ಆ್ಯಪ್ನಗರ

ಕೇರಳದಲ್ಲಿ ಮುಂಗಾರು ಮಳೆ ಆರಂಭ, ಕೆಲವೇ ದಿನಗಳಲ್ಲಿ ಕರ್ನಾಟಕ ಪ್ರವೇಶ

ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕರ್ನಾಟಕದ ಕರಾವಳಿಗೂ ಮಳೆ ಮಾರುತಗಳು ಆಗಮಿಸುತ್ತವೆ. ಹೀಗಾಗಿ ಬೆರಳೆಣಿಕೆ ದಿನಗಳಲ್ಲಿ ರಾಜ್ಯದಲ್ಲಿಯೂ ಮಳೆಯ ಅಬ್ಬರ ಆರಂಭವಾಗಲಿದೆ.

Agencies 1 Jun 2020, 1:48 pm

ಹೊಸದಿಲ್ಲಿ: ಕಳೆದ ಹಲವು ದಿನಗಳಿಂದ ಕೇರಳದಲ್ಲಿ ಮಳೆ ಸುರಿಯುತ್ತಿದ್ದರೂ ಇದೀಗ ನೈಋತ್ಯ ಮುಂಗಾರು ಮಾರುತ ಅಧಿಕೃತವಾಗಿ ದೇವರ ನಾಡನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
Vijaya Karnataka Web Rain


ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕರ್ನಾಟಕದ ಕರಾವಳಿಗೂ ಮಳೆ ಮಾರುತಗಳು ಆಗಮಿಸುತ್ತವೆ. ಹೀಗಾಗಿ ಬೆರಳೆಣಿಕೆ ದಿನಗಳಲ್ಲಿ ರಾಜ್ಯದಲ್ಲಿಯೂ ಮುಂಗಾರು ಮಳೆಯ ಅಬ್ಬರ ಆರಂಭವಾಗಲಿದೆ.

ಇದರೊಂದಿಗೆ ದೇಶದಲ್ಲಿ ನಾಲ್ಕು ತಿಂಗಳ ಮಳೆಗಾಲ ಆರಂಭವಾಗಿದೆ. ಕೇರಳದಿಂದ ಆರಂಭವಾಗುವ ಮುಂಗಾರು ಮಳೆ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದಿಂದ ನಿರ್ಗಮಿಸುತ್ತದೆ. ಕೃಷಿ ಆಧಾರಿತ ದೇಶದ ಆರ್ಥಿಕತೆಗೆ ಮುಂಗಾರು ಮಳೆಯೇ ಆಧಾರ ಸ್ತಂಭ. ಹೀಗಾಗಿ ಉತ್ತಮ ಮಳೆಯನ್ನು ಈ ಬಾರಿಯೂ ನಿರೀಕ್ಷಿಸಲಾಗುತ್ತಿದೆ.

ಏಪ್ರಿಲ್‌ನಲ್ಲಿ ಹವಾಮಾನ ಇಲಾಖೆ ಈ ಬಾರಿ ಸಾಮಾನ್ಯ ಮುಂಗಾರು ಮಳೆ ಇರಲಿದೆ ಎಂದು ಹೇಳಿದೆ. ಸುದೀರ್ಘ ಅವಧಿಯಲ್ಲಿ ಶೇಕಡಾ 100ರಷ್ಟು ಮಳೆ ಸುರಿಯಲಿದೆ ಎಂದು ಇಲಾಖೆ ಅಂದಾಜು ಮಾಡಿದೆ.

ಅರಬ್ಬಿ ಚಂಡಮಾರುತ..! ಕರಾವಳಿ, ಮಲೆನಾಡು, ಉ. ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ

ಶನಿವಾರ, ಹವಾಮಾನ ವರದಿ ನೀಡುವ ಖಾಸಗಿ ಸಂಸ್ಥೆ 'ಸ್ಕೈಮೆಟ್'‌ ಮುಂಗಾರು ಮಳೆ ಕೇರಳ ಪ್ರವೇಶಿಸಿದೆ ಎಂದು ವರದಿ ಮಾಡಿತ್ತು. ಆದರೆ ಹವಾಮಾನ ಇಲಾಖೆ ಈ ವರದಿಯನ್ನು ತಳ್ಳಿ ಹಾಕಿತ್ತು.

ನಿರ್ದಿಷ್ಟ ಬೌಗೋಳಿಕ ಪ್ರದೇಶದಲ್ಲಿ ಸುರಿದ ಮಳೆ, ಅಲ್ಲಿನ ಮೋಡ, ಗಾಳಿಯ ವೇಗ ಎಲ್ಲವನ್ನೂ ಲೆಕ್ಕ ಹಾಕಿ ಮುಂಗಾರು ಮಾರುತ ಪ್ರವೇಶಿಸಿದೆ ಎಂಬುದನ್ನು ಹವಾಮಾನ ಇಲಾಖೆ ನಿರ್ಧರಿಸುತ್ತದೆ.

ಇದೇ ವೇಳೆ ಅರಬ್ಬೀ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಪ್ರಬಲ ಚಂಡಮಾರುತವಾಗಿ ರೂಪುಗೊಂಡು ಜೂನ್‌ 3ರ ವೇಳೆಗೆ ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ತೀರಗಳ ಮೇಲೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ