ಆ್ಯಪ್ನಗರ

ಚುನಾವಣಾ ವೆಚ್ಚ ಮಿತಿ ದಾಟಿದ ಸಂಸದ ಸನ್ನಿ ಡಿಯೋಲ್‌ಗೆ ಸಂಕಷ್ಟ

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು 70 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿತ್ತು.

PTI 7 Jul 2019, 5:00 am
ಚಂಡೀಗಢ: ಇತ್ತೀಚೆಗಷ್ಟೇ ತಾವು ಪ್ರತಿನಿಧಿಸುವ ಗುರುದಾಸ್‌ಪುರ ಲೋಕಸಭಾ ಕ್ಷೇತ್ರಕ್ಕೆ ಪ್ರತಿನಿಧಿ ನೇಮಿಸಿ ವಿವಾದಕ್ಕೀಡಾಗಿದ್ದ ಬಿಜೆಪಿ ಸಂಸದ ಸನ್ನಿ ಡಿಯೋಲ್‌ ಚುನಾವಣಾ ವೆಚ್ಚಕ್ಕೆ ನಿಗದಿಗೊಳಿಸಿದ್ದ 70 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು 70 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿತ್ತು. ಆದರೆ ಸನ್ನಿ ಡಿಯೋಲ್‌ 78,51,592 ರೂ. ಖರ್ಚು ಮಾಡಿದ್ದಾರೆಂದು ಜಿಲ್ಲಾ ಚುನಾವಣಾ ಕಚೇರಿಯು, ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂದಿನ ಕ್ರಮದ ಕುರಿತು ಆಯೋಗವು ವಿವರಣೆ ಕೋರಿ ಡಿಯೋಲ್‌ಗೆ ನೋಟಿಸ್‌ ನೀಡಲಿದೆ ಎಂದು ಮೂಲಗಳು ಹೇಳಿವೆ. ಚುನಾವಣಾ ವೆಚ್ಚ ಮಿತಿಗಿಂತಲೂ ಸನ್ನಿ ಡಿಯೋಲ್‌ 8.51 ಲಕ್ಷ ರೂ. ಅಧಿಕವಾಗಿ ಖರ್ಚು ಮಾಡಿದ್ದರೆ, ಅವರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಸುನೀಲ್‌ ಜಾಖಡ್‌ 61,36,058 ರೂ. ಖರ್ಚು ಮಾಡಿದ್ದಾರೆ ಎಂದು ವರದಿ ಹೇಳಿದೆ. ಸನ್ನಿ ಡಿಯೋಲ್‌ ಅವರು ಜಾಖಡ್‌ ವಿರುದ್ಧ 82,459 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.
Vijaya Karnataka Web sunny

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ