ಆ್ಯಪ್ನಗರ

Shraddha Murder Case: ಶ್ರದ್ಧಾ ಹಂತಕ ಅಫ್ತಾಬ್‌ಗೆ ಸುಳ್ಳು ಪತ್ತೆ & ಮಂಪರು ಪರೀಕ್ಷೆ

Shraddha Walker Murder Case: ಮಂಪರು ಪರೀಕ್ಷೆ ನಡೆಸುವ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆರೋಪಿ ನೀಡುವ ಮಾಹಿತಿಯನ್ನು ದಾಖಲು ಮಾಡಿಕೊಳ್ಳುತ್ತಾರೆ. ನಂತರ ಅದನ್ನು ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಸಮಗ್ರ ಮಾಹಿತಿ ನೀಡುತ್ತಾರೆ. ಆರೋಪಿಯ ಮಂಪರು ಪರೀಕ್ಷೆ ನಡೆಸುವ ವೇಳೆ ವಿಧಿ ವಿಜ್ಞಾನ ತಂಡದ ಸದಸ್ಯರು, ಮನೋ ವಿಜ್ಞಾನಿಗಳು, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ವೈದ್ಯರು ಹಾಜರಿರುತ್ತಾರೆ. ಮಂಪರು ಪರೀಕ್ಷೆ ವೇಳೆ ಸೋಡಿಯಂ ಪೆಂಟೋಥಾಲ್ ಎಂಬ ರಾಸಾಯನಿಕವನ್ನು ಆರೋಪಿಗೆ ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ.

Authored byದಿಲೀಪ್ ಡಿ. ಆರ್. | Vijaya Karnataka Web 21 Nov 2022, 3:22 pm

ಹೈಲೈಟ್ಸ್‌:

  • ಶ್ರದ್ಧಾ ವಾಲ್ಕರ್ ಅವರ ಜೊತೆ ಲಿವ್ ಇನ್ ಸಂಗಾತಿಯಾಗಿ ಒಂದೇ ಮನೆಯಲ್ಲಿ ವಾಸವಿದ್ದ ಅಫ್ತಾಬ್
  • ಮೇ 18 ರಂದು ಶ್ರದ್ಧಾ ವಾಲ್ಕರ್ ಅವರನ್ನು 35 ತುಂಡುಗಳಾಗಿ ಕತ್ತರಿಸಿದ್ದ ಅಫ್ತಾಬ್
  • ಮೊದಲು ಆರೋಪಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದ ಬಳಿಕ ಮಂಪರು ಪರೀಕ್ಷೆ ನಡೆಯಲಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web aftab poonavala
ಶ್ರದ್ಧಾ ಹಂತಕ ಅಫ್ತಾಬ್‌ಗೆ ಸುಳ್ಳು ಪತ್ತೆ & ಮಂಪರು ಪರೀಕ್ಷೆ
ಹೊಸ ದಿಲ್ಲಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಮುನ್ನ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಕಳೆದ ವಾರವಷ್ಟೇ ದಿಲ್ಲಿ ನ್ಯಾಯಾಲಯ ಆರೋಪಿ ಅಫ್ತಾಬ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಅನುಮತಿ ನೀಡಿತ್ತು.
ಶ್ರದ್ಧಾ ವಾಲ್ಕರ್ ಅವರ ಜೊತೆ ಲಿವ್ ಇನ್ ಸಂಗಾತಿಯಾಗಿ ಒಂದೇ ಮನೆಯಲ್ಲಿ ವಾಸವಿದ್ದ ಅಫ್ತಾಬ್, ಮೇ 18 ರಂದು ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದ. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಸಂಗ್ರಹದಲ್ಲಿ ತೊಡಗಿರುವ ಪೊಲೀಸರು, ಮೊದಲು ಆರೋಪಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದ ಬಳಿಕ ಮಂಪರು ಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ.

Shraddha Walker Murder: ಡ್ರಗ್ಸ್ ನಶೆಯಲ್ಲಿ ಶ್ರದ್ಧಾಳನ್ನು ಕತ್ತರಿಸಿದ್ದ ಕ್ರೂರಿ ಅಫ್ತಾಬ್
ಆದ್ರೆ, ಆರೋಪಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಇನ್ನೂ ಕೂಡಾ ಅನುಮತಿ ನೀಡಿಲ್ಲ. ಈಗಾಗಲೇ ನ್ಯಾಯಾಲಯ ಆರೋಪಿಯ ಮಂಪರು ಪರೀಕ್ಷೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸುಳ್ಳು ಪತ್ತೆ ಪರೀಕ್ಷೆಗೂ ಅನುಮತಿ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ನ್ಯಾಯಾಲಯ ಅನುಮತಿ ನೀಡಿದರೆ 10 ದಿನಗಳ ಒಳಗೆ ಎರಡೂ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇದೆ.

ಮಂಪರು ಪರೀಕ್ಷೆ ಹೇಗೆ ನಡೆಯುತ್ತೆ?

ನಾರ್ಕೋ ಟೆಸ್ಟ್‌ ಎಂದು ಕರೆಯಲಾಗುವ ಮಂಪರು ಪರೀಕ್ಷೆ ವೇಳೆ ಸೋಡಿಯಂ ಪೆಂಟೋಥಾಲ್ ಎಂಬ ರಾಸಾಯನಿಕವನ್ನು ಆರೋಪಿಗೆ ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಈ ರಾಸಾಯನಿಕವನ್ನು ಸತ್ಯ ನುಡಿಸುವ ದ್ರಾವಣ ಎಂದೂ ಕರೆಯಲಾಗುತ್ತದೆ. ಈ ರಾಸಾಯನಿಕ ವ್ಯಕ್ತಿಯ ದೇಹದೊಳಗೆ ಪ್ರವೇಶ ಪಡೆದ ಕೂಡಲೇ ವ್ಯಕ್ತಿ ಸಮ್ಮೋಹನ ಸ್ಥಿತಿಗೆ ಒಳಗಾಗುತ್ತಾನೆ. ಯಾವುದೇ ಪ್ರಶ್ನೆಗೆ ಉತ್ತರಿಸುವಾಗ ಸ್ವಪ್ರಜ್ಞೆ ಇಲ್ಲದೆ ಇದ್ದದ್ದನ್ನು ಇದ್ದ ಹಾಗೆ ಮಾತನಾಡುತ್ತಾನೆ. ಈ ರಾಸಾಯನಿಕವನ್ನು ತಜ್ಞರ ಉಸ್ತುವಾರಿಯಲ್ಲಿ ನೀಡಲಾಗುತ್ತದೆ.

Shraddha Murder Case: ಸ್ನೇಹಿತರಿಗೆ ಗೊತ್ತಿತ್ತು ಅಫ್ತಾಬ್ ಕ್ರೌರ್ಯ: ಹಿಂಸೆ ನೀಡಿದ್ದರೂ ಗೆಳೆಯನ ಬಿಡದ ಶ್ರದ್ಧಾ
ಮಂಪರು ಪರೀಕ್ಷೆ ನಡೆಸುವ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆರೋಪಿ ನೀಡುವ ಮಾಹಿತಿಯನ್ನು ದಾಖಲು ಮಾಡಿಕೊಳ್ಳುತ್ತಾರೆ. ನಂತರ ಅದನ್ನು ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಸಮಗ್ರ ಮಾಹಿತಿ ನೀಡುತ್ತಾರೆ. ಆರೋಪಿಯ ಮಂಪರು ಪರೀಕ್ಷೆ ನಡೆಸುವ ವೇಳೆ ವಿಧಿ ವಿಜ್ಞಾನ ತಂಡದ ಸದಸ್ಯರು, ಮನೋ ವಿಜ್ಞಾನಿಗಳು, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ವೈದ್ಯರು ಹಾಜರಿರುತ್ತಾರೆ.


ದಿಲ್ಲಿ ನ್ಯಾಯಾಲಯವು ಕಳೆದ ಶುಕ್ರವಾರವಷ್ಟೇ ಅಫ್ತಾಬ್ ಅಮೀನ್‌ ಪೂನಾವಾಲಾನನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಆದೇಶ ನೀಡಿತ್ತು. ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ಆರೋಪಿ ಅಫ್ತಾಬ್‌ಗೆ ಚಿತ್ರ ಹಿಂಸೆ ನೀಡದಂತೆ ನ್ಯಾಯಾಲಯ ಪೊಲೀಸರಿಗೆ ತಾಕೀತು ಮಾಡಿತ್ತು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ