ಆ್ಯಪ್ನಗರ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ 6 ಉಗ್ರರ ಹತ್ಯೆ

ಪುಲ್ವಾಮ ಜಿಲ್ಲೆಯ ಟ್ರಾಲ್‌ ಪ್ರದೇಶದಲ್ಲಿ ಉಗ್ರರಿರುವ ಖಚಿತ ಗುಪ್ತಚರ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ 6 ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹೊಡೆದು ಹಾಕಲಾಗಿದೆ. ಅದೇ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

TOI.in 22 Dec 2018, 12:29 pm

ಹೈಲೈಟ್ಸ್‌:

  • ಪುಲ್ವಾಮ ಜಿಲ್ಲೆಯ ಟ್ರಾಲ್‌ ಪ್ರದೇಶದಲ್ಲಿ 6 ಮಂದಿ ಉಗ್ರರ ಹತ್ಯೆ.
  • ಖಚಿತ ಮಾಹಿತಿ ಆಧರಿಸಿ ಶೋಧ ಕಾರ್ಯ, ಈ ವೇಳೆ ಉಗ್ರರಿಂದ ಗುಂಡಿನ ದಾಳಿ.
  • ಪ್ರತಿ ದಾಳಿ ನಡೆಸಿದ ಯೋಧರು 6 ಉಗ್ರರನ್ನು ಹತ್ಯೆ ಮಾಡಿದ್ದಾರೆ, ಘಟನೆ ನಡೆಸ ಸ್ಥಳದಲ್ಲಿ ಮದ್ದುಗುಂಡುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್‌ ಪ್ರದೇಶದಲ್ಲಿ 6 ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಝಾಕಿರ್‌ ಮೂಸಾ ಮತ್ತು ಅನ್ಸರ್‌ ಹಿಂದ್‌ ಉಗ್ರರ ನೇತೃತ್ವದ ಸಂಘಟನೆಗೆ ಸೇರಿದ ಉಗ್ರರು ಗುಂಡಿನ ಕಾಳಗದಲ್ಲಿ ಮೃತ ಪಟ್ಟಿದ್ದಾರೆ.
6 ಉಗ್ರರು ಹತರಾಗಿರುವ ಬಗ್ಗೆ ಪೊಲೀಸ್‌ ಅಧಿಕಾರಿ ಸ್ವಾಯಮ್‌ ಪ್ರಕಾಶ್‌ ಪನಿ ಖಾತರಿ ಪಡಿಸಿದ್ದಾರೆ. ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಟ್ರಾಲ್‌ ಪ್ರದೇಶದ ಅವಂತಿಪುರದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.


ಟ್ರಾಲ್‌ ಪ್ರದೇಶದಲ್ಲಿ ಉಗ್ರರಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಸೇನೆ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿದ ಯೋಧರು 6 ಮಂದಿ ಉಗ್ರರನ್ನು ಕೊಂದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ