ಆ್ಯಪ್ನಗರ

Statue of Unity: ಏಕತೆಯ ಪ್ರತಿಮೆ ಲೋಕಾರ್ಪಣೆ: ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲ್‌ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ಮೋದಿ

ಭಾರತದ ಇತಿಹಾಸದಲ್ಲೇ ನೆನಪಿಡಬೇಕಾದ ದಿನವಿದು. ಯಾವೊಬ್ಬ ಭಾರತೀಯನೂ ಈ ದಿನವನ್ನು ಮರೆಯಲಾರ: ಪ್ರಧಾನಿ ಮೋದಿ

Vijaya Karnataka Web 31 Oct 2018, 3:16 pm
ಅಹಮದಾಬಾದ್: ವಿಶ್ವದಲ್ಲೇ ಅತಿ ಎತ್ತರದ್ದು ಎಂಬ ಖ್ಯಾತಿ ಪಡೆದ 182 ಮೀಟರ್ ಎತ್ತರದ ಸರ್ದಾರ್‌ ವಲ್ಲಭಭಾಯ್ ಪಟೇಲ್ ಅವರ 'ಏಕತೆಯ ಪ್ರತಿಮೆ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು.
Vijaya Karnataka Web Patel new-1


ಪ್ರತಿಮೆಗೆ ಕುಂಭಾಭಿಷೇಕ:

ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಇದಕ್ಕೆ ಮೊದಲು ಸಾಂಕೇತಿಕವಾಗಿ ಮಣ್ಣು ಹಾಗೂ ನರ್ಮದಾ ನದಿ ನೀರನ್ನು ಮೋದಿ ಅವರು ಕಲಶಕ್ಕೆ ಅರ್ಪಿಸಿದರು. ಬಳಿಕ ಲಿವರ್‌ ಒತ್ತುವ ಮೂಲಕ ಪ್ರತಿಮೆಯ ಮೇಲೆ ಅಭಿಷೇಕಕ್ಕೆ ಚಾಲನೆ ನೀಡಿದರು. ಬಳಿಕ ಪ್ರತಿಮೆಯ ಪೀಠದ ಬಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಆಗಸದಲ್ಲಿ ತಿರಂಗಾ ಚಿತ್ತಾರ: ಪ್ರತಿಮೆ ಅನಾವರಣ ವೇಳೆ ವಾಯುಪಡೆಯ ಎರಡು ವಿಮಾನಗಳು ಪ್ರತಿಮೆಯ ಮೇಲೆ ಹಾರಾಟ ನಡೆಸುವ ಬಣ್ಣಗಳ ಮೂಲಕ ಆಗಸದಲ್ಲಿ ತಿರಂಗಾದ ಚಿತ್ತಾರ ಮೂಡಿಸಿದವು. ಜತೆಗೆ ವಿಮಾನಗಳ ಮೂಲಕ ಪುಷ್ಪಾರ್ಚನೆಯೂ ನೆರವೇರಿತು.

ಮುಖ್ಯಾಂಶಗಳು:
* ಭಾರತದ ಇತಿಹಾಸದಲ್ಲೇ ನೆನಪಿಡಬೇಕಾದ ದಿನವಿದು. ಯಾವೊಬ್ಬ ಭಾರತೀಯನೂ ಈ ದಿನವನ್ನು ಮರೆಯಲಾರ: ಪ್ರಧಾನಿ ಮೋದಿ

* ಸರ್ದಾರ್‌ ಪಟೇಲರ ದೂರದೃಷ್ಟಿಯ ಕೊಡುಗೆ ಇಲ್ಲದಿದ್ದರೆ ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ: ಪ್ರಧಾನಿ ಮೋದಿ


* ಏಕತೆಯ ಪ್ರತಿಮೆಯ ನಿರ್ಮಾಣಕ್ಕಾಗಿ ದೇಶದ ಎಲ್ಲೆಡೆಯಿಂದ ಲಕ್ಷಾಂತರ ರೈತರು ಇಲ್ಲಿಗೆ ಬಂದು ಒಗ್ಗೂಡಿದರು. ತಮ್ಮ ಉಪಕರಣಗಳನ್ನು ನೀಡಿದರು. ತಮ್ಮ ಮಣ್ಣಿನ ಪಾಲನ್ನೂ ನೀಡಿದರು. ಹೀಗೆ ಒಂದು ಬೃಹತ್ ಆಂದೋಲನವನ್ನು ಜಾರಿಗೊಳಿಸಲಾಯಿತು: ಪ್ರಧಾನಿ ಮೋದಿ.

* ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರತಿಮೆಯ ಸ್ಥಾಪನೆಯ ಕನಸು ಕಂಡಿದ್ದೆ. ಅದು ಈಗ ಸಾಕಾರವಾಗಿದೆ: ಪ್ರಧಾನಿ ಮೋದಿ.

ವಿಕ ಫೋಟೋ ಗ್ಯಾಲರಿ: ಚಿತ್ರಗಳಲ್ಲಿ ನೋಡಿ ವಿಶ್ವದ ಅತಿ ಎತ್ತರದ ಪ್ರತಿಮೆ ಅನಾವರಣ

ಏಕತೆಯ ಪ್ರತಿಮೆ ಉದ್ಘಾಟನೆ: 4,000 ಪೊಲೀಸರು, 20 ಡ್ರೋನ್‌ಗಳಿಂದ ತೀವ್ರ ಕಣ್ಗಾವಲು

* ಸರ್ದಾರ್ ವಲ್ಲಭಭಾಯ್‌ ಪಟೇಲ್ ಅವರ ಜನ್ಮದಿನವಾದ ಇಂದು ಇಡೀ ದೇಶ 'ರಾಷ್ಟ್ರೀಯ ಏಕತಾ ದಿವಸ' ಆಚರಿಸುತ್ತಿದೆ.

ಹೃದಯಗಳ ಒಗ್ಗೂಡುವಿಕೆಯ ಸಂಕೇತ ಸರ್ದಾರ್ ಪ್ರತಿಮೆ: ಪ್ರಧಾನಿ ಸಂದೇಶ

* ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ- ಸರ್ದಾರ್ ಪಟೇಲ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

‘ಏಕತೆಯ’ ಪ್ರತಿಮೆ 'ಎಂಜಿನಿಯರಿಂಗ್ ಅದ್ಭುತ'

* ಜಗತ್ತಿನಲ್ಲೇ ಅತಿ ಎತ್ತದರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ.

ಸರ್ದಾರ್‌ ಪ್ರತಿಮೆ ಶ್ರೇಷ್ಠತೆಗೆ ಬೆಣ್ಣೆನಗರಿ ಎಂಜಿನಿಯರ್‌ ಸಾಥ್‌

* ಏಕತೆಯ ಪ್ರತಿಮೆಯ ಮೇಲೆ ಹಾರಾಡುತ್ತ ತ್ರಿವರ್ಣ ಧ್ವಜದ ಹೊಗೆಯಲ್ಲಿ ಚಿತ್ತಾರ ಬಿಡಿಸಿದ ಸೂರ್ಯಕಿರಣ್ ವಿಮಾನಗಳು.

* ಜಗತ್ತಿನ ಅತಿದೊಡ್ಡ ಪ್ರತಿಮೆಗೆ ಅಭಿಷೇಕ ನೆರವೇರಿಸುವ ಮೂಲಕ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ಮೋದಿ.

* ಈ ಪ್ರತಿಮೆಯನ್ನು ಭಾರತದ ಜನತೆಗೆ ಸಮರ್ಪಿಸಲು ನನಗೆ ಅವಕಾಶ ದೊರೆತಿದ್ದು ನನ್ನ ಅದೃಷ್ಟ: ಪ್ರಧಾನಿ ಮೋದಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ