ಆ್ಯಪ್ನಗರ

ಅನರ್ಹ ಶಾಸಕರು ತುಸು ನಿರಾಳ: ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಸಮ್ಮತಿ

ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರಕ್ರಾಂತಿ ಮಾಡಿ ಅನರ್ಹಗೊಂಡಿರುವ ರಾಜಕಾರಣಿಗಳು ಈಗ ಕಾನೂನು ಹೋರಾಟದ ಮೊರೆ ಹೋಗಿದ್ದಾರೆ. 17 ಅನರ್ಹರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಓಕೆ ಎಂದಿದೆ.

Vijaya Karnataka Web 27 Aug 2019, 8:20 pm
ಹೊಸದಿಲ್ಲಿ: ಸ್ಪೀಕರ್ ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿ ಸೂಚಿಸಿದೆ.
Vijaya Karnataka Web ಅನರ್ಹ ಶಾಸಕರು
ಅನರ್ಹ ಶಾಸಕರು


ವಿಚಾರಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದ್ದರಿಂದ ಸದ್ಯಕ್ಕೆ ಅನರ್ಹರು ನಿಟ್ಟುಸಿರು ಬಿಟ್ಟಿದ್ದಾರೆ.

ಅನರ್ಹ ಶಾಸಕರ ‌ಪರ‌ ಹಿರಿಯ ವಕೀಲ ವಿ.ಗಿರಿ ತ್ವರಿತ ವಿಚಾರಣೆ ಕೋರಿ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ, ರಿಜಿಸ್ಟ್ರಾರ್‌ಗೆ ಪ್ರಕರಣವನ್ನು ಲಿಸ್ಟ್ ಮಾಡುವಂತೆ ಸೂಚಿಸಿತು.

ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಇದೇ ವಾರ ಲಿಸ್ಟ್ ಮಾಡುವ ಸಾಧ್ಯತೆ ಇದೆ. ಬಹುತೇಕ ಒಂದೆರಡು ವಾರದಲ್ಲಿ ವಿಚಾರಣೆ ಆರಂಭವಾಗಬಹುದು.

ರಿಜಿಸ್ಟ್ರಾರ್‌ ಲಿಸ್ಟ್‌ ಮಾಡಿದ ನಂತರ ಸಂಬಂಧಪಟ್ಟವರಿಗೆ ನೋಟಿಸ್‌ ಕಳುಹಿಸಲಾಗುವುದು. ವಿಚಾರಣೆ ದಿನ ಹಾಜರಾಗುವಂತೆ ಕಾಲಾವಕಾಶ ನೀಡಲಾಗುವುದು.

ಒಂದು ಅಥವಾ ಎರಡು ವಾರದಲ್ಲಿ ವಿಚಾರಣೆಗೆ ಬರಬಹುದು ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ