ಆ್ಯಪ್ನಗರ

'ಲವ್‌ ಜಿಹಾದ್'‌ ತಡೆಯಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಯೋಗಿ!

ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಳೊಂದಿಗೆ ಸಭೆ ನಡೆಯುತ್ತಿದ್ದಾಗ, ರಾಜ್ಯದ ವಿವಿಧ ಭಾಗಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವ ವಿಚಾರ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆದು ಅಗತ್ಯವಿದ್ದರೆ ಯೋಜನೆ ರೂಪಿಸುವಂತೆ ಸೂಚನೆ ನೀಡಿದ್ದರು.

Agencies 29 Aug 2020, 10:24 am
ಉತ್ತರ ಪ್ರದೇಶ: ಲವ್ ಜಿಹಾದ್ ತಡೆಯುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಲವ್ ಜಿಹಾದ್ ಘಟನೆಗಳನ್ನ ತಡೆಯುವಂತೆ ಈ ಸಂಬಂಧ ಹೊಸ ಕಾನೂನಿನ ಅಗತ್ಯವಿದೆಯಾ? ಎಂದು ನೋಡಿಕೊಂಡು ಹೊಸ ಯೋಜನೆ ಸಿದ್ಧಪಡಿಸುವಂತೆ ಸಿಎಂ ಯೋಗಿ ಆದಿತ್ಯನಾಥ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Vijaya Karnataka Web YOGI ADITYANATH


ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಳೊಂದಿಗೆ ಸಭೆ ನಡೆಯುತ್ತಿದ್ದಾಗ, ರಾಜ್ಯದ ವಿವಿಧ ಭಾಗಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವ ವಿಚಾರ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆದು, ಅಗತ್ಯವಿದ್ದರೆ ಯೋಜನೆ ರೂಪಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಗೃಹ ಇಲಾಖೆ ಭಾರೀ ಸಕ್ರಿಯವಾಗಿದ್ದು, ರೌಡಿಗಳನ್ನ ಮಟ್ದ ಹಾಕಲು ಯೋಜನೆಗಳನ್ನ ರೂಪಿಸಿತ್ತು. ಅಲ್ಲದೆ ಈ ಹಿಂದೆ ರೋಡ್‌ ರೋಮಿಯೋಗಳ ಮಟ್ಟ ಹಾಕಲು ವಿಶೇಷ ತಂಡವೊಂದನ್ನ ರಚಿಸಿತ್ತು.

ಭಯೋತ್ಪಾದನೆಗೆ ಹಣಕಾಸು ನೆರವು: ಉಗ್ರ ಹಫೀಜ್‌ ಸಯ್ಯದ್‌ನ ಅತ್ಯಾಪ್ತರಿಗೆ ಪಾಕ್‌ ಕೋರ್ಟ್‌ನಿಂದ 16 ವರ್ಷ ಜೈಲು ಶಿಕ್ಷೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ