ಆ್ಯಪ್ನಗರ

ಭಯೋತ್ಪಾದಕರ ಗುಪ್ತ ಬಂಕರ್ ಪತ್ತೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಕೊಂಡ ಭದ್ರತಾ ಪಡೆಗಳು!

ಜಮ್ಮು ಮತ್ತು ಕಾಶ್ಮೀರದ ಅವಂತಿಪುರದ ಸಮೀಪದ ಬದ್ರೂ ಬರ್ಸೋ ಅರಣ್ಯ ಪ್ರದೇಶದಲ್ಲಿ ಉಗ್ರರ ಎರಡು ಗುಪ್ತ ಬಂಕರ್‌ಗಳನ್ನು ಪತ್ತೆ ಮಾಡಲಾಗಿದ್ದು, ಅಪಾರ ಪ್ರಮಾಣದ ಶಸ್ತಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Vijaya Karnataka Web 13 Aug 2020, 11:29 am
ಶ್ರೀನಗರ: ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಚ್ಚಿಡಲು ಭಯೋತ್ಪಾದಕರು ಬಳಸುತ್ತಿದ್ದ ಗುಪ್ತ ಬಂಕರ್‌ವೊಂದನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿವೆ.
Vijaya Karnataka Web Hideouts
ಉಗ್ರರ ಗುಪ್ತ ಬಂಕರ್ ಪತ್ತೆ ಹಚ್ಚಿದ ಭದ್ರತಾ ಪಡೆಗಳು


ಇಲ್ಲಿನ ಅವಂತಿಪುರದ ಸಮೀಪದ ಬದ್ರೂ ಬರ್ಸೋ ಅರಣ್ಯ ಪ್ರದೇಶದಲ್ಲಿ ಉಗ್ರರ ಎರಡು ಗುಪ್ತ ಬಂಕರ್‌ಗಳನ್ನು ಪತ್ತೆ ಮಾಡಲಾಗಿದ್ದು, ಅಪಾರ ಪ್ರಮಾಣದ ಶಸ್ತಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭದ್ರತಾ ಪಡೆಗಳ ಪ್ರತ್ಯೇಕ ಬೇಟೆ: ಹಿಜ್ಬುಲ್‌ ಕಮಾಂಡರ್‌, ನಾಲ್ವರು ನಕ್ಸಲರ ಹತ್ಯೆ

ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿದ ಗುಪ್ತ ಬಂಕರ್‌ಗಳಾಗಿದ್ದು, ಮದ್ದು ಗುಂಡುಗಳು ಹಾಗೂ ಬಾಂಬ್ ತಯಾರಿಕೆಗೆ ಬಳಸುವ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

ಈ ಗುಪ್ತ ಬಂಕರ್‌ಗಳ ಪತ್ತೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶಪಡಿಸಿಕೊಂಡಿರುವುದರಿಂದ, ಉಗ್ರರಿಗೆ ಭಾರೀ ಹೊಡೆತ ನೀಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಜಮ್ಮು-ಕಾಶ್ಮೀರ: ಬೆಳ್ಳಂಬೆಳಗ್ಗೆ ಮೂರು ಉಗ್ರರನ್ನ ಹೊಡೆದುರುಳಿಸಿದ ಸೇನೆ, 24 ಗಂಟೆಯಲ್ಲಿ 6 ಉಗ್ರರು ಹತ!

ಸದ್ಯ ಎರಡು ಗುಪ್ತ ಬಂಕರ್‌ಗಳು ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಮತ್ತಷ್ಟು ಗುಪ್ತ ಬಂಕರ್‌ಗಳಿರುವ ಅನುಮಾನ ಕಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಗುಪ್ತ ಬಂಕರ್‌ಗಳ ಶೋಧ ಕಾರ್ಯದಲ್ಲಿ ನಿರತವಾಗಿವೆ.

ಕಣಿವೆಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಗ ಪಡೆದುಕೊಂಡಿದ್ದು, ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಡಲು ಉಗ್ರರು ಗುಪ್ತ ಬಂಕರ್‌ಗಳನ್ನು ನಿರ್ಮಿಸಿರುವುದು ಖಚಿತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ