ಆ್ಯಪ್ನಗರ

ಪಕ್ಷಾಂತರ ಪರ್ವ ಆರಂಭ

ಪಂಜಾಬ್‌ನಲ್ಲಿ ಆಪ್‌ ಶಾಸಕ ಸುಖಪಾಲ್‌ ಸಿಂಗ್‌ ಖೈರಾ ಹಾಗೂ ಕಾಶ್ಮೀರ ಕಣಿವೆಯಲ್ಲಿ ಪಿಡಿಪಿ ಹಿರಿಯ ನಾಯಕ ಜಾವೇದ್‌ ಮುಸ್ತಫಾ ಪಿರ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರೂ ಸದ್ಯದಲ್ಲೇ ಬೇರೆ ಪಕ್ಷಕ್ಕೆ ಸೇರುವ ನಿರೀಕ್ಷೆ ಇದೆ.

Vijaya Karnataka 7 Jan 2019, 5:00 am
ಚಂಡೀಗಢ/ಶ್ರೀನಗರ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಶುರುವಾಗಿದ್ದು ಭಾನುವಾರ ಹರಿಯಾಣದಲ್ಲಿ ಶಿರೋಮಣಿ ಅಕಾಲಿದಳದ ಶಾಸಕ ಬಲ್‌ಕೌರ್‌ ಸಿಂಗ್‌, ಅಜಯ್‌ ಚೌಟಾಲ ಅವರ ನೂತನ 'ಜನನಾಯಕ ಜನತಾ ಪಕ್ಷ' (ಜೆಜೆಪಿ) ಸೇರಿದ್ದಾರೆ.
Vijaya Karnataka Web sukhpal singh khaira resigns from aaps primary membership
ಪಕ್ಷಾಂತರ ಪರ್ವ ಆರಂಭ


ಇತ್ತ ಪಂಜಾಬ್‌ನಲ್ಲಿ ಆಪ್‌ ಶಾಸಕ ಸುಖಪಾಲ್‌ ಸಿಂಗ್‌ ಖೈರಾ ಹಾಗೂ ಕಾಶ್ಮೀರ ಕಣಿವೆಯಲ್ಲಿ ಪಿಡಿಪಿ ಹಿರಿಯ ನಾಯಕ ಜಾವೇದ್‌ ಮುಸ್ತಫಾ ಪಿರ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರೂ ಸದ್ಯದಲ್ಲೇ ಬೇರೆ ಪಕ್ಷಕ್ಕೆ ಸೇರುವ ನಿರೀಕ್ಷೆ ಇದೆ.

ಹರಿಯಾಣದ ಕಲನ್‌ವಾಲಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಕಾಲಿದಳದ ಶಾಸಕ ಬಲ್‌ಕೌರ್‌ ಸಿಂಗ್‌, ಜನನಾಯಕ ಜನತಾ ಪಕ್ಷದ ತತ್ವಾದರ್ಶ ಹಾಗೂ ದೂರದೃಷ್ಟಿಯನ್ನು ಮೆಚ್ಚಿ ಪಕ್ಷ ಸೇರಿದ್ದಾಗಿ ತಿಳಿಸಿದ್ದಾರೆ. ಬಲ್‌ಕೌರ್‌ ಅವರ ಸೇರ್ಪಡೆ ಪಕ್ಷ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಅಜಯ್‌ ಚೌಟಾಲ ಹೇಳಿದ್ದಾರೆ.

ಇತ್ತ ಆಪ್‌ ಪಕ್ಷದ ಬಂಡಾಯ ನಾಯಕ ಪಂಜಾಬ್‌ನ ಬೋಲತ್‌ ಕ್ಷೇತ್ರದ ಶಾಸಕ ಸುಖಪಾಲ್‌ ಸಿಂಗ್‌ ಖೈರಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮತ್ತೊಬ್ಬ ಆಪ್‌ ಶಾಸಕ ಎಚ್‌.ಎಸ್‌. ಫೋಲ್ಕ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಖೈರಾ ಹೊರ ನಡೆದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ಪಕ್ಷದಿಂದ ಅಮಾನತುಗೊಂಡಿದ್ದ ಖೈರಾ, ರಾಜೀನಾಮೆ ಪತ್ರವನ್ನು ಆಪ್‌ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ರವಾನಿಸಿದ್ದಾರೆ. ''ಆಪ್‌ ಪಕ್ಷವು ಸಿದ್ಧಾಂತಗಳಿಂದ ವಿಮುಖವಾಗುತ್ತಿದ್ದು, ಸರ್ವಾಧಿಕಾರ ಧೋರಣೆ ತಾಂಡವಾಡುತ್ತಿದೆ. ಇದರಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದೇನೆ,'' ಎಂದಿದ್ದಾರೆ.

ಇನ್ನು ಕಾಶ್ಮೀರದ ಚಡೂರ ಕ್ಷೇತ್ರದ ಪಿಡಿಪಿ ಶಾಸಕ ಜಾವೇದ್‌ ಮುಸ್ತಫಾ ಮಿರ್‌, ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಪಕ್ಷದಿಂದ ಹೊರ ನಡೆದಿದ್ದಾರೆ. ಇವರು ಹಿಂದಿನ ಪಿಡಿಪಿ-ಬಿಜೆಪಿ ದೋಸ್ತಿ ಸರಕಾರದಲ್ಲಿ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ