ಆ್ಯಪ್ನಗರ

ದೇಶದ ಪ್ರಗತಿಗೆ ಪ್ರಸ್ತಾವಿತ ಕೃಷಿ ಮಸೂದೆಗಳು "ಐತಿಹಾಸಿಕ, ಅತ್ಯವಶ್ಯ": ನರೇಂದ್ರ ಮೋದಿ

ಭಾರೀ ವಿವಾದಗಳ ಕೇಂದ್ರ ಬಿಂಧುವಾಗಿರುವ ಪ್ರಸ್ತಾವಿತ ಕೃಷಿ ಮಸೂದೆಗಳು ದೇಶದ ಪ್ರಗತಿಯ ದೃಷ್ಟಿಯಲ್ಲಿ "ಐತಿಹಾಸಿಕ ಮತ್ತು ಅತ್ಯವಶ್ಯ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದರು.

Vijaya Karnataka Web 21 Sep 2020, 4:45 pm
ಹೊಸದಿಲ್ಲಿ: ಭಾರೀ ವಿವಾದಗಳ ಕೇಂದ್ರ ಬಿಂಧುವಾಗಿರುವ ಪ್ರಸ್ತಾವಿತ ಕೃಷಿ ಮಸೂದೆಗಳು ದೇಶದ ಪ್ರಗತಿಯ ದೃಷ್ಟಿಯಲ್ಲಿ "ಐತಿಹಾಸಿಕ ಮತ್ತು ಅತ್ಯವಶ್ಯ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಮಸೂದೆಗಳಿಗೆ ಸಂಬಂದಿಸಿದಂತೆ ಸೋಮವಾರ ವಿಡಿಯೋ ಹೇಳಿಕೆ ನೀಡಿದ್ದು, ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳನ್ನು ವಿವಾದದ ವಾಸ್ತುಶಿಲ್ಪಿಗಳು ಎಂದು ಸಂಭೋದಿಸಿದ್ದಾರೆ. ವಿರೋಧ ಪಕ್ಷಗಳು ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸುಳ್ಳುಗಳಿಂದ ರೈತರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಹಾರದಲ್ಲಿ ಒಂಬತ್ತು ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ನೀಡಿದ ಭಾಷಣದಲ್ಲಿ ಮಾತನಾಡಿದರು. ಕಳೆದ ಜೂನ್‌ನಲ್ಲಿ ಹೊರಡಿಸಲಾಗಿದ್ದ ಕೃಷಿ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದ ನಂತರ ಹಲವಾರು ರಾಜ್ಯಗಳ ರೈತರು ಈಗಾಗಲೇ ಪ್ರತಿಫಲ ಪಡೆದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ವಿಧೇಯಕಗಳಲ್ಲಿ ಅಸಲಿಗೆ ಇರುವುದೇನು? ವ್ಯಾಪಕ ವಿರೋಧಕ್ಕೆ ಕಾರಣವೇನು?

ಕೇಂದ್ರ ಸರಕಾರ "ಅನೇಕ ಪ್ರಯೋಜನಗಳ" ಬಗ್ಗೆ ವರದಿಗಳನ್ನು ಪಡೆಯುತ್ತಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಚತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ರೈತರು ಧಾನ್ಯಗಳನ್ನು ಉತ್ತಮವಾಗಿ ಕೊಯ್ಲು ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅವರಿಗೆ ಶೇ 15 ರಿಂದ 25 ರಷ್ಟು ಹೆಚ್ಚಿನ ಆದಾಯ ಲಭಿಸಲಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರದ ಕೃಷಿ ಮಸೂದೆಗಳು ರೈತರ ಪರವೋ? ವಿರುದ್ಧವೋ? ಪ್ರತಿಭಟನೆ ಏಕೆ? ಸಚಿವೆ ರಾಜೀನಾಮೆ!

"ಕೃಷಿ ಕ್ಷೇತ್ರದಲ್ಲಿ ಈ ಐತಿಹಾಸಿಕ ಬದಲಾವಣೆ ತರುವುದರಿಂದ, ಈ ವ್ಯವಸ್ಥೆಯು ಕೆಲವರ ಕಪಿಮುಷ್ಠಿಯಿಂದ ಬಿಡುಗಡೆ ಪಡೆಯಲಿದೆ. ಇದು ಕೆಲ ಧುರೀಣರಿಗೆ ಭಾರೀ ನೋವುಂಟು ಮಾಡಿದೆ. ಹೀಗಾಗಿ ಈ ಜನರು ರೈತರನ್ನು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ದಲ್ಲಿ ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ