ಆ್ಯಪ್ನಗರ

ಗ್ಯಾಂಗ್‌ಸ್ಟರ್‌ ದುಬೆಯ 150 ಕೋಟಿ ರೂ. ಆಸ್ತಿ ತನಿಖೆಗೆ ಇ.ಡಿ.ಗೆ ಶಿಫಾರಸು

ವಿಕಾಸ್‌ ದುಬೆಗೆ ಆತನ ಸಾಮ್ರಾಜ್ಯ ವಿಸ್ತರಿಸಲು ನೆರವಾದ ಗ್ರಾಮಾಭಿವೃದ್ಧಿ, ಆಹಾರ, ಕಂದಾಯ ಹಾಗೂ ಪೊಲೀಸ್‌ ಇಲಾಖೆಯ 90 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸಲ್ಲಿಸಿದ 3,100 ಪುಟಗಳ ವರದಿಯಲ್ಲಿ ಎಸ್‌ಐಟಿ ತಿಳಿಸಿದೆ.

Agencies 1 Dec 2020, 10:50 pm
ಲಖನೌ: ಕಳೆದ ಜುಲೈನಲ್ಲಿ ಕಾನ್ಪುರದಲ್ಲಿ ನಡೆದ ಎಂಟು ಪೊಲೀಸರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಮತ್ತು ಆತನ ಖಾತೆಗಳಲ್ಲಿ ಇರುವ 150 ಕೋಟಿ ರೂ. ಆಸ್ತಿ ಸಂಬಂಧ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಿದೆ.
Vijaya Karnataka Web vikas dubey
Vikas Dubey (File photo)


ಅಲ್ಲದೇ, ವಿಕಾಸ್‌ ದುಬೆಗೆ ಆತನ ಸಾಮ್ರಾಜ್ಯ ವಿಸ್ತರಿಸಲು ನೆರವಾದ ಗ್ರಾಮಾಭಿವೃದ್ಧಿ, ಆಹಾರ, ಕಂದಾಯ ಮತ್ತು ಪೊಲೀಸ್‌ ಇಲಾಖೆಯ 90 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸಲ್ಲಿಸಿದ 3,100 ಪುಟಗಳ ವರದಿಯಲ್ಲಿ ತಿಳಿಸಿದೆ.

"ಕೆಲ ಅಧಿಕಾರಿಗಳು ವಿಕಾಸ್‌ ದುಬೆ ವಿರುದ್ದ ದಾಖಲಾದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಅವರು ದುಬೆಗೆ ಶಸ್ತ್ರಾಸ್ತ್ರ, ಸಿಮ್‌ ಕಾರ್ಡ್‌, ಪಾಸ್‌ಪೋರ್ಟ್‌, ಸುಳ್ಳು ದಾಖಲೆಗಳನ್ನು ಒದಗಿಸಿಕೊಟ್ಟು ಆತನ ಕುಕೃತ್ಯಗಳಿಗೆ ಸಹಕರಿಸಿದ್ದರು. ಹೀಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು," ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ನಾನು ವಿಕಾಸ್ ದುಬೆ ಎನ್ನುತ್ತಿದ್ದಂತೇ ಎರಡು ಬಿಟ್ಟ ಪೊಲೀಸರು: ಖಾಕಿ ಏಟಿಗೆ ರೌಡಿ ತಬ್ಬಿಬ್ಬು!
ಜುಲೈ 2ರಂದು ಕಾನ್ಪುರದಲ್ಲಿ ವಿಕಾಸ್‌ ದುಬೆ ಗ್ಯಾಂಗ್‌ ದಾಳಿ ನಡೆಸಿ ಎಂಟು ಪೊಲೀಸರ ಹತ್ಯೆ ನಡೆಸಿತ್ತು. ಇದಾದ ಬಳಿಕ ಅವನ ಸೆರೆಗೆ ಬಲೆ ಬೀಸಲಾಗಿತ್ತು. ಜುಲೈ 10ರಂದು ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಿ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಈ ವೇಳೆ ತಪ್ಪಿಸಿಕೊಂಡು ಪೊಲೀಸರ ಮೇಲೆ ದಾಳಿಗೆ ಮುಂದಾದಾಗ, ಆತನನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿತ್ತು. ಪೊಲೀಸರ ಹತ್ಯೆ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಉತ್ತರ ಪ್ರದೇಶ ಸರಕಾರವು ಹೆಚ್ಚುವರಿ ಮುಖ್ಯ ಕಾರ‍್ಯದರ್ಶಿ ಸಂಜಯ್‌ ಭೂಸರೆಡ್ಡಿ ನೇತೃತ್ವದಲ್ಲಿ ಮೂವರು ಎಸ್‌ಐಟಿ ಅಧಿಕಾರಿಗಳ ವಿಶೇಷ ತನಿಖಾ ತಂಡ ರಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ