ಆ್ಯಪ್ನಗರ

ಅಚ್ಚರಿ ಮೂಡಿಸಿದ ಠಾಕ್ರೆ, ಪ್ರಶಾಂತ್‌ ಭೇಟಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳ ನಡುವಿನ ಮೈತ್ರಿ ಇನ್ನೂ ಅಂತಿಮಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಈ ಭೇಟಿ ನಡೆದಿದೆ. ಆದರೆ, ಪ್ರಶಾಂತ್‌ ಕಿಶೋರ್‌ ಸಂಧಾನಕಾರರಾಗಿ ಬಂದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದೆ.

Vijaya Karnataka 6 Feb 2019, 5:00 am
ಮುಂಬಯಿ: ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
Vijaya Karnataka Web prashanth


ಮುಂಬಯಿಯಲ್ಲಿರುವ ಠಾಕ್ರೆ ನಿವಾಸದಲ್ಲಿ ಮಂಗಳವಾರ ಭೇಟಿ ನಡೆದಿದೆ. ಪ್ರಶಾಂತ್‌ ಅವರು ಸದ್ಯ ಜೆಡಿಯು ಉಪಾಧ್ಯಕ್ಷರಾಗಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರಪಕ್ಷಗಳ ಪೈಕಿ ಜೆಡಿಯು ಸಹ ಒಂದು. ಮಹಾರಾಷ್ಟ್ರದಲ್ಲಿ ದೀರ್ಘಕಾಲದ ಮಿತ್ರರಾಗಿದ್ದ ಬಿಜೆಪಿ, ಶಿವಸೇನೆ ನಡುವೆ ಬಿರುಕು ಮೂಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳ ನಡುವಿನ ಮೈತ್ರಿ ಇನ್ನೂ ಅಂತಿಮಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಈ ಭೇಟಿ ನಡೆದಿದೆ. ಆದರೆ, ಪ್ರಶಾಂತ್‌ ಕಿಶೋರ್‌ ಸಂಧಾನಕಾರರಾಗಿ ಬಂದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದೆ.

''ಬಿಜೆಪಿ ಜತೆಗಿನ ಮೈತ್ರಿ ಕುರಿತು ಯಾವುದೇ ಚರ್ಚೆಯಾಗಿಲ್ಲ. ರಾಜ್ಯದಲ್ಲಿ ಚುನಾವಣೆ ತಂತ್ರ ಹೆಣೆಯುವ ಸಂಬಂಧ ಠಾಕ್ರೆ ಅವರು ಪ್ರಶಾಂತ್‌ ಕಿಶೋರ್‌ ಜತೆ ಚರ್ಚಿಸಿದ್ದಾರೆ. ಅಗತ್ಯ ನೆರವು ನೀಡಲು ಪ್ರಶಾಂತ್‌ ಸಹ ಸಮ್ಮತಿಸಿದ್ದಾರೆ,'' ಎಂದು ಶಿವಸೇನೆ ಮುಖಂಡರೊಬ್ಬರು ತಿಳಿಸಿದ್ದಾರೆ. ''ಇದು ಸೌಹಾರ್ದದ ಭೇಟಿ,'' ಎಂದು ಪಕ್ಷದ ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ.

ಚುನಾವಣೆ ರಣತಂತ್ರ ಹೆಣೆಯಲು ಶಿವಸೇನೆ ಖಾಸಗಿ ವ್ಯಕ್ತಿಯೊಬ್ಬರ ನೆರವು ಪಡೆಯುತ್ತಿರುವುದು ಇದೇ ಮೊದಲು. ಈ ಹಿಂದೆ ಪಕ್ಷದ ಸ್ಥಾನೀಯ ಲೋಕಾಧಿಕಾರ ಸಮಿತಿ ಮತ್ತು ಯುವಘಟಕವಾದ ಯುವ ಸೇನಾ ಮೂಲಕ ಚುನಾವಣೆ ವೇಳೆ ಜನಮತ ಅರಿಯುವ ಪ್ರಯತ್ನವನ್ನು ಪಕ್ಷ ಮಾಡುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ