ಆ್ಯಪ್ನಗರ

ನಾಸಿಕ್‌ನಲ್ಲಿ 80 ಲೀಟರ್‌ ಡೀಸೆಲ್‌ ಕಳವು

ನಾಸಿಕ್‌ನಲ್ಲಿ ಟ್ರಕ್‌ ತಡೆದು ಚಾಲಕನನ್ನು ಥಳಿಸಿರುವ ದುಷ್ಕರ್ಮಿಗಳು ಟ್ಯಾಂಕ್‌ನಿಂದ 80 ಲೀಟರ್‌ ಡೀಸೆಲ್‌ ದರೋಡೆ ಮಾಡಿದ್ದಾರೆ.

TIMESOFINDIA.COM 26 Sep 2018, 1:42 pm
ನಾಸಿಕ್‌: ಪೆಟ್ರೋಲ್‌ ಮತ್ತು ಡಿಸೇಲ್‌ ಬೆಲೆ ಗಗನಮುಖಿಯಾಗಿದ್ದು, ನಾಸಿಕ್‌ನಲ್ಲಿ ಕ್ರಿಮಿನಲ್‌ಗಳು ತೈಲ ಕಳವಿಗೆ ತೊಡಗಿದ್ದಾರೆ. ನಾಸಿಕ್‌ನಲ್ಲಿ ಟ್ರಕ್‌ ತಡೆದು ಚಾಲಕನನ್ನು ಥಳಿಸಿರುವ ದುಷ್ಕರ್ಮಿಗಳು ಟ್ಯಾಂಕ್‌ನಿಂದ 80 ಲೀಟರ್‌ ಡೀಸೆಲ್‌ ದರೋಡೆ ಮಾಡಿದ್ದಾರೆ.
Vijaya Karnataka Web police


ಚಾಲಕ ನೀಡಿದ ದೂರು ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಂಬದ್‌ನ ಚುಂಚಲೆ ಶಿವಾರದಲ್ಲಿ ಟ್ರಕ್‌ ಚಾಲಕ ಹರಿಯಾಣಾದ ಭೀಮ್‌ಸಿಂಗ್‌ ಚಂದನ್‌ಸಿಂಗ್‌ ಅವರನ್ನು ಧ್ಯಾನೇಶ್ವರ್‌ ಅಂಬೊರೆ, ನಿತೇಶ್‌ ಕಲ್ಯಾಣ್‌ಕರ್‌, ಜೇಮ್ಸ್‌ ಮಾರ್ಟಿನ್‌ ಎಂಬವರು ಥಳಿಸಿ ಡಿಸೇಲ್‌ ಒಯ್ದಿದ್ದಾರೆ.

ಚಾಲಕ ರೆಸ್ಟೋರೆಂಟ್‌ ಎದುರು ಟ್ರಕ್‌ ನಿಲ್ಲಿಸಿದ್ದರು. ಆಗ ಮೂವರು ಬಂದು ಚಾಲಕನನ್ನು ಥಳಿಸಿ ಕೀ ಕಿತ್ತುಕೊಂಡು ಟ್ರಕ್‌ ಅನ್ನು ಮೂರು ಕೀ.ಮೀ ದೂರ ಚಲಾಯಿಸಿದ್ದಾರೆ. ಮತ್ತಿಬ್ಬರು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ.

ಗಾಯಗೊಂಡ ಟ್ರಕ್‌ ಚಾಲಕ ಚಂದನ್‌ ಸಿಂಗ್‌ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ