ಆ್ಯಪ್ನಗರ

ಮಹಾರಾಷ್ಟ್ರದ ಕಾಂಗ್ರೆಸ್‌, ಎನ್‌ಸಿಪಿಯ ಕೆಲವು ಶಾಸಕರು ಶೀಘ್ರ ಬಿಜೆಪಿ ತೆಕ್ಕೆಗೆ

''ಹೆಸರು ಬಹಿರಂಗ ಪಡಿಸಿದರೆ ಆ ಸನ್ನಿವೇಶದ ಮಜಾ ಹೊರಟು ಹೋಗುತ್ತದೆ. ಅಸ್ಥಿರತೆಯಲ್ಲಿಯೇ ಜೀವನದ ಮಜಾ ಅಡಗಿದೆ. ಕಾಯ್ದು ನೋಡೋಣ,'' ಎಂದು ಜಾರಿಕೊಂಡರು.

PTI 19 Jul 2019, 5:00 am
ಸೋಲಾಪುರ: ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಕೆಲವು ಶಾಸಕರು ರಾಜೀನಾಮೆ ನೀಡಿ ಒಂದು ವಾರ ಅಥವಾ 10 ದಿನಗಳಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ನೂತನ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಗುರುವಾರ ಹೇಳಿದ್ದಾರೆ. ಪ್ರತಿಪಕ್ಷಗಳ ಸದಸ್ಯರು ವಲಸೆ ಬರುವ ಸ್ಫೋಟಕ ಮಾಹಿತಿ ನೀಡಿದ ಬಿಜೆಪಿ ಅಧ್ಯಕ್ಷರು, ಅವರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು. ''ಹೆಸರು ಬಹಿರಂಗ ಪಡಿಸಿದರೆ ಆ ಸನ್ನಿವೇಶದ ಮಜಾ ಹೊರಟು ಹೋಗುತ್ತದೆ. ಅಸ್ಥಿರತೆಯಲ್ಲಿಯೇ ಜೀವನದ ಮಜಾ ಅಡಗಿದೆ. ಕಾಯ್ದು ನೋಡೋಣ,'' ಎಂದು ಜಾರಿಕೊಂಡರು. ಮಹಾರಾಷ್ಟ್ರ ಘಟಕದ ಕಾಂಗ್ರೆಸ್‌ ಐವರು ಕಾರ್ಯಾಧ್ಯಕ್ಷರ ಪೈಕಿ ಒಬ್ಬರು ಬಿಜೆಪಿ ಸೇರಿದರೆ ಅಚ್ಚರಿ ಇಲ್ಲ ಎಂದು ಬುಧವಾರವಷ್ಟೇ ಹೇಳಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸದಸ್ಯರಲ್ಲಿ ಗೊಂದಲ ಮೂಡಿಸುವ ದುರುದ್ದೇಶದಿಂದ ಪಾಟೀಲರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಎನ್‌ಸಿಪಿ ತಿರುಗೇಟು ನೀಡಿದೆ.
Vijaya Karnataka Web patil

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ