ಆ್ಯಪ್ನಗರ

370ನೇ ವಿಧಿ ರದ್ದತಿ ಬಳಿಕ ವಿದೇಶಿ ಪ್ರತಿನಿಧಿಗಳ 2ನೇ ತಂಡ ಜಮ್ಮು-ಕಾಶ್ಮೀರಕ್ಕೆ ಆಗಮನ

370ನೇ ವಿಧಿ ರದ್ದತಿ ನಂತರದ ಸ್ಥಿತಿಗತಿಗಳ ಪರಿಶೀಲನೆಗಾಗಿ ವಿದೇಶಿ ರಾಜತಾಂತ್ರಿಕರ ಎರಡನೇ ತಂಡ ಬುಧವಾರ ಜಮ್ಮು-ಕಾಶ್ಮೀರಕ್ಕೆ ಆಗಮಿಸಿದೆ. ಎರಡು ದಿನಗಳ ಪ್ರವಾಸದಲ್ಲಿ ಇಲ್ಲಿನ ಸ್ಥಿತಿಗತಿಗಳನ್ನು ಖುದ್ದು ಪರಿಶೀಲಿಸಲು ಮುಂದಾಗಿದೆ.

Vijaya Karnataka Web 13 Feb 2020, 9:22 am
ಶ್ರೀನಗರ: 370ನೇ ವಿಧಿ ರದ್ದತಿ ನಂತರದ ಸ್ಥಿತಿಗತಿಗಳ ಪರಿಶೀಲನೆಗಾಗಿ ವಿದೇಶಿ ರಾಜತಾಂತ್ರಿಕರ ಎರಡನೇ ತಂಡ ಬುಧವಾರ ಜಮ್ಮು-ಕಾಶ್ಮೀರಕ್ಕೆ ಆಗಮಿಸಿದೆ.
Vijaya Karnataka Web foreign envoys in jammu and kashmir


20 ದೇಶಗಳ ಪ್ರತಿನಿಧಿಗಳು ತಂಡದಲ್ಲಿದ್ದು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡು ಆರು ತಿಂಗಳ ಬಳಿಕ ಸ್ಥಳೀಯ ಸ್ಥಿತಿಯನ್ನು ಎರಡು ದಿನಗಳ ಪ್ರವಾಸದಲ್ಲಿ ಖುದ್ದು ಪರಿಶೀಲಿಸಲು ಮುಂದಾಗಿದೆ. ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಂಡ ಬಾರಾಮುಲ್ಲಾಕ್ಕೆ ಭೇಟಿ ನೀಡಬೇಕಿತ್ತು. ಹವಾಮಾನ ವೈಪರೀತ್ಯದ ಕಾರಣ ಅಲ್ಲಿಗೆ ತೆರಳದೇ ಶ್ರೀನಗರದಲ್ಲಿಯೇ ಉಳಿದುಕೊಂಡಿತು. ಐರೋಪ್ಯ ಒಕ್ಕೂಟ, ದಕ್ಷಿಣ ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳ ಪ್ರತಿನಿಧಿಗಳು ತಂಡದಲ್ಲಿದ್ದಾರೆ. ''ದಾಲ್‌ ಸರೋವರದಲ್ಲಿ ದೋಣಿ ವಿಹಾರ ನಡೆಸಿ, ಸ್ಥಳೀಯರೊಂದಿಗೆ ಮಾತುಕತೆ ಕೂಡ ನಡೆಸಿದೆವು. ಇಲ್ಲಿನ ಜನರ ಆತಿಥ್ಯ ಸಂತಸ ತಂದಿದೆ,'' ಎಂದು ಅಫಘಾನಿಸ್ತಾನ ರಾಯಭಾರಿ ತಾಹಿರ್‌ ಖಾದ್ರಿ ಹೇಳಿದ್ದಾರೆ.

ಅಮೆರಿಕದ ರಾಯಭಾರಿ ಕೆನ್ನಿಥ್‌ ಜಸ್ಟರ್‌ ಸೇರಿದಂತೆ 15 ವಿದೇಶಿ ಪ್ರತಿನಿಧಿಗಳು ಕಳೆದ ಜನವರಿಯಲ್ಲಿಎರಡು ದಿನಗಳ ಕಣಿವೆ ಪ್ರವಾಸ ಕೈಗೊಂಡಿದ್ದರು.

ಮೋದಿಯಿಂದ ಮಾರಕವಾದ ತಪ್ಪು, ಕಾಶ್ಮೀರಕ್ಕೆ ಶೀಘ್ರ ಸ್ವಾತಂತ್ರ್ಯ: ಪಾಕ್ ಪಿಎಂ ಇಮ್ರಾನ್ ಖಾನ್ ಕಿಡಿ




ಮೂವರು ಯುವಕರು ವಶಕ್ಕೆ: ವಿದೇಶಿ ಪ್ರತಿನಿಧಿಗಳ ಭೇಟಿಯ ವಿರುದ್ಧ ದಾಲ್‌ ಸರೋವರದ ಬಳಿ ಪ್ರತಿಭಟನೆ ನಡೆಸಿದ ಮೂವರು ಸ್ಥಳೀಯರ ಯುವಕರನ್ನು ಜಮ್ಮು-ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ''ಇಂಥ ಭೇಟಿಗಳಿಂದ ಕೇವಲ ಸರಕಾರದ ಹಣ ವ್ಯರ್ಥವಾಗುತ್ತದೆ ಹೊರತು ಕಣಿವೆಗೆ ಉಪಯೋಗವಿಲ್ಲ. ಇದೇ ಹಣವನ್ನು ಸ್ಥಳೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು,'' ಎಂದು ಯುವಕರು ಒತ್ತಾಯಿಸಿದ್ದಾರೆ.

ಜಮ್ಮು ಕಾಶ್ಮೀರ: ಮತ್ತೆ ನಾಲ್ವರು ರಾಜಕಾರಣೆಗಳಿಗೆ ಬಿಡುಗಡೆ ಭಾಗ್ಯ

ಮುಫ್ತಿ ಪುತ್ರಿ ಅಸಮಾಧಾನ: ವಿದೇಶಿ ಪ್ರತಿನಿಧಿಗಳ ಭೇಟಿ ಬಗ್ಗೆ ಟ್ವೀಟ್‌ನಲ್ಲಿಅಸಮಾಧಾನ ಹೊರಹಾಕಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ, '' ರಾಯಭಾರಿಗಳು ಮತ್ತು ಪ್ರತಿನಿಧಿಗಳು ಸ್ಥಳೀಯ ಆಡಳಿತ ಅಧಿಕಾರಿಗಳಿಗೆ ಇಂಟರ್‌ನೆಟ್‌ ಬ್ಯಾನ್‌ ಮತ್ತು ರಾಜಕೀಯ ನಾಯಕರ ಗೃಹಬಂಧನದ ಬಗ್ಗೆಯೂ ಪ್ರಶ್ನಿಸುತ್ತಾರೆ ಎಂದು ಅಪೇಕ್ಷಿಸುತ್ತೇನೆ. ಮೂವರು ಮಾಜಿ ಸಿಎಂಗಳನ್ನು ಅಮಾನವೀಯವಾಗಿ ವಶದಲ್ಲಿಟ್ಟುಕೊಂಡು , ಭದ್ರತಾ ಸಿಬ್ಬಂದಿ ಮೂಲಕ ಆತಂಕ ಸೃಷ್ಟಿಸಲಾಗುತ್ತಿದೆ ,'' ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ