ಆ್ಯಪ್ನಗರ

ಶ್ರೀಲಂಕಾದಲ್ಲಿ ಬುರ್ಕಾ ನಿಷೇಧ

ದೇಶದಲ್ಲಿ ಮುಸ್ಲಿಂ ಉಗ್ರವಾದವನ್ನು ಮಟ್ಟ ಹಾಕುವ ಉದ್ದೇಶದಿಂದ ಹೊಸ ಕಾನೂನನ್ನೇ ತರಲಾಗಿದ್ದು, ಯಾರೊಬ್ಬರೂ ಮುಖ ಮುಚ್ಚಿಕೊಳ್ಳುವ ಬಟ್ಟೆ ಧರಿಸಬಾರದು ಎಂಬ ಕಟ್ಟಾಜ್ಞೆ ವಿಧಿಸಲಾಗಿದೆ.

Vijaya Karnataka 30 Apr 2019, 5:00 am
ಕೊಲಂಬೊ: ಸರಣಿ ಬಾಂಬ್‌ ಸ್ಫೋಟದ ಬಳಿಕ ದೇಶದ ಭದ್ರತಾ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಸರಕಾರ ಮುಸ್ಲಿಂ ಮಹಿಳೆಯರು ಬುರ್ಕಾ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
Vijaya Karnataka Web sri lanka govts bans burka
ಶ್ರೀಲಂಕಾದಲ್ಲಿ ಬುರ್ಕಾ ನಿಷೇಧ


ದೇಶದಲ್ಲಿ ಮುಸ್ಲಿಂ ಉಗ್ರವಾದವನ್ನು ಮಟ್ಟ ಹಾಕುವ ಉದ್ದೇಶದಿಂದ ಹೊಸ ಕಾನೂನನ್ನೇ ತರಲಾಗಿದ್ದು, ಯಾರೊಬ್ಬರೂ ಮುಖ ಮುಚ್ಚಿಕೊಳ್ಳುವ ಬಟ್ಟೆ ಧರಿಸಬಾರದು ಎಂಬ ಕಟ್ಟಾಜ್ಞೆ ವಿಧಿಸಲಾಗಿದೆ. ತುರ್ತುಪರಿಸ್ಥಿತಿಯ ಅಧಿಕಾರವನ್ನು ಬಳಸಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೊರಡಿಸಿದ ಆದೇಶ ಸೋಮವಾರದಿಂದಲೇ ಜಾರಿಗೆ ಬಂದಿದೆ.

ಮುಸ್ಲಿಂ ಮೌಲ್ವಿಗಳ ಜತೆ ಚರ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬುರ್ಕಾ, ಹಿಜಾಬ್‌, ನಿಕಾಬ್‌ಗೆ ನಿಷೇಧವಿದೆ. ದೇಶದಲ್ಲಿ ತಮ್ಮ ವಿರುದ್ಧ ಆಕ್ರೋಶವಿರುವುದನ್ನು ಗಮನಿಸಿರುವ ಮುಸ್ಲಿಮರು ಈಗಾಗಲೇ ಬುರ್ಕಾ ಧರಿಸುವುದನ್ನು ನಿಲ್ಲಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ