ಆ್ಯಪ್ನಗರ

ಯೋಗಿ ನಾಡಲ್ಲಿ ಶಾಕಿಂಗ್ ಘಟನೆ..! ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಪಾಲಾಯ್ತು ಬಾಲಕಿ ಶವ..!

ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿಯೊಂದು ಶವವನ್ನು ಕಚ್ಚಿ ತಿನ್ನುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿ ತಮಗೆ ಸಂಬಂಧವೇ ಇಲ್ಲವೆಂಬಂತೆ ಆ ಕಡೆ ಸುಳಿಯಲೇ ಇಲ್ಲ. ಇದೀಗ ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

TIMESOFINDIA.COM 27 Nov 2020, 6:41 pm

ಹೈಲೈಟ್ಸ್‌:

  • ಶವಾಗಾರದಲ್ಲಿ ನಾಯಿ ಪಾಲಾದ ಬಾಲಕಿ ಶವ
  • ಕ್ಯಾರೇ ಎನ್ನದ ಆಸ್ಪತ್ರೆ ಸಿಬ್ಬಂದಿ
  • ತನಿಖೆಗೆ ಆದೇಶಿಸಿದ ಉತ್ತರ ಪ್ರದೇಶ ಸರ್ಕಾರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಸಂಭಲ್ (ಉತ್ತರ ಪ್ರದೇಶ): ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೃತದೇಹವನ್ನು ನಾಯಿಯೊಂದು ಕಚ್ಚಿ ತಿನ್ನುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ..!
ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಸಾರ್ವಜನಿಕ ಜಿಲ್ಲಾಸ್ಪತ್ರೆಗೆ ಬಾಲಕಿಯೊಬ್ಬಳ ಮೃತದೇಹ ರವಾನೆಯಾಗಿತ್ತು. ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಬೇಕಿತ್ತು. ಇದಕ್ಕಾಗಿ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು.

ಬಾಲಕಿಯ ಶವವನ್ನು ಆಸ್ಪತ್ರೆ ಸಿಬ್ಬಂದಿ ಶವಾಗಾರದಲ್ಲಿ ಸುರಕ್ಷಿತವಾಗಿ ರಕ್ಷಿಸಿ ಇಡುವ ಬದಲು ಅದನ್ನು ನಾಯಿ ಪಾಲು ಮಾಡಿದ್ದಾರೆ..! ನಾಯಿ ಕಚ್ಚಿ ತಿನ್ನುತ್ತಿದ್ದರೂ ಕ್ಯಾರೇ ಅನ್ನದೆ ದಿವ್ಯ ನಿರ್ಲಕ್ಷ್ಯ ಮೆರೆದಿದ್ದಾರೆ.

ಈ ಭಯಾನಕ, ಅಮಾನವೀಯ ಹಾಗೂ ಹೃದಯ ವಿದ್ರಾವಕ ಸನ್ನಿವೇಶವನ್ನು ಆಸ್ಪತ್ರೆಗೆ ಆಗಮಿಸಿದ್ದ ಓರ್ವ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದೇ ತಡ, ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸುಲಿಗೆಕೋರ ಆಂಬುಲೆನ್ಸ್ ಏಜೆನ್ಸಿ, ಚಾಲಕರ ದರ್ಪ..! ದೂರು ನೀಡಿದ ಕುಟುಂಬಕ್ಕೆ ಧಮ್ಕಿ..!

ವಿಷಯ ತಿಳಿದ ಕೂಡಲೇ ಮೃತ ಬಾಲಕಿ ತಂದೆ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಮಗಳ ಮೃತದೇಹ ವಾಪಸ್ ನೀಡುವಂತೆ ಆಗ್ರಹಿಸಿದ್ದಾರೆ. ‘ಅಪಘಾತದಲ್ಲಿ ಮೃತಪಟ್ಟ ಮಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲೇಬೇಕು ಎಂದರು. ಹೀಗಾಗಿ, ಕೊಟ್ಟೆವು. ನೋಡಿದರೆ ಇವರ ನಿರ್ಲಕ್ಷ್ಯದಿಂದ ನನ್ನ ಮಗಳ ದೇಹ ನಾಯಿಪಾಲು ಆಗುತ್ತಿದೆ’ ಎಂದು ಮೃತಳ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾದಿಂದ ಸತ್ತವರ ಕುಟುಂಬಕ್ಕೆ ಕಾಟ: ಆಂಬುಲೆನ್ಸ್ ಏಜೆನ್ಸಿ ರಣಹದ್ದುಗಳಿಗಿಂತಾ ಕ್ರೂರಿ..!

ಇದೀಗ ಘಟನೆ ಸಂಬಂಧ ಸಂಭಲ್ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ಅಮಿತಾ ಸಿಂಗ್‌ ತನಿಖೆಗೆ ಆದೇಶಿಸಿದ್ದಾರೆ. ಘಟನೆ ಸಂಬಂಧ ತನಿಖೆಗೆ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಭರವಸೆಯನ್ನೂ ನೀಡಿದ್ದಾರೆ.

ಚಿಕಿತ್ಸೆಗೆ 4 ಲಕ್ಷ, ಶವ ಕೊಡಲು 3 ಲಕ್ಷ..! ರಸ್ತೆಯಲ್ಲೇ ಭಿಕ್ಷೆ ಬೇಡಿದ ಕೊರೊನಾ ಸೋಂಕಿತನ ಸಂಬಂಧಿಕರು..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ