ಆ್ಯಪ್ನಗರ

ನ್ಯೂಯಾರ್ಕ್‌ ಫ್ಯಾಷನ್‌ ವೀಕ್‌ನಲ್ಲಿ ಸನ್ನಿ ನಡಿಗೆ

ಅಮೆರಿಕದಲ್ಲಿ ನಡೆಯಲಿರುವ 'ನ್ಯೂಯಾರ್ಕ್‌ ಫ್ಯಾಷನ್‌ ವೀಕ್‌' ಸಪ್ತಾಹದಲ್ಲಿ ರಾರ‍ಯಂಪ್‌ ಮೇಲೆ ಸನ್ನಿ ಲಿಯೋನ್‌ ಹೆಜ್ಜೆ ಹಾಕಲಿದ್ದಾರೆ.

ಏಜೆನ್ಸೀಸ್ 5 Sep 2016, 4:00 am

ಮುಂಬಯಿ: ನೀಲಿ ಚಿತ್ರಗಳ ಮಾಜಿ ತಾರೆ ಹಾಗೂ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಮುಂದಿನ ವಾರ ಅಮೆರಿಕದಲ್ಲಿ ನಡೆಯಲಿರುವ 'ನ್ಯೂಯಾರ್ಕ್‌ ಫ್ಯಾಷನ್‌ ವೀಕ್‌' ಸಪ್ತಾಹದಲ್ಲಿ ರಾರ‍ಯಂಪ್‌ ಮೇಲೆ ಹೆಜ್ಜೆ ಹಾಕಲಿದ್ದಾರೆ. ಈ ಪ್ರತಿಷ್ಠಿತ ಫ್ಯಾಶನ್‌ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತ ಮೊದಲ ಬಾಲಿವುಡ್‌ ನಟಿ ಇವರಾಗಿದ್ದಾರೆ ಎಂದು ಹೇಳಲಾಗಿದೆ.

ಸನ್ನಿಯೇ ಟ್ವಿಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ''ಕನಸೊಂದು ನಿಜವಾಗುವ ಸಮಯ ಬಂದಿದೆ. ಸೆ.8ರಂದು ನಡೆಯಲಿರುವ ನ್ಯೂಯಾರ್ಕ್‌ ಫ್ಯಾಷನ್‌ ವೀಕ್‌ನಲ್ಲಿ ರಾರ‍ಯಂಪ್‌ ಮೇಲೆ ಹೆಜ್ಜೆ ಹಾಕುವೆ,'' ಎಂದು ಸನ್ನಿ ಟ್ವೀಟ್‌ ಮಾಡಿದ್ದಾರೆ.

ಸೆ.8ರಂದು ನಡೆಯುವ ಈ ಫ್ಯಾಶನ್‌ ಹಬ್ಬ 15ರವರೆಗೆ ನಡೆಯಲಿದೆ. ಖ್ಯಾತ ವಸ್ತ್ರ ವಿನ್ಯಾಸಕಿ ಅರ್ಚನಾ ಕೊಚಾರ್‌ ಅವರು ತಮ್ಮ ತಾಜ್‌ಮಹಲ್‌ ಭೇಟಿ ಹಾಗೂ ಬಂಜಾರ ಬುಡಕಟ್ಟು ನಿವಾಸಿಗಳ ಉಡುಗೆ-ತೊಡುಗೆಯಿಂದ ಪ್ರೇರೇಪಿತಗೊಂಡು ಸಿದ್ಧಪಡಿಸಿದ ವಸ್ತ್ರ ವಿನ್ಯಾಸದಲ್ಲಿ ಸನ್ನಿ ಲಿಯೋನ್‌ ಮಿಂಚಲಿದ್ದಾರೆ. ಇದೇ ವೇಳೆ 'ಬ್ರಿಂಗ್‌ ಬ್ಯೂಟಿ ಬ್ಯಾಕ್‌' ಆಂದೋಲನವನ್ನು ಬೆಂಬಲಿಸಿ ಆ್ಯಸಿಡ್‌ ದಾಳಿಯಲ್ಲಿ ಬದುಕುಳಿದ ರೇಷ್ಮಾ ಬಾನೂ ಖುರೇಷಿ ಅವರು ಸನ್ನಿ ಜತೆ ಹೆಜ್ಜೆ ಹಾಕಲಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ