ಆ್ಯಪ್ನಗರ

ಶ್ರೀರಾಮನ ಪ್ರತಿಮೆಗೆ 10 ಬೆಳ್ಳಿ ಬಾಣ ನೀಡಲು ಮುಂದಾದ ಶಿಯಾ ವಕ್ಫ್ ಮಂಡಳಿ

ಅಯೋಧ್ಯೆಯ ಸರಯೂ ನದಿ ತಟದಲ್ಲಿ ನಿರ್ಮಿಸಲುದ್ದೇಶಿಸಿರುವ 100 ಮೀ. ಎತ್ತರದ ಶ್ರೀ ರಾಮನ ವಿಗ್ರಹಕ್ಕೆ 10 ಬೆಳ್ಳಿ ಬಾಣಗಳನ್ನು ನೀಡುವುದಾಗಿ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಪ್ರಸ್ತಾವನೆಯನ್ನು ಕಳುಹಿದೆ.

TNN 17 Oct 2017, 12:47 pm
ಲಖನೌ: ಅಯೋಧ್ಯೆಯ ಸರಯೂ ನದಿ ತಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ 100 ಮೀ. ಎತ್ತರದ ಶ್ರೀ ರಾಮನ ವಿಗ್ರಹಕ್ಕೆ 10 ಬೆಳ್ಳಿ ಬಾಣಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿ ಪ್ರಸ್ತಾವನೆಯನ್ನು ಕಳುಹಿದೆ.
Vijaya Karnataka Web shias offer to gift silver arrows for rams statue
ಶ್ರೀರಾಮನ ಪ್ರತಿಮೆಗೆ 10 ಬೆಳ್ಳಿ ಬಾಣ ನೀಡಲು ಮುಂದಾದ ಶಿಯಾ ವಕ್ಫ್ ಮಂಡಳಿ


'ವಕ್ಫ್ ಬೋರ್ಡ್ ಮೂಲಕ ಶ್ರೀ ರಾಮನ ಪ್ರತಿಮೆಗೆ ಬೆಳ್ಳಿ ಬಾಣಗಳನ್ನು ಉಡುಗೊರೆಯಾಗಿ ನೀಡಬೇಕೆಂದು ಕೆಲವು ಶಿಯಾ ಮುಸ್ಲಿಮರು ಸಲಹೆ ನೀಡಿದ್ದು, ರಾಮನ ಬೃಹತ್ ವಿಗ್ರಹಕ್ಕೆ 10 ಬೆಳ್ಳಿ ಬಾಣಗಳನ್ನು ನೀಡಲು ನಿರ್ಧರಿಸಿದ್ದೇವೆ' ಎಂದು ಶಿಯಾ ಬೋರ್ಡ್ ಅಧ್ಯಕ್ಷ ವಸೀಮ್ ರಿಜ್ವಿ ತಿಳಿಸಿದ್ದಾರೆ.

'ಬಾಣಗಳು ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವನ್ನು ಸಂಕೇತಿಸುತ್ತವೆ. ಮರ್ಯಾದಾ ಪುರುಶೋತ್ತಮನಾದ ಶ್ರೀ ರಾಮ ತನ್ನ ಬಾಣಗಳಿಂದ ನರರಾಕ್ಷಸರನ್ನು ನಾಶ ಮಾಡಿದ ರೀತಿಯಲ್ಲಿ ಭಾರತ ಭಯೋತ್ಪಾದನೆ ಮುಕ್ತ ರಾಷ್ಟ್ರವಾಗಲಿ. ಇದರಿಂದ ಸರ್ವ ಧರ್ಮಿಯರು ಶಾಂತಿಯಿಂದ ನೆಲೆಸುವಂತಾಗಲಿ,' ಎಂದು ರಿಜ್ವಿ ಅವರು ಯೋಗಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Shias offer to gift silver arrows for Ram's statue

LUCKNOW: UP Shia Waqf Board has sent a proposal to chief minister Aditya Nath Yogi offering to gift 10 silver arrows for the proposed 100 metre grand statue of Lord Ram in Ayodhya.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ