ಆ್ಯಪ್ನಗರ

ಶಾಂತಿ ಮಂತ್ರದ ಹೊರತಾಗಿಯೂ ಚೀನಾ-ಭಾರತ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ

ಉಭಯ ಕಡೆಗಳ ಸಾವಿರಾರು ಸಂಖ್ಯೆಯ ಸೈನಿಕರು ಯುದ್ಧ ಟ್ಯಾಂಕರ್‌ಗಳ ಸಮೇತ ಆಯಕಟ್ಟಿನ ತಾಣಗಳಲ್ಲಿ ಠಿಕಾಣಿ ಹೂಡಿದ್ದಾರೆ. ಕೈಮೀರುವ ಹಂತದಲ್ಲಿ ಚೀನಾ ತಾಳ್ಮೆ ವಹಿಸುವ ಮಾತಾಡಿದೆ. ಇದಾಗಿಯೂ ಗಡಿ ಉದ್ವಿಗ್ನತೆ ಕಿಂಚಿತ್ತೂ ಕಡಿಮೆಯಾಗಿಲ್ಲ.

Agencies 28 May 2020, 7:53 pm

ಹೊಸದಿಲ್ಲಿ: ಚೀನಾ ಶಾಂತಿ, ಸಂಧಾನದ ಮಾತಾಡಿರುವ ಹೊರತಾಗಿಯೂ ಲಡಾಖ್‌ ವಲಯದ ಅಂತಾರಾಷ್ಟ್ರೀಯ ಗಡಿ ರೇಖೆಯ ನಾಲ್ಕು ನೆಲೆಗಳಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಗಾಲ್ವನ್‌ ಕಣಿವೆ ಮತ್ತು ಪಾಂಗಾಂಗ್‌ ತ್ಸೊ ವಲಯಗಳಲ್ಲಿ ಬೀಡುಬಿಟ್ಟಿರುವ ಭಾರತ-ಚೀನಾ ಸೇನಾ ಪಡೆಗಳು ಗುರುವಾರವೂ ಅವಡುಗಚ್ಚಿ ನಿಂತಿದ್ದು, ಉದ್ವಿಗ್ನ ಸ್ಥಿತಿ ಮುಂದುವರಿಕೆಗೆ ಸಾಕ್ಷಿಯಾದವು.
Vijaya Karnataka Web Ladakh


ಮೇ ಮೊದಲ ವಾರ ಗಡಿಯಲ್ಲಿ ನಡೆದ ಸೇನಾ ಸಂಘರ್ಷ ಪರಿಸ್ಥಿತಿಯನ್ನು ಕದಡಿದೆ. ಉಭಯ ಕಡೆಗಳ ಸಾವಿರಾರು ಸಂಖ್ಯೆಯ ಸೈನಿಕರು ಯುದ್ಧ ಟ್ಯಾಂಕರ್‌ಗಳ ಸಮೇತ ಆಯಕಟ್ಟಿನ ತಾಣಗಳಲ್ಲಿ ಠಿಕಾಣಿ ಹೂಡಿದ್ದಾರೆ. ಕೈಮೀರುವ ಹಂತದಲ್ಲಿ ಚೀನಾ ತಾಳ್ಮೆ ವಹಿಸುವ ಮಾತಾಡಿದೆ. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದೆ. ಇದಾಗಿಯೂ ಗಡಿ ಉದ್ವಿಗ್ನತೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಎರಡೂ ಕಡೆಗಳಿಂದ ಒಬ್ಬ ಯೋಧ ಕೂಡ ವಾಪಸಾಗಿಲ್ಲ. ಯಾವುದೇ ಕ್ಷಣ ಸಂಘರ್ಷ ಮರುಸ್ಫೋಟಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಚೀನಾ, ಗಡಿ ವಲಯದಲ್ಲಿ ಹಿಡಿತ ಸಾಧಿಸಲು ಶತ ಪ್ರಯತ್ನ ನಡೆಸಿದೆ. ತಾನು ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಯನ್ನು ಭಾರತ ಕೈಗೊಳ್ಳಬಾರದು ಎನ್ನುವ ಸ್ವಾರ್ಥ ಪ್ರದರ್ಶನ ಮಾಡಿದೆ. ಪಾಂಗಾಂಗ್‌ ಲೇಕ್‌ ಸಮೀಪದ ಗಾಲ್ವನ್‌ ಕಣಿವೆಯುದ್ದಕ್ಕೂ ಭಾರತ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿ ತಡೆಯಲು ಚೀನಾ ಹರಸಾಹಸ ನಡೆಸಿದೆ. ಅದಕ್ಕೆ ಸೊಪ್ಪು ಹಾಕದಿರಲು ಭಾರತ ನಿರ್ಧರಿಸಿದ್ದು, ಈ ಸಂಘರ್ಷಕ್ಕೆ ಕಾರಣವಾಗಿದೆ.

'ಗಡಿ'ಬಿಡಿ ಚೀನಾಗೆ ಬೇಡುವ ಪರಿಸ್ಥಿತಿ ಬರಲಿದೆ: ಮೋದಿ ಸಭೆಯಲ್ಲಿ ಫೈನಲ್ ಸ್ಟ್ಯಾಟರ್ಜಿ!

ಕಾಲು ಕೆರೆದು ಎರಡು ಬಾರಿ ಚೀನಾ ಯೋಧರು ಮೈಮೇಲೆ ಬಂದಾಗ ಭಾರತೀಯ ಯೋಧರೂ ಅವರದ್ದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ. ಬಳಿಕ ಸೇನಾ ಜಮಾವಣೆಯ ಬೆದರಿಕೆ ತಂತ್ರ ಅನುಸರಿಸಿದ ಚೀನಾಕ್ಕೆ ಭಾರತ ದಿಟ್ಟ ಪ್ರತ್ಯುತ್ತರ ನೀಡಿತು. ಭಾರತ ಬಗ್ಗುವುದಿಲ್ಲಎನ್ನುವ ಸತ್ಯ ಅರಿತ ಚೀನಾ ಬುಧವಾರ ದಿಢೀರನೆ ಮೃದು ಧೋರಣೆ ಅನುಸರಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ