ಆ್ಯಪ್ನಗರ

ಮಿದುಳು ಜ್ವರಕ್ಕೆ ಅಸ್ಸಾಂನಲ್ಲಿ 50 ಬಲಿ

ಸುಮಾರು 12.5 ಲಕ್ಷ ರಕ್ತದ ಮಾದರಿಗಳನ್ನು ಇದುವರೆಗೂ ಸಂಗ್ರಹಿಸಲಾಗಿದೆ. ರೋಗಿಗಳನ್ನು ಮಿದುಳು ಜ್ವರದ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆಗೆ ಒಳಪಡಿಸಿ ಪ್ರಾಣ ರಕ್ಷಣೆ ಮಾಡುವುದು ನಮ್ಮ ಉದ್ದೇಶ. ನವೆಂಬರ್‌ನಿಂದ ರಾಜ್ಯಾದ್ಯಂತ ಲಸಿಕಾ ಅಭಿಯಾನ ಕೂಡ ಆರಂಭಿಸಲಿದ್ದೇವೆ ಎಂದು ಸಚಿವ ಶರ್ಮಾ ಹೇಳಿದ್ದಾರೆ.

PTI 7 Jul 2019, 5:00 am
ಗುವಾಹಟಿ: ಏಪ್ರಿಲ್‌ನಿಂದ ಇದುವರೆಗೂ ಜಪಾನೀಸ್‌ ಎನ್ಸೆಫಲಿಟಿಸ್‌ಗೆ(ಜೆಇ-ಜಪಾನೀಸ್‌ ಮಿದುಳು ರೋಗ) 50 ಮಂದಿ ಬಲಿಯಾಗಿದ್ದಾರೆ. ಇನ್ನೂ 190 ಜನರಲ್ಲಿ ರೋಗದ ಲಕ್ಷಣಗಳು ಕಾಣಿಸಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತಾ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Vijaya Karnataka Web fever

ಸುಮಾರು 12.5 ಲಕ್ಷ ರಕ್ತದ ಮಾದರಿಗಳನ್ನು ಇದುವರೆಗೂ ಸಂಗ್ರಹಿಸಲಾಗಿದೆ. ರೋಗಿಗಳನ್ನು ಮಿದುಳು ಜ್ವರದ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆಗೆ ಒಳಪಡಿಸಿ ಪ್ರಾಣ ರಕ್ಷಣೆ ಮಾಡುವುದು ನಮ್ಮ ಉದ್ದೇಶ. ನವೆಂಬರ್‌ನಿಂದ ರಾಜ್ಯಾದ್ಯಂತ ಲಸಿಕಾ ಅಭಿಯಾನ ಕೂಡ ಆರಂಭಿಸಲಿದ್ದೇವೆ ಎಂದು ಸಚಿವ ಶರ್ಮಾ ಹೇಳಿದ್ದಾರೆ.

ಮಿದುಳು ಜ್ವರ ಬಾಧಿತರಿಗೆ ಚಿಕಿತ್ಸೆ ನೀಡುವುದನ್ನು ನಿರ್ಲಕ್ಷಿಸಿದರೆ ಸರಕಾರವೇ ಅಂಥ ವೈದ್ಯರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಿದೆ. ಸರಕಾರಿ ವೈದ್ಯರು ಹಾಗೂ ಸರಕಾರಿ ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳ ಎಲ್ಲ ಸಿಬ್ಬಂದಿಯ ರಜೆಗಳನ್ನು ಕೂಡ ರದ್ದುಗೊಳಿಸಿದ್ದೇವೆ ಎಂದು ಶರ್ಮಾ ಹೇಳಿದ್ದಾರೆ.
ಬಿಹಾರದಲ್ಲಿ ಮಿದುಳು ಜ್ವರದಿಂದ ಸುಮಾರು 150 ಮಂದಿ ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ