ಆ್ಯಪ್ನಗರ

ಅಡ್ಮಿನ್‌ ಬಂಧನ: ಪಾರ್ಟ್ 2 ಹೆಸರಲ್ಲಿ ಮತ್ತೆ ಅವಹೇಳನಕಾರಿ ಪೋಸ್ಟ್‌

'ಸ್ಪೆಸಿಫೈಡ್‌ ತರ್ಕಟ' ಪೇಜ್‌ನ ಅಡ್ಮಿನ್‌ ಬಂಧನದ ನಂತರ ಮತ್ತೆ 'ಸ್ಪೆಸಿಫೈಡ್‌ ತರ್ಕಟ 2'ನಲ್ಲಿ ಅವಹೇಳನಕಾರಿ ಪೋಸ್ಟ್‌ಗಳು

EiSamay.Com 28 Dec 2017, 5:25 pm
ಕೋಲ್ಕತ: ಫೇಸ್‌ಬುಕ್‌ನಲ್ಲಿ ಸೆಲೆಬ್ರಿಟಿಗಳ ಬಗ್ಗೆ ಅವಮಾನಕಾರಿ, ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡುತ್ತಿದ್ದ 'ಸ್ಪೆಸಿಫೈಡ್‌ ತರ್ಕಟ' ಹೆಸರಿನ ಪೇಜ್‌ನ ಅಡ್ಮಿನ್‌ನನ್ನು ಕೋಲ್ಕತ ಪೊಲೀಸರು ಬಂಧಿಸಿದ್ದು, ಒಂದು ವಾರದ ಬಳಿಕ ಮತ್ತೆ ಅದೇ ಹೆಸರಿನ ಪೇಜ್‌ ಆ್ಯಕ್ಟಿವ್‌ ಆಗಿದೆ. ಮತ್ತದೇ ಅವಹೇಳನಕಾರಿ ಪೋಸ್ಟ್‌ಗಳನ್ನು ಮುಂದುವರಿಸಿದೆ.
Vijaya Karnataka Web specified tarkata admin arrested
ಅಡ್ಮಿನ್‌ ಬಂಧನ: ಪಾರ್ಟ್ 2 ಹೆಸರಲ್ಲಿ ಮತ್ತೆ ಅವಹೇಳನಕಾರಿ ಪೋಸ್ಟ್‌


ಅಡ್ಮಿನ್‍‌ ಮನಿಮಯ್‌ ಐಚ್‌ ಎಂಬಾತನನ್ನು ಕೋಲ್ಕತ ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧನದ ಒಂದೇ ವಾರದಲ್ಲಿ 'ಸ್ಪೆಸಿಫೈಡ್‌ ತರ್ಕಟ 2' ಎಂಬ ಹೆಸರಲ್ಲಿ ಪೇಜ್‌ ಆರಂಭವಾಗಿದ್ದು ಪೊಲೀಸರಿಗೆ ತಲೆ ನೋವಾಗಿ ಸಂಭವಿಸಿದೆ. ಬಂಗಾಳಿಯ ಪದ ತರ್ಕಟ ಎಂದರೆ ಹುಚ್ಚು ಎಂಬರ್ಥವನ್ನು ಕೊಡುತ್ತದೆ. ಈ ಬಾರಿ ರಾಷ್ಟ್ರಗೀತೆ ಮತ್ತು ಸುಪ್ರೀಂ ಕೋರ್ಟ್‌ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದೆ.

ಹಳೆಯ ಪೇಜ್‌ಅನ್ನು 2 ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಈ ಪೇಜ್‌ನಲ್ಲಿ ಖ್ಯಾತ ನಟ ಮತ್ತು ನಟಿಯರ ಅವಹೇಳನಕಾರಿ ಚಿತ್ರಗಳನ್ನು, ಕಾರ್ಟೂನ್‌ಗಳನ್ನು ಪೋಸ್ಟ್‌ ಮಾಡಲಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರು, ರಾಜಕಾರಣಿಗಳ ಮೇಲೆಯೂ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಲಾಗುತ್ತಿತ್ತು. ಈ ಬಗ್ಗೆ ಕೋಲ್ಕತ ಪೊಲೀಸರಿಗೆ ಅನೇಕ ದೂರುಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ ಪೇಜ್‌ನ ಅಡ್ಮಿನ್‌ಅನ್ನು ಗುರುತಿಸಿ ಬಂಧಿಸುವಲ್ಲಿ ಕೋಲ್ಕತ ಪೊಲೀಸರು ಸಫಲರಾಗಿದ್ದರು.

ಈ ಸುದ್ದಿಯನ್ನು ಬಂಗಾಳಿ ಭಾಷೆಯಲ್ಲಿ ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ