ಆ್ಯಪ್ನಗರ

ಮನೆಯಲ್ಲಿ ಅಡುಗೆ ಮಾಡಬೇಕು, ಹೀಗಾಗಿ ಕಚೇರಿಗೆ ಲೇಟ್‌: ಸಿಬ್ಬಂದಿ ಪತ್ರ ವೈರಲ್

ಮನೆಯಲ್ಲಿ ಬಹಳಷ್ಟು ಕೆಲಸಗಳಿವೆ, ಹೀಗಾಗಿ ಕಚೇರಿಗೆ ಬರುವುದು ತಡವಾಗುತ್ತಿದೆ.. ಹೀಗೆಂದು ತಡವಾಗುತ್ತಿರುವುದಕ್ಕೆ ಉತ್ತರ ಪ್ರದೇಶದ ಬಾಂದಾದ ವಾಣಿಜ್ಯ ತೆರಿಗೆ ಇಲಾಖೆಯ ಟೈಪಿಸ್ಟ್‌ ನೀಡಿರುವ ಉತ್ತರದ ಪತ್ರ ವೈರಲ್ ಆಗಿದೆ.

Navbharat Times 22 Aug 2018, 6:40 pm
[ಮೂಲ ಸುದ್ದಿ: ನವಭಾರತ್ ಟೈಮ್ಸ್, 22 ಆಗಸ್ಟ್ 2018]
Vijaya Karnataka Web 11.


ಲಖನೌ:
ಮನೆಯಲ್ಲಿ ಬಹಳಷ್ಟು ಕೆಲಸಗಳಿವೆ, ಹೀಗಾಗಿ ಕಚೇರಿಗೆ ಬರುವುದು ತಡವಾಗುತ್ತಿದೆ.. ಹೀಗೆಂದು ತಡವಾಗುತ್ತಿರುವುದಕ್ಕೆ ಉತ್ತರ ಪ್ರದೇಶದ ಬಾಂದಾದ ವಾಣಿಜ್ಯ ತೆರಿಗೆ ಇಲಾಖೆಯ ಟೈಪಿಸ್ಟ್‌ ನೀಡಿರುವ ಉತ್ತರದ ಪತ್ರ ವೈರಲ್ ಆಗಿದೆ.

ಅಶೋಕ್ ಕುಮಾರ್ ಕಚೇರಿಗೆ ದಿನವೂ ತಡವಾಗಿ ಆಗಮಿಸುತ್ತಿದ್ದು, ಮೇಲಧಿಕಾರಿ ಕಾರಣ ಕೋರಿದ್ದರು. ಅವರಿಗೆ ಪತ್ರಮುಖೇನ ಉತ್ತರಿಸಿದ ಅಶೋಕ್, ಮನೆಯಲ್ಲಿ ಹೆಂಡತಿ ಅನಾರೋಗ್ಯ ಪೀಡಿತಳಾಗಿದ್ದಾಳೆ. ಹೀಗಾಗಿ ನಾನೇ ಅಡುಗೆ ಮಾಡಬೇಕಿದೆ. ಬಟ್ಟೆ ಒಗೆಯುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮತ್ತು ಪತ್ನಿಗೆ ಆಹಾರ ನೀಡುವುದು ಹೀಗೆ ವಿವಿಧ ಕೆಲಸಗಳಿವೆ.


ನನಗೆ ಸರಿಯಾಗಿ ರೋಟಿ ಮಾಡಲು ಬರುವುದಿಲ್ಲ. ಹೀಗಾಗೊ ಕಿಚಡಿಯನ್ನೇ ತಿನ್ನಬೇಕಿದೆ. ಇಷ್ಟೆಲ್ಲ ಕೆಲಸ ಮುಗಿಸಿ ಕಚೇರಿಗೆ ಹೊರಡುವುದು ತಡವಾಗುತ್ತದೆ. ರಸ್ತೆ ಕೂಡ ಸರಿಯಾಗಿಲ್ಲ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವುದರಿಂದ ಕಚೇರಿಗೆ ಬರುವುದು ತಡವಾಗುತ್ತದೆ ಎಂದು ಕಾರಣ ನೀಡಿದ್ದಾರೆ.


ಈ ಕಾರಣ ಬರೆದಿರುವ ಪತ್ರ ವೈರಲ್ ಆಗಿದ್ದು, ಉಪ ಆಯುಕ್ತರು ಅದನ್ನು ಓದಿ ಅಚ್ಚರಿಗೊಳಗಾಗಿದ್ದಾರೆ. ಅಶೋಕ್‌ಗೆ ಎಚ್ಚರಿಕೆ ನೀಡಲಾಗಿದ್ದು, ಮುಂದೆ ತಡಮಾಡುವುದಿಲ್ಲ, ಕಚೇರಿಗೆ ಬೇಗನೆ ಬರುತ್ತೇನೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ