ಆ್ಯಪ್ನಗರ

'ಕೇಜ್ರಿವಾಲ್ ನೀತಿ ನಪುಂಸಕರ ಹಕ್ಕಿನಂತೆ' ಎಂಬ ಹೇಳಿಕೆ ಹಿಂಪಡೆದು ಕ್ಷಮೆ ಕೇಳಿದ ತರೂರ್..!

ನಿಜವಾಗಲೂ ಅರವಿಂದ್‌ ಕೇಜ್ರಿವಾಲ್‌ ಅವರು ಹೊಣೆಗಾರಿಕೆ ಇಲ್ಲದ ಅಧಿಕಾರ ಬಯಸುತ್ತಿದ್ದಾರೆ. ಅವರ ನಡೆ ಒಂದರ್ಥದಲ್ಲಿ ನಪುಂಸಕರ ಹಕ್ಕಿನಂತಿದೆ ಎಂದು ತರೂರ್‌ ಅವರು ಸೋಮವಾರ ರಾತ್ರಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದರು.

Vijaya Karnataka 14 Jan 2020, 7:57 pm
ಹೊಸ ದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಕ್ಷಮೆ ಯಾಚಿಸಿದ್ದಾರೆ.
Vijaya Karnataka Web shashi taroor and aravind kejriwal
'ಕೇಜ್ರಿವಾಲ್ ನೀತಿ ನಪುಂಸಕರ ಹಕ್ಕಿನಂತೆ' ಎಂಬ ಹೇಳಿಕೆ ಹಿಂಪಡೆದು ಕ್ಷಮೆ ಕೇಳಿದ ತರೂರ್..!


‘ದಿಲ್ಲಿ ಸಿಎಂ ಕೇಜ್ರಿವಾಲ್‌ ಅವರು ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಸ್ಪಷ್ಟ ಹೇಳಿಕೆ ನೀಡದೇ ಎರಡೂ ಕಡೆ ಹೆಜ್ಜೆ ಇಡಲು ಯತ್ನಿಸುತ್ತಿದ್ದಾರೆ. ತಮ್ಮ ರಾಜ್ಯದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆಯಾದರೆ, ವಿದ್ಯಾರ್ಥಿಗಳು ಬೀದಿಗೆ ಇಳಿದರೆ ಮುಖ್ಯಮಂತ್ರಿಯಾದವರು ಸ್ಥಳಕ್ಕೆ ಭೇಟಿ ನೀಡಬೇಕು. ಕೇಜ್ರಿವಾಲ್‌ ಕೂಡ ಹಾಗೆಯೇ ಮಾಡಬೇಕಿತ್ತು. ನಿಜವಾಗಲೂ ಅರವಿಂದ್‌ ಕೇಜ್ರಿವಾಲ್‌ ಅವರು ಹೊಣೆಗಾರಿಕೆ ಇಲ್ಲದ ಅಧಿಕಾರ ಬಯಸುತ್ತಿದ್ದಾರೆ. ಅವರ ನಡೆ ಒಂದರ್ಥದಲ್ಲಿ ನಪುಂಸಕರ ಹಕ್ಕಿನಂತಿದೆ’ ಎಂದು ತರೂರ್‌ ಅವರು ಸೋಮವಾರ ರಾತ್ರಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಅವರ ಹೇಳಿಕೆ ವಿರುದ್ಧ ಎಲ್‌ಜಿಬಿಟಿ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತಲ್ಲದೇ ಕ್ಷಮೆಗೆ ಆಗ್ರಹಿಸಿತ್ತು. ಹೀಗಾಗಿ ಶಶಿ ತರೂರ್ ಮಂಗಳವಾರ ಟ್ವಿಟರ್‌ನಲ್ಲಿ ಕ್ಷಮೆ ಕೋರಿದ್ದಾರೆ.


‘ಹೊಣೆಗಾರಿಕೆ ಇಲ್ಲದ ಅಧಿಕಾರದ ನನ್ನ ಹೇಳಿಕೆ ಅಪರಾಧ ಎಂಬುದಾಗಿ ಯಾರಾದರೂ ಭಾವಿಸಿದ್ದರೆ ಕ್ಷಮೆ ಕೋರುತ್ತೇನೆ. ಇದು ಬ್ರಿಟಿಷ್‌ ರಾಜಕಾರಣದಲ್ಲಿ ಬಳಕೆಯಲ್ಲಿರುವ ಹಳೆಯ ನಾಣ್ಣಡಿ. ಅದರ ಬಳಕೆ ಇಂದಿನ ಸಂದರ್ಭದಲ್ಲಿ ಸೂಕ್ತವಾದುದಲ್ಲ ಎನ್ನುವುದನ್ನು ಒಪ್ಪುತ್ತೇನೆ ಮತ್ತು ನನ್ನ ಹೇಳಿಕೆ ಹಿಂಪಡೆಯುತ್ತೇನೆ’ ಎಂದು ಹೇಳಿದ್ದಾರೆ.

ಸಿಎಎ ವಿರೋಧಿ ಹೋರಾಟ ಜಾತ್ಯತೀತವಾಗಿರಲಿ ಎಂದ ಶಶಿ ತರೂರ್‌ಗೆ ಜಾಮಿಯಾದಲ್ಲೇ ವಿರೋಧ !

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ