ಆ್ಯಪ್ನಗರ

ರಾಮ ಮಂದಿರಕ್ಕಾಗಿ ಮತ್ತೆ ದ್ವನಿ ಎತ್ತಿದ ಸಾಧುಗಳು

ಬುಧವಾರ ಹರಿದ್ವಾರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ 'ಮಾರ್ಗದರ್ಶಕ ಮಂಡಳಿ' ಸಭೆಯಲ್ಲಿ ಈ ಸಂಬಂಧ ಆಗ್ರಹ ಕೇಳಿ ಬಂದಿದೆ.

Vijaya Karnataka Web 20 Jun 2019, 5:00 am
ಹರಿದ್ವಾರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಾಧುಗಳು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
Vijaya Karnataka Web 01THTEMPLE


ಬುಧವಾರ ಹರಿದ್ವಾರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ 'ಮಾರ್ಗದರ್ಶಕ ಮಂಡಳಿ' ಸಭೆಯಲ್ಲಿ ಈ ಸಂಬಂಧ ಆಗ್ರಹ ಕೇಳಿ ಬಂದಿದೆ.

''ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಮೋದಿ ಸರಕಾರವು ಮತದಾರರು ನೀಡಿರುವ ಜನಾದೇಶವನ್ನು ಗೌರವಿಸಬೇಕು,'' ಎಂದು ಸಾಧುಗಳು ಆಗ್ರಹಿಸಿದ್ದಾರೆ.

ಲೋಕಸಭೆ ಚುನಾವಣೆಯ ಫಲಿತಾಂಶವು ರಾಷ್ಟ್ರೀಯತೆ, ಹಿಂದುತ್ವ ಮತ್ತು ಅಭಿವೃದ್ಧಿ ರಾಜಕೀಯದ ಜಯವನ್ನು ಸೂಚಿಸುತ್ತದೆ ಎಂದು ಸಾಧುಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ