ಆ್ಯಪ್ನಗರ

ಪ್ರಕರಣಗಳ ವಿಚಾರಣೆ ಪಟ್ಟಿ ಅವಸರ: ಸಿಜೆಐ ಬೇಸರ

ತಮ್ಮ ಪ್ರಕರಣಗಳ ತುರ್ತು ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿ ಸರತಿ ಸಾಲು ನಿಲ್ಲುವ ವಕೀಲರ ಸಂಖ್ಯೆ ನಿತ್ಯ ಹೆಚ್ಚುತ್ತಲೇ ಇದೆ. ಇದು ಒಳ್ಳೆಯ ಪದ್ಧತಿ ಅಲ್ಲ. ಇದರಿಂದ ಪ್ರಕರಣಗಳ ವಿಚಾರಣೆಯ ಕ್ರಮಬದ್ಧತೆಗೆ ಪೆಟ್ಟಾಗುತ್ತದೆ ಎಂದು ಸಿಜೆಐ ಪೀಠ ಎಚ್ಚರಿಸಿತು.

PTI 26 Jul 2019, 5:00 am
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆಗೆ ಪಟ್ಟಿ ಸಿದ್ಧಪಡಿಸುವ ವಿಷಯದಲ್ಲಿ ಮತ್ತೊಮ್ಮೆ ಗೊಂದಲ ಉಂಟಾಗಿದ್ದು, ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ನಡೆಯಿತು.
Vijaya Karnataka Web cji


ತುರ್ತು ವಿಚಾರಣೆ ನಡೆಸಬೇಕಾದ ಪ್ರಕರಣಗಳ ಪಟ್ಟಿ ಸಿದ್ಧಪಡಿಸುವ ವಿಷಯದಲ್ಲಿ ಏನೂ ಗಂಭೀರವಾದ ತಪ್ಪು ಘಟಿಸುತ್ತಿದೆ. ತಮ್ಮ ಪ್ರಕರಣಗಳ ತುರ್ತು ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿ ಸರತಿ ಸಾಲು ನಿಲ್ಲುವ ವಕೀಲರ ಸಂಖ್ಯೆ ನಿತ್ಯ ಹೆಚ್ಚುತ್ತಲೇ ಇದೆ. ಇದು ಒಳ್ಳೆಯ ಪದ್ಧತಿ ಅಲ್ಲ. ಇದರಿಂದ ಪ್ರಕರಣಗಳ ವಿಚಾರಣೆಯ ಕ್ರಮಬದ್ಧತೆಗೆ ಪೆಟ್ಟಾಗುತ್ತದೆ ಎಂದು ಸಿಜೆಐ ಪೀಠ ಎಚ್ಚರಿಸಿತು.

ಪ್ರಕರಣಗಳ ವಿಚಾರಣೆ ವಿಷಯದಲ್ಲಿ ವಕೀಲರ ಹಸ್ತಕ್ಷೇಪ ತಪ್ಪಿಸುವ ದಿಸೆಯಲ್ಲಿ ಹಿಂದಿನಿಂದಲೂ ಹಲವು ರೀತಿಯ ಕಸರತ್ತುಗಳು ನಡೆಯುತ್ತ ಬಂದಿವೆ. ಗೊಗೊಯ್‌ ಅವರು ಸಿಜೆ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಈ ಬಗ್ಗೆ ಶ್ರಮ ವಹಿಸುತ್ತ ಬಂದಿದ್ದಾರೆ. ಯಾರದೇ ಹಸ್ತಕ್ಷೇಪ ಇಲ್ಲದೇ, ನಿಗದಿತ ಅವಧಿಯೊಳಗೆ ಪ್ರಕರಣಗಳ ವಿಚಾರಣಾ ಪಟ್ಟಿ ಸಿದ್ಧಗೊಳ್ಳಬೇಕು ಎನ್ನುವುದು ಅವರ ಪ್ರತಿಪಾದನೆಯಾಗಿದೆ.
''ಎಲ್ಲ ವಕೀಲರಿಗೂ ತಮ್ಮ ಪ್ರಕರಣಗಳು ಅರ್ಜೆಂಟ್‌ ಆಗಿ ವಿಚಾರಣೆಗೆ ಒಳಪಡಬೇಕು ಎನ್ನುವ ಧಾವಂತ. ಪ್ರಾಯೋಗಿಕವಾಗಿ ಅದು ಅಸಾಧ್ಯ. ಅನಗತ್ಯ ಅವಸರದಿಂದ ಪ್ರಕರಣಗಳ ಪಟ್ಟಿಯೇ ಏರುಪೇರಾಗುತ್ತದೆ. ಇದನ್ನು ಸರಿಪಡಿಸಲು ನಾನು ಏನೆಲ್ಲ ಪ್ರಯತ್ನ ಮಾಡಿದರೂ ಇದುವರೆಗೆ ಸಾಧ್ಯವಾಗಿಲ್ಲ,'' ಎಂದು ನ್ಯಾ.ಗೊಗೊಯ್‌ ಬೇಸರ ಹೊರಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ