ಆ್ಯಪ್ನಗರ

ಇದು ಸತ್ಯ: ಮೇವು ಬೇಡ, ಚಿಕನ್ , ಮೀನು ಫ್ರೈ ಬೇಕೆನ್ನುತ್ತಿವೆಯಂತೆ ಗೋವಾದ ಗೋವುಗಳು

ಗೋವು ಮಾಂಸಾಹಾರವನ್ನು ಭಕ್ಷಿಸುತ್ತದೆ ಎಂದರೆ ನಬಲು ಸಾಧ್ಯವೇ? ಆದರೆ ಗೋವಾದ ಸಚಿವರೊಬ್ಬರು ಹೇಳುವ ಪ್ರಕಾರ ಇದು ಸತ್ಯ. ಅವರದನ್ನು ಕಣ್ಣಾರೆ ಕಂಡಿದ್ದು, ಅಂತ ಮಾಂಸಾಹಾರಿಗಳಾಗಿ ಬದಲಾಗಿರುವ ಅವುಗಳಿಗೆ ಸಸ್ಯಾಹಾರ ತಿನ್ನಿಸಲು ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

TIMESOFINDIA.COM 22 Oct 2019, 2:25 pm
ಪಣಜಿ: ಭಾರತದಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ. ಸೌಮ್ಯ ಸ್ವಭಾವಕ್ಕೆ ಅನ್ವರ್ಥಕ ಎನಿಸುವ ಗೋವು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಆದರೆ ಗೋವಾದ ತ್ಯಾಜ್ಯ ನಿರ್ವಹಣಾ ಸಚಿವ ಮೈಕಲ್ ಲೊಬೊ ಇತ್ತೀಚಿಗೆ ನೀಡಿರುವ ಹೇಳಿಕೆ ನಿಜಕ್ಕೂ ನಂಬುವುದಕ್ಕೆ ಕಷ್ಟ ಎನ್ನಿಸುವಂತದ್ದು. ಅವರ ಪ್ರಕಾರ ಅಲ್ಲಿನ ಬೀದಿ ಹಸುಗಳು ಮಾಂಸಾಹಾರಕ್ಕೆ ಅಡಿಕ್ಟ್ ಆಗಿವೆಯಂತೆ...
Vijaya Karnataka Web ಬೀಡಾಡಿ ದನಗಳು


ಇದು ಸತ್ಯ, ಗೋವಾದ ಕಲಂಗೂಟ್, ಗ್ರಾಮದಲ್ಲಿ ಓಡಾಡಿಕೊಂಡಿದ್ದ 76 ಬೀದಿ ಹಸುಗಳನ್ನು ಗೋಶಾಲೆಗೆ ಸಾಗಿಸಲಾಯಿತು. ಅಲ್ಲಿ ಅವು ಸಸ್ಯಾಹಾರ ತಿನ್ನಲು ನಿರಾಕರಿಸಿದವು. ಕೊನೆಗೆ ತಿಳಿದುಬಂದ ಸತ್ಯವೇನೆಂದರೆ ಅವು ಸಂಪೂರ್ಣವಾಗಿ ಸಸ್ಯಾಹಾರ ತ್ಯಜಿಸಿ ಮಾಂಸಾಹಾರಕ್ಕೆ ಒಗ್ಗಿಕೊಂಡಿವೆ ಎಂಬುದು.

ಹಸುವಿನ ಮೈ ಸವರಿದರೆ ಉಸಿರಾಟದ ಸಮಸ್ಯೆ ಮಾಯ!

''ಪ್ರಸಿದ್ಧ ಕಲಂಗೂಟ್, ಕಾಂಡೋಲಿಮ್ ಸಮುದ್ರ ತೀರಗಳಲ್ಲಿ ಓಡಾಡಿಕೊಂಡಿದ್ದ ಹಸುಗಳು ಪಕ್ಕಾ ಮಾಂಸಾಹಾರಿಗಳಾಗಿ ಬದಲಾಗಿದ್ದು, ಫ್ರೈ ಮಾಡಿದ ಮೀನು, ಚಿಕನ್ ತ್ಯಾಜ್ಯಗಳನ್ನು ತಿನ್ನುತ್ತವೆ. ಕಲಂಗೂಟ್ ತೀರದಿಂದ ನಾವು 76 ಹಸುಗಳನ್ನು ಗೋಶಾಲೆಗೆ ಸಾಗಿಸಿದೆವು. ಅವುಗಳಿಗೆ ಹುಲ್ಲು, ಧಾನ್ಯ ಮತ್ತು ಜಾನುವಾರುಗಳಿಗೆ ನೀಡಲಾಗುವ ಇತರ ಸಸ್ಯಾಹಾರವನ್ನು ನೀಡಿದಾಗ ಅವು ತಿನ್ನಲು ನಿರಾಕರಿಸಿದವು, ಇದು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿತು'', ಎಂದಿದ್ದಾರೆ ಕಲಂಗೂಟ್ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಲೋಬೋ .

ಐದು ಗಂಟೆ ಸರ್ಜರಿ ಮಾಡಿ ಆಕಳ ಹೊಟ್ಟೆಯಿಂದ ತೆಗೆದರು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್

ಸಮುದ್ರ ತೀರಗಳಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಹೊರಕ್ಕೆಸೆಯಲಾದ ಆಹಾರ ಅವರಿಗೆ ರುಚಿ ಹಿಡಿಸಿಬಿಟ್ಟಿದೆ. ಎಲ್ಲ ದನಗಳಂತೆ ಮೊದಲು ಇವು ಸಹ ಸಸ್ಯಾಹಾರಿಗಳಾಗಿದ್ದವು. ಮತ್ತೀಗ ಮಾಂಸಾಹಾರದ ವಾಸನೆ ಹಿಡಿದು ನಡೆಯುತ್ತವೆ. ಕಲಂಗೂಟ್ ಹಸುಗಳಂತೂ ಜಪ್ಪಯ್ಯ ಎಂದರೂ ಮಾಂಸಾಹಾರ ಬಿಟ್ಟು ಬೇರೇನೂ ಮುಟ್ಟುವುದಿಲ್ಲವಂತೆ.

ಮತ್ತೀಗ ಪಶು ವೈದ್ಯರು ಗೋಶಾಲೆಯಲ್ಲಿರುವ ದನಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದು ನಾಲ್ಕೈದು ದಿನಗಳಲ್ಲಿ ಅವು ಸಸ್ಯಾಹಾರ ತಿನ್ನಲು ಆರಂಭಿಸಬಹುದೆಂದು ಭಾವಿಸಲಾಗಿದೆ.

ಯಾರಿದಕ್ಕೆ ಹೊಣೆ:ಈ ಮುಗ್ಧ ಪ್ರಾಣಿಗಳು ಈ ರೀತಿ ಆಹಾರ ಪದ್ಧತಿಯನ್ನೇ ತಬದಲಾಯಿಸಿಕೊಳ್ಳುವಂತಾಗಲು ನಾವೇ ಕಾರಣರು. ಅವುಗಳಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಜತೆಗೆ ನಾವು ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬೀಸಾಡುವುದರ ಪರಿಣಾಮವಿದು. ಇದಕ್ಕೆ ನಾವೇ ಜವಾಬ್ದಾರರು ಎನ್ನುತ್ತಾರೆ ಲೋಬೋ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ