ಆ್ಯಪ್ನಗರ

ತೆಲಂಗಾಣದ ನಾಲ್ವರು ಕಾಂಗ್ರೆಸ್‌ ಮೇಲ್ಮನೆ ಸದಸ್ಯರು ಟಿಆರ್‌ಎಸ್‌ ಸೇರ್ಪಡೆ

ಎಂ.ಎಸ್‌.ಪ್ರಭಾಕರ ರಾವ್‌, ಟಿ.ಸಂತೋಷ್‌ಕುಮಾರ್‌, ಕೆ.ದಾಮೋದರ ರೆಡ್ಡಿ ಮತ್ತು ಅಕುಲಾ ಲಲಿತಾ ಅವರು ಈ ಕುರಿತು ಸಭಾಪತಿ ಅವರಿಗೆ ಬೆಳಗ್ಗೆ ಪತ್ರ ನೀಡಿ, ತಮ್ಮನ್ನು ಟಿಆರ್‌ಎಸ್‌ ಸದಸ್ಯರೆಂದು ಪರಿಗಣಿಸುವಂತೆ ಮನವಿ ಮಾಡಿದ್ದರು.

Vijaya Karnataka 22 Dec 2018, 5:00 am
ಹೈದರಾಬಾದ್‌: ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದ್ದು, ಪಕ್ಷದ ನಾಲ್ವರು ವಿಧಾನ ಪರಿಷತ್‌ ಸದಸ್ಯರು ಶುಕ್ರವಾರ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿಗೆ ಸೇರ್ಪಡೆಯಾಗಿದ್ದಾರೆ.
Vijaya Karnataka Web kcr


ಎಂ.ಎಸ್‌.ಪ್ರಭಾಕರ ರಾವ್‌, ಟಿ.ಸಂತೋಷ್‌ಕುಮಾರ್‌, ಕೆ.ದಾಮೋದರ ರೆಡ್ಡಿ ಮತ್ತು ಅಕುಲಾ ಲಲಿತಾ ಅವರು ಈ ಕುರಿತು ಸಭಾಪತಿ ಅವರಿಗೆ ಬೆಳಗ್ಗೆ ಪತ್ರ ನೀಡಿ, ತಮ್ಮನ್ನು ಟಿಆರ್‌ಎಸ್‌ ಸದಸ್ಯರೆಂದು ಪರಿಗಣಿಸುವಂತೆ ಮನವಿ ಮಾಡಿದ್ದರು. ಅಲ್ಲದೇ, ತಮಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದರು. 40 ಸದಸ್ಯ ಬದಲ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಆರು ಸದಸ್ಯರನ್ನು ಹೊಂದಿದೆ. ಹೀಗಾಗಿ ನಾಲ್ವರು ಟಿಆರ್‌ಎಸ್‌ ಸೇರ್ಪಡೆಯಾಗುತ್ತಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಸಂಜೆ ಆದೇಶ ಹೊರಡಿಸಿದ ಸಭಾಪತಿ ಕೆ.ಸ್ವಾಮಿಗೌಡ್‌, ಈ ಸದಸ್ಯರನ್ನು ಇನ್ನುಮುಂದೆ ಟಿಆರ್‌ಎಸ್‌ ಸದಸ್ಯರೆಂದು ಪರಿಗಣಿಸುವುದಾಗಿ ತಿಳಿಸಿದ್ದಾರೆ.

ಪಕ್ಷದ ಸದಸ್ಯರು ಪತ್ರ ನೀಡಿದ ವಿಷಯ ತಿಳಿಯುತ್ತಿದ್ದಂತೆಯೇ ಸಭಾಪತಿ ಅವರನ್ನು ಭೇಟಿ ಮಾಡಿದ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎನ್‌.ಉತ್ತಮ್‌ಕುಮಾರ್‌ ರೆಡ್ಡಿ ಮತ್ತು ವಿಧಾನ ಪರಿಷತ್‌ನಲ್ಲಿ ಪಕ್ಷದ ನಾಯಕ ಮೊಹಮದ್‌ ಅಲಿ ಶಬ್ಬೀರ್‌ ಅವರು, ನಾಲ್ವರು ಸದಸ್ಯರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದ್ದರು.

ಮುಂದಿನ ವಾರ ಕೆಸಿಆರ್‌ ಭೇಟಿ:

ಪ್ರಾದೇಶಿಕ ಪಕ್ಷಗಳ ನೆರವಿನೊಂದಿಗೆ ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ಮೈತ್ರಿಕೂಟ ರಚಿಸುವ ಪ್ರಯತ್ನವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರು ತೀವ್ರಗೊಳಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎಸ್ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರನ್ನು ಕೆಸಿಆರ್‌ ಮುಂದಿನ ವಾರ ಭೇಟಿ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ