ಆ್ಯಪ್ನಗರ

ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇ ವೇಗಮಿತಿ 100 ಕಿ.ಮೀ.ಗೆ ವಿಸ್ತರಣೆ ಸಾಧ್ಯತೆ

ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾದ ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಸ್ತುತ ಇರುವ 80 ಕಿ.ಮೀ. ವೇಗಮಿತಿಯನ್ನು 100 ಕಿ.ಮೀ. ಪ್ರತಿ ಗಂಟೆಗೆ ಏರಿಕೆ ಮಾಡಲು ಹೆದ್ದಾರಿ ಪ್ರಾಧಿಕಾರ ಸಿದ್ದತೆ ನಡೆಸಿದೆ.

Mumbai Mirror 27 Aug 2018, 3:11 pm
[This story originally published in Mumbai Mirror on Aug 27, 2018]
Vijaya Karnataka Web expressway


ಮುಂಬಯಿ:
ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾದ ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಸ್ತುತ ಇರುವ 80 ಕಿ.ಮೀ. ವೇಗಮಿತಿಯನ್ನು 100 ಕಿ.ಮೀ. ಪ್ರತಿ ಗಂಟೆಗೆ ಏರಿಕೆ ಮಾಡಲು ಹೆದ್ದಾರಿ ಪ್ರಾಧಿಕಾರ ಸಿದ್ದತೆ ನಡೆಸಿದೆ.

95 ಕಿ.ಮೀ. ಇ-ವೇ ಹೊಂದಿರುವ ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇ ದೇಶದ ಅತ್ಯಂತ ಅಪಾಯಕಾರಿ ಹೆದ್ದಾರಿಗಳಲ್ಲಿ ಒಂದಾಗಿದೆ. 20003ರಲ್ಲಿ ಈ ಹೆದ್ದಾರಿ ತೆರೆದಿದ್ದು, ಈವರೆಗೆ 5000 ಅಪಘಾತಗಳು ಸಂಭವಿಸಿದೆ.

ಪ್ರಸ್ತುತ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಸಂಸ್ಥೆ ಹೆದ್ದಾರಿಯ ವೇಗಮಿತಿಯನ್ನು ಪರಿಷ್ಕರಿಸಲು ನಿರ್ಧರಿಸಿದ್ದು, ಅದಕ್ಕಾಗಿ ಸಂಬಂಧಿತ ವಿವಿಧ ಇಲಾಖೆಗಳ ತಜ್ಞರ ಸಮಿತಿ ರಚಿಸಿ, ವರದಿ ಆಧಾರದ ಮೇಲೆ ವೇಗ ವಿಸ್ತರಣೆಗೆ ಕ್ರಮ ಕೈಗೊಳ್ಳಲಿದೆ.

ಗೃಹ ಇಲಾಖೆ, ಸಾರಿಗೆ, ಅಟೋಮೊಬೈಲ್ ಮತ್ತು ಆರೋಗ್ಯ ಇಲಾಖೆಯ ತಜ್ಞರು ಸಮಿತಿಯಲ್ಲಿ ಇರಲಿದ್ದು, ಹೆದ್ದಾರಿಯಲ್ಲಿನ ಸಮಸ್ಯೆಗಳು ಮತ್ತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಧ್ಯಯನ ನಡೆಸಲಿದೆ.

ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಸರಕಾರ ಎಲ್ಲ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇ ಪ್ರಾಧಿಕಾರಗಳಿಗೆ ಸೂಚನೆ ನೀಡಿ, ದೇಶದ ಎಲ್ಲ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಮತ್ತು ಜನರ ಸಮಯ ಉಳಿತಾಯದ ನಿಟ್ಟಿನಲ್ಲಿ ವೇಗಮಿತಿಯನ್ನು ಪರಿಷ್ಕರಿಸುವಂತೆ ಕೇಳಿಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ