ಆ್ಯಪ್ನಗರ

ಬಿಜೆಪಿ-ಎನ್‌ಸಿಪಿ ಸರಕಾರಕ್ಕೆ ಬೆಂಬಲ ನೀಡುತ್ತಾರಾ ಶಿವಸೇನೆಯ 20ಕ್ಕೂ ಹೆಚ್ಚು ಶಾಸಕರು

ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳು ಕ್ರಿಕೆಟ್ ಮ್ಯಾಚ್‌ಗಿಂತಲೂ ರೋಚಕತೆಯಿಂದ ಕೂಡಿತ್ತು. ರಾತ್ರಿ ಕಳೆದು ಬೆಳಗ್ಗೆ ಆಗುವಷ್ಟರಲ್ಲಿ ಚಿತ್ರಣವೇ ಬದಲಾಗಿದೆ. ಈಗ ಶಿವಸೇನೆಯ ಕೆಲವು ಶಾಸಕರು ಬಿಜೆಪಿ ಪರ ವಾಲುವ ಸಾಧ್ಯತೆ ಇದೆ.

Vijaya Karnataka Web 23 Nov 2019, 4:03 pm
ಮುಂಬಯಿ: ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಬಂದು ಹಲವು ದಿನಗಳು ಕಳೆದರೂ ಸರಕಾರ ರಚನೆ ಪ್ರಕ್ರಿಯೆ ತಾರ್ಕಿಕ ಅಂತ್ಯಕ್ಕೆ ತಲುಪಿರಲಿಲ್ಲ.
Vijaya Karnataka Web ಬಿಜೆಪಿ, ಶಿವಸೇನಾ
ಬಿಜೆಪಿ, ಶಿವಸೇನಾ


ಈಗ ಬಿಜೆಪಿ ಜತೆಗೂಡಿ ಎನ್‌ಸಿಪಿಯ ಅಜಿತ್‌ ಪವಾರ್‌ ಸರಕಾರ ರಚನೆ ಮಾಡಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಸರಕಾರ ರಚನೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿತ್ತು.

ಬಿಜೆಪಿ ಮತ್ತು ಶಿವಸೇನೆ ಚುನಾವಣೆ ಪೂರ್ವದಿಂದಲೇ ಮೈತ್ರಿ ಮಾಡಿಕೊಂಡಿತ್ತು. ಆದರೆ ಫಲಿತಾಂಶ ಬಂದ ಶಿವಸೇನೆ ವರಸೆ ಬದಲಿಸಿತು. ಬಿಜೆಪಿಯು ಹಿಂದೆ ಸರಿದಿತ್ತು. ಆದರೆ ತೆರೆಮರೆಯಲ್ಲಿ ತನ್ನ ತಂತ್ರ ಹೆಣೆಯುತ್ತಿತ್ತು. ಶಿವಸೇನೆಯ ಹಲವು ಶಾಸಕರು ಕೂಡ ಬಿಜೆಪಿ ಜತೆಗೂಡಿ ಸರಕಾರ ರಚಿಸುವುದೇ ಲೇಸು ಎಂದು ನಾಯಕರ ಮೇಲೆ ಒತ್ತಡ ಹೇರುತ್ತಿದ್ದರು.

ಕೆಲವು ಶಿವಸೇನೆಯ ಉದ್ಧವ್‌, ಸಂಜತ್‌ ರಾವತ್‌, ಆದಿತ್ಯ ಠಾಕ್ರೆಯ 'ಅಹಂ'ನಿಂದಾಗಿ ಎಲ್ಲವೂ ಕೈಕೊಟ್ಟಿತು ಎಂದು ಶಿವಸೇನೆಯ ಕೆಲವು ಶಾಸಕರೇ ದೂರಿದ್ದಾರೆ. ಈಗ ಬಿಜೆಪಿ ಸರಕಾರ ರಚನೆ ಮಾಡಿದ್ದರಿಂದ ಶಿವಸೇನೆಯ ಹಲವು ಶಾಸಕರು ಉದ್ಧವ್‌ಗೆ ಕೈ ಕೊಟ್ಟು ಕಮಲಕ್ಕೆ ಜೈ ಎನ್ನುವ ಸಾಧ್ಯತೆಯೂ ಇದೆ.

ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಕೂಡ ಶಿವಸೇನೆಗೆ ಶಾಸಕರು ಬೆಂಬಲ ನೀಡಿದರೆ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಎನ್‌ಸಿಪಿಯ ಅಜಿತ್‌ ಪವಾರ್ ಉಪ ಮುಖ್ಯಮಂತ್ರಿಯಾಗಿ ಶನಿವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯ ದೇವೇಂದ್ರ ಫಡ್ನವಿಸ್ ನೇತೃತ್ವದ ನೂತನ ಸರಕಾರವನ್ನು ಶಿವಸೇನೆಯ 20ಕ್ಕೂ ಹೆಚ್ಚು ಶಾಸಕರು ಬೆಂಬಲಿಸುವ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ