ಆ್ಯಪ್ನಗರ

ಸಿಖ್‌ ಯಾತ್ರಾರ್ಥಿಗಳ ಶುಲ್ಕ ವಿಚಾರಕ್ಕೆ ನಿರ್ಧಾರ ತಿಳಿಸದ ಪಾಕ್, ಕಾರಿಡಾರ್ ಯೋಜನೆ ಸಹಿ ಡೌಟ್

ಸಿಖ್‌ ಯಾತ್ರಾರ್ಥಿಗಳಿಗೆ ಸೇವಾ ಶುಲ್ಕ ವಿಧಿಸುವ ಪ್ರಸ್ತಾವ ಹಿಂಪಡೆಯುವ ಕುರಿತು ಪಾಕಿಸ್ತಾನ ಯಾವುದೇ ತೀರ್ಮಾನ ಪ್ರಕಟಿಸದಿರುವ ಕಾರಣ ಕರ್ತಾರ್‌ಪುರ ಕಾರಿಡಾರ್‌ಗೆ ಉಭಯ ದೇಶಗಳು ಅಂಕಿತ ಹಾಕುವ ಕಾರ್ಯಕ್ರಮ ಮುಂದಕ್ಕೆ ಹೋಗಿದೆ.

Vijaya Karnataka Web 23 Oct 2019, 9:31 am
ಹೊಸದಿಲ್ಲಿ: ಸಿಖ್‌ ಯಾತ್ರಾರ್ಥಿಗಳಿಗೆ 20 ಡಾಲರ್‌ (ಅಂದಾಜು 1,500 ರೂಪಾಯಿ) ಸೇವಾ ಶುಲ್ಕ ವಿಧಿಸುವ ಪ್ರಸ್ತಾವ ಹಿಂಪಡೆಯುವ ಕುರಿತು ಪಾಕಿಸ್ತಾನ ಯಾವುದೇ ತೀರ್ಮಾನ ಪ್ರಕಟಿಸದಿರುವ ಹಿನ್ನೆಲೆಯಲ್ಲಿ ಕರ್ತಾರ್‌ಪುರ ಕಾರಿಡಾರ್‌ಗೆ ಉಭಯ ದೇಶಗಳು ಅಂಕಿತ ಹಾಕುವ ಕಾರ್ಯಕ್ರಮ ಮುಂದಕ್ಕೆ ಹೋಗಿದೆ.
Vijaya Karnataka Web kartapura


ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆ: ಮನಮೋಹನ್‌ ಸಿಂಗ್‌ಗೆ ಪಾಕ್‌ ಆಹ್ವಾನ?

ಪ್ರಸ್ತಾವ ವಾಪಸ್‌ ಪಡೆಯುವಂತೆ ಮನವೊಲಿಸುವ ಪ್ರಯತ್ನದಲ್ಲಿ ನಿರತವಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಗುರು ವಾರದ ಹೊತ್ತಿಗೆ ಒಪ್ಪಂದ ಅಂತಿಮ ರೂಪ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ನಿಗದಿಯಂತೆ ಬುಧವಾರ ಉಭಯ ದೇಶಗಳೂ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಶುಲ್ಕ ವಾಪಸ್‌ ಪಡೆಯುವ ಕುರಿತು ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ತೀರ್ಮಾನ ಆಗುವವರೆಗೆ ಅಂಕಿತ ಹಾಕುವುದು ಸಾಧ್ಯವಿಲ್ಲ ಎಂಬುದು ಭಾರಧಿತದ ಪಟ್ಟು.

ಕರ್ತಾರ್‌ಪುರಕ್ಕೆ ಬರುವ ಪ್ರತಿ ಯಾತ್ರಿಕನಿಗೆ 1440 ರೂ. ಶುಲ್ಕ ವಿಧಿಸಲು ಮುಂದಾದ ಪಾಕ್‌

''ಶುಲ್ಕ ವಿವಾದ ಬಗೆಹರಿದಿದೆ,'' ಎಂದು ಪಾಕ್‌ ವಿದೇಶಾಂಗ ವಕ್ತಾರ ಮೊಹಮದ್‌ ಫೈಸಲ್‌ ಹೇಳಿರುವುದನ್ನು ಉಲ್ಲೇಖಿಸಿ 'ಡಾನ್‌' ಪತ್ರಿಕೆ ಮಂಗಳವಾರ ವರದಿ ಮಾಡಿದೆ. ಆದರೆ, ಶುಲ್ಕ ವಿಧಿಸುವ ಪ್ರಸ್ತಾವ ವಾಪಸ್‌ ಪಡೆಯಬೇಕೆಂಬ ಮನವಿಗೆ ಪಾಕಿಸ್ತಾನದಿಂದ ಅಧಿಕೃತವಾಗಿ ಯಾವುದೇ ಸ್ಪಂದನೆ ಬಂದಿಲ್ಲಎಂದು ಭಾರತ ಸ್ಪಷ್ಟಪಡಿಸಿದೆ.

ಗುರು ನಾನಕ್‌ ಅವರ 550ನೇ ಜಯಂತಿ ಅಂಗವಾಗಿ ಪಂಜಾಬ್‌ನ ಗುರುದಾಸ್‌ಪುರದಲ್ಲಿರುವ ದೇರಾ ಬಾಬಾ ನಾನಕ್‌ನಿಂದ ಗುರು ನಾನಕ್‌ ಅವರ ಸಮಾಧಿ ಇರುವ ಪಾಕಿಸ್ತಾನದ ಕರ್ತಾರ್‌ಪುರದ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ ಅನ್ನು ಭಾರತ-ಪಾಕಿಸ್ತಾನಗಳು ಜಂಟಿಯಾಗಿ ನಿರ್ಮಿಸಿವೆ.

ಪ. ಬಂಗಾಳದಲ್ಲೂ ಎನ್‌ಆರ್‌ಸಿ ಜಾರಿಗೊಳಿಸಿ, ಅಕ್ರಮ ವಲಸಿಗರ ಹೊರಗಟ್ಟಲಿದೆ ಕೇಂದ್ರ : ಅಮಿತ್‌ ಶಾ

ಭಾರತದ ಸಿಖ್‌ ಯಾತ್ರಾರ್ಥಿಗಳು ಇಲ್ಲಿಗೆ ವೀಸಾ ಇಲ್ಲದೇ ಭೇಟಿ ನೀಡಬಹುದಾಗಿದೆ. ಉಭಯ ದೇಶಗಳ ಪ್ರಧಾನಿಗಳು ತಮ್ಮ ಭಾಗದಲ್ಲಿನ ಕಾರಿಡಾರ್‌ ಅನ್ನು ನ.9ರಂದು ಉದ್ಘಾಟಿಸಲಿದ್ದಾರೆ. ಅಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸೇರಿದಂತೆ 550 ಯಾತ್ರಾರ್ಥಿಗಳನ್ನು ಒಳಗೊಂಡ ಭಾರತದ ಮೊದಲ ನಿಯೋಗ ಕರ್ತಾರ್ ಪುರಕ್ಕೆ ಭೇಟಿ ನೀಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ