ಆ್ಯಪ್ನಗರ

ಮಗಳಿಗಾಗಿ ಲವ್‌ಸ್ಟೋರಿ ವೀಕ್ಷಿಸುವ ಶಾರೂಖ್‌

ಬಾಲಿವುಡ್‌ ನಟ ಶಾರೂಖ್‌ ಖಾನ್‌ರಿಗೆ ಪ್ರೇಮಕಥನಗಳಿಗಿಂತ, ಸಾಹಸ ಮತ್ತು ಹಾಸ್ಯ ಪ್ರಧಾನ ಚಿತ್ರಗಳೇ ಇಷ್ಟವಂತೆ, ಆದರೆ ತಾವು ತಮ್ಮ ಮಗಳಿಗಾಗಿ ಲವ್‌ಸ್ಟೋರಿಗಳನ್ನು ವೀಕ್ಷಿಸುವುದಾಗಿ ಹೇಳಿಕೊಂಡಿದ್ದಾರೆ.

ಏಜೆನ್ಸೀಸ್ 28 Jul 2017, 10:33 am

ಮುಂಬಯಿ: ಬಾಲಿವುಡ್‌ ನಟ ಶಾರೂಖ್‌ ಖಾನ್‌ರಿಗೆ ಪ್ರೇಮಕಥನಗಳಿಗಿಂತ, ಸಾಹಸ ಮತ್ತು ಹಾಸ್ಯ ಪ್ರಧಾನ ಚಿತ್ರಗಳೇ ಇಷ್ಟವಂತೆ, ಆದರೆ ತಾವು ತಮ್ಮ ಮಗಳಿಗಾಗಿ ಲವ್‌ಸ್ಟೋರಿಗಳನ್ನು ವೀಕ್ಷಿಸುವುದಾಗಿ ಹೇಳಿಕೊಂಡಿದ್ದಾರೆ. 'ಲವ್‌ಸ್ಟೋರಿಗಳು ನನಗೆ ಇಷ್ಟ, ಆದರೆ ನಾನು ಹೆಚ್ಚು ಸಾಹಸ ಹಾಗೂ ಹಾಸ್ಯ ಪ್ರಧಾನ ಚಿತ್ರಗಳನ್ನೇ ಇಷ್ಟಪಡುತ್ತೇನೆ. ಮಗಳಿಗಾಗಿ ಇತ್ತೀಚೆಗೆ ಸಾಕಷ್ಟು ಲವ್‌ಸ್ಟೋರಿಗಳನ್ನು ನೋಡುತ್ತಿದ್ದೇನೆ. ಅವುಗಳು ತುಂಬಾ ಸುಂದರ ಎನಿಸುತ್ತವೆ,' ಎಂದು ಶಾರೂಖ್‌ ಹೇಳಿದ್ದಾರೆ.

ಅವರ ಮುಂಬರುವ 'ಜಬ್‌ ಹ್ಯಾರಿ ಮೆಟ್‌ ಸೇಜಲ್‌' ಚಿತ್ರದ ಹೊಸ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, 'ಈ ಹಾಡಿನ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಇಮ್ತಿಯಾಜ್‌ ಅಲಿ, ಪ್ರೇಮಕಥನಗಳಲ್ಲಿ ನನ್ನ ನಟನೆಯನ್ನು ಪ್ರಶಂಸಿಸಿದರು. ಜನರು ನಾನು ನಟಿಸುವ ಚಿತ್ರಗಳನ್ನು ಮೆಚ್ಚಿಕೊಳ್ಳುವುದು ನನ್ನ ಅದೃಷ್ಟ. ನನಗೆ ಲವ್‌ಸ್ಟೋರಿಗಳಲ್ಲಿ ನಟಿಸುವುದು ಇಷ್ಟ,' ಎಂದು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ