ಆ್ಯಪ್ನಗರ

ಮಣ್ಣಿಗಾಗಿ ಮಣ್ಣಾದ ದೇಶಭಕ್ತ ಸೈನಿಕನ ಕೊನೆಯ ಮಾತಿದು

ರಸ್ತೆ ಅಪಘಾತದಲ್ಲಿ ಮಡಿದ ಮಗನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಯೋಧನನ್ನು ಉಗ್ರರು ಹತ್ಯೆಗೈದ ಹೃದಯವಿದ್ರಾವಕ ಘಟನೆ ಕುಲ್ಗಾಮ್‌ನಲ್ಲಿ ನಡೆದಿದೆ. ಸೇನಾ ನಿಯೋಜನೆ ಬಗ್ಗೆ ಮಾಹಿತಿ ಕೊಡಲು ನಿರಾಕರಿಸಿದ್ದೇ ಈ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.

TIMESOFINDIA.COM 19 Sep 2018, 1:17 pm
ಶ್ರೀನಗರ: ರಸ್ತೆ ಅಪಘಾತದಲ್ಲಿ ಮಡಿದ ಮಗನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಯೋಧನನ್ನು ಉಗ್ರರು ಹತ್ಯೆಗೈದ ಹೃದಯವಿದ್ರಾವಕ ಘಟನೆ ಕುಲ್ಗಾಮ್‌ನಲ್ಲಿ ನಡೆದಿದೆ. ಸೇನಾ ನಿಯೋಜನೆ ಬಗ್ಗೆ ಮಾಹಿತಿ ಕೊಡಲು ನಿರಾಕರಿಸಿದ್ದೇ ಈ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
Vijaya Karnataka Web Soldier 1


ಲ್ಯಾನ್ಸ್ ನಾಯಕ್ ಮುಖ್ತಾರ್ ಅಹಮದ್ ಮಲಿಕ್ (43) ಹುತಾತ್ಮ ಸೈನಿಕರಾಗಿದ್ದಾರೆ. ಮಲಿಕ್ ಅವರ 18 ವರ್ಷದ ಪುತ್ರ ಇತ್ತೀಚಿಗೆ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಮೃತನ ಕುಟುಂಬದವರು ಸಾವಿನ ನಂತರದ ವಿಧಿವಿಧಾನಗಳನ್ನು ಆಚರಿಸುತ್ತಿದ್ದಾಗ ಪತ್ರಕರ್ತರ ವೇಷ ತೊಟ್ಟ ಉಗ್ರರು ಮಲಿಕ್ ಮನೆಗೆ ನುಗ್ಗಿ ಸೇನಾ ನಿಯೋಜನೆಗಳ ಮಾಹಿತಿ ನೀಡುವಂತೆ ಕೇಳಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ನನ್ನನ್ನು ಕೊಂದರೂ ನಾನು ಹೇಳುವುದಿಲ್ಲ ಎಂಬುದೇ ಮಲಿಕ್ ಅವರ ಕೊನೆಯ ಮಾತಾಗಿತ್ತು.

ಮಾಹಿತಿ ಕೊಡಲು ಒಪ್ಪದ ಮಲಿಕ್‌ನನ್ನು ಶೂಟ್ ಮಾಡಿದ ಉಗ್ರರು ಅಲ್ಲಿಂದ ಪರಾರಿಯಾಗಿದ್ದಾರೆ, ಎಂದು ತಿಳಿದು ಬಂದಿದೆ.

ಉಗ್ರರ ಈ ದುಷ್ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ ಜಿಲ್ಲೆಯ ಶುರತ್ ಗ್ರಾಮದಲ್ಲಿ ಯೋಧ ಮುಖ್ತಾರ್ ಅಹಮದ್ ಮಲಿಕ್‌ನನ್ನು ಉಗ್ರರು ಹತ್ಯೆಗೈದಿದ್ದಾರೆ. ಈ ಹತ್ಯಾಕಾಂಡವನ್ನು ಖಂಡಿಸುವ ಧೈರ್ಯ ಹುರಿಯತ್‌(ಪ್ರತ್ಯೇಕತಾವಾದಿ ಸಂಘಟನೆ)ಗೆ ಇದೆಯೇ ? ಎಂದು @JKviews ಟ್ವಿಟರ್ ಹ್ಯಾಂಡಲ್ ಮಾಡುವವರು ಪ್ರಶ್ನಿಸಿದ್ದಾರೆ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ