ಆ್ಯಪ್ನಗರ

ಘಾತಕ ಪತ್ನಿಯನ್ನು ಕೊಲ್ಲುವ ಬದಲು ತ್ರಿವಳಿ ತಲಾಕ್‌: ಸಮಾಜವಾದಿ ನಾಯಕನ ಸಮರ್ಥನೆ

ವಂಚನೆ ಎಸಗುವ ಪತ್ನಿಯನ್ನು ಕೊಲ್ಲುವ ಬದಲು ತ್ರಿವಳಿ ತಲಾಕ್‌ ನೀಡಲಾಗುತ್ತದೆ, ಅದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಅನಿಷ್ಠ ಪದ್ಧತಿಯನ್ನು ಸಮರ್ಥಿಸಿದ್ದಾರೆ. ಉತ್ತರ ಪ್ರದೇಶದ ರಿಯಾಜ್‌ ಅಹ್ಮದ್‌ ಈ ಸೋಜಿಗದ ಹೇಳಿಕೆ ನೀಡಿದ ಎಸ್ಪಿ ಮುಖಂಡ.

Vijaya Karnataka 24 Jul 2018, 9:42 am
ಹೊಸದಿಲ್ಲಿ: ವಂಚನೆ ಎಸಗುವ ಪತ್ನಿಯನ್ನು ಕೊಲ್ಲುವ ಬದಲು ತ್ರಿವಳಿ ತಲಾಕ್‌ ನೀಡಲಾಗುತ್ತದೆ, ಅದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಅನಿಷ್ಠ ಪದ್ಧತಿಯನ್ನು ಸಮರ್ಥಿಸಿದ್ದಾರೆ. ಉತ್ತರ ಪ್ರದೇಶದ ರಿಯಾಜ್‌ ಅಹ್ಮದ್‌ ಈ ಸೋಜಿಗದ ಹೇಳಿಕೆ ನೀಡಿದ ಎಸ್ಪಿ ಮುಖಂಡ.
Vijaya Karnataka Web Talaq


ಬರೇಲಿಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘‘ಪತ್ನಿಯಾದವಳು ಬೇರೊಬ್ಬನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರೆ ಪತಿ ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಅಂತಹ ಸಂದರ್ಭ ಪತಿಯ ಮುಂದೆ ಎರಡು ಆಯ್ಕೆಗಳಿರುತ್ತವೆ; ಒಂದು ಕೊಲ್ಲುವುದು, ಇಲ್ಲವೆಂದರೆ ತಲಾಕ್‌ ನೀಡುವುದು. ಕೊಲ್ಲಲು ಸಾಧ್ಯವಾಗದೇ ಹೋದಾಗ ತಲಾಕ್‌ ನೀಡುತ್ತಾರೆ,’’ ಎಂದು ಹೇಳುವ ಮೂಲಕ ಬೆಚ್ಚಿ ಬೀಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ