ಆ್ಯಪ್ನಗರ

ಸುನಂದಾ ಸಾವಿನ ಕಾರಣ ಅಸ್ಪಷ್ಟ: ತಜ್ಞರ ತಂಡ

ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ಅವರ ಸಾವಿನ ನಿಖರ ಕಾರಣ ಪತ್ತೆ ಹಚ್ಚುವಲ್ಲಿ ಹೊಸ ವೈದ್ಯಕೀಯ ಮಂಡಳಿ ವಿಫಲವಾಗಿದೆ.

Vijaya Karnataka Web 29 Jan 2017, 8:33 am

ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ಅವರ ಸಾವಿನ ನಿಖರ ಕಾರಣ ಪತ್ತೆ ಹಚ್ಚುವಲ್ಲಿ ಹೊಸ ವೈದ್ಯಕೀಯ ಮಂಡಳಿ ವಿಫಲವಾಗಿದೆ. ಫೆಡರಲ್‌ ತನಿಖಾ ಸಂಸ್ಥೆಯ ಪ್ರಯೋಗಾಲಯ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ 'ಎಐಐಎಂಎಸ್‌' ಜತೆಗೂಡಿ ನಡೆಸಿದ ಸುನಂದಾ ಸಾವಿನ ತನಿಖೆಯ ವರದಿಯನ್ನು ಪರಿಶೀಲಿಸಿ ಅಂತಿಮ ನಿರ್ಣಯ ಕೈಗೊಳ್ಳಲು ರಚಿಸಲಾಗಿದ್ದ ಹೊಸ ವೈದ್ಯಕೀಯ ಮಂಡಳಿಗೂ ಸುನಂದಾ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ವಿಫಲವಾಗಿದೆ.

Vijaya Karnataka Web sunanda pushkar death no causes found
ಸುನಂದಾ ಸಾವಿನ ಕಾರಣ ಅಸ್ಪಷ್ಟ: ತಜ್ಞರ ತಂಡ


ಇನ್ನು ಸುನಂದಾ ಸಾವಿನ ಕಾರಣ ತಿಳಿಯಲು ಇರುವ ಏಕೈಕ ಮಾರ್ಗವೆಂದರೆ ಅವರ ಬ್ಲಾಕ್‌ಬೆರ್ರಿ ಮೊಬೈಲ್‌ನಲ್ಲಿ ನಡೆಸಿರುವ ಸಂಭಾಷಣೆಯ ವಿವರ ಮಾತ್ರ. ಈಗ ವಿಶೇಷ ತನಿಖಾ ತಂಡ ಅದರ ವಿವರಕ್ಕಾಗಿ ಕಾಯುತ್ತಿದೆ. ಸುನಂದಾ ಸಾವಿನ ನಂತರ ಬ್ಲಾಕ್‌ಬೆರ್ರಿ ಮೊಬೈಲ್‌ನಲ್ಲಿದ್ದ ಎಲ್ಲಾ ಸಂದೇಶಗಳನ್ನು ಅಳಿಸಿ ಹಾಕಲಾಗಿದೆ. ಈಗ ಅದನ್ನು ಮರಳಿ ಪಡೆಯುವ ಪ್ರಯತ್ನ ನಡೆಯುತ್ತಿದೆ. ಪುಷ್ಕರ್‌ ಬಳಸುತ್ತಿದ್ದ ಲ್ಯಾಪ್‌ಟಾಪ್‌ ಅನ್ನು ಅಹ್ಮದಾಬಾದ್‌ನ ಪ್ರಯೋಗಾಲಯವೊಂದು ಪರಿಶೀಲಿಸುತ್ತಿದ್ದು, ಇದು ನೀಡುವ ವರದಿಗಾಗಿ ವಿಶೇಷ ತನಿಖಾ ತಂಡ ಕಾಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ