, ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌, ಮಾಲಿನ್ಯ ಪ್ರಮಾಣಪತ್ರಗಳನ್ನು ಹೊಂದಿರಲಿಲ್ಲ, ಅಲ್ಲದೆ ಹೆಲ್ಮೆಟ್‌ ಧರಿಸಿರಲಿಲ್ಲ. ಇವಿಷ್ಟೂ ಪ್ರಕರಣಗಳು ಸೇರಿ ಒಟ್ಟು 23,000 ರೂ.ಗಳ ಬೃಹತ್ ದಂಡವನ್ನು ದಿನೇಶ್‌ ತೆತ್ತಿದ್ದಾರೆ.

ಚಲನ್‌ ವಿವರ ಹೀಗಿದೆ ನೋಡಿ:
ಡ್ರೈವಿಂಗ್ ಲೈಸೆನ್ಸ್ ರಹಿತ ಚಾಲನೆ- 5,000 ರೂ
ನೋಂದಣಿ ಪ್ರಮಾಣಪತ್ರ (ಆರ್‌ಸಿ) ಇಲ್ಲದೆ ಚಾಲನೆ- 2,000 ರೂ.
ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌ ಇಲ್ಲದೆ ಚಾಲನೆ- 2,000 ರೂ.
ಮಾಲಿನ್ಯ ಪ್ರಮಾಣಪತ್ರದ ಉಲ್ಲಂಘನೆ- 10,000 ರೂ.
ಹೆಲ್ಮೆಟ್‌ ರಹಿತ ಚಾಲನೆ- 1,000 ರೂ.
ಒಟ್ಟು: 23,000 ರೂ.


ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ ಒಂದೇ ದಿನದಲ್ಲಿ ದಿಲ್ಲಿ ಪೊಲೀಸರು ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ 3,900 ಚಲನ್‌ಗಳನ್ನು ನೀಡಿದ್ದಾರೆ. ಇವುಗಳ ಪೈಕಿ 45 ಪ್ರಕರಣಗಳು ಮದ್ಯಪಾನ ಮಾಡಿ ಚಾಲನೆ ಹಾಗೂ 557 ಪ್ರಕರಣಗಳು ಅಪಾಯಕಾರಿ ಚಾಲನೆ ಎಂದು ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ