ಆ್ಯಪ್ನಗರ

ಅಯೋಧ್ಯೆ ಮೂಲದಾವೆ ವಿಚಾರಣೆ ಮತ್ತೆ ಮುಂದೂಡಿಕೆ

ಜನವರಿ 29ರಂದು ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ ಅವರು ಲಭ್ಯರಿಲ್ಲದ ಕಾರಣ ಸಿಜೆಐ ರಂಜನ್ ಗೊಗೋಯ್ ಅಂದಿನ ವಿಚಾರಣೆಯನ್ನು ರದ್ದುಪಡಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಪ್ರಕಟಣೆ ತಿಳಿಸಿದೆ.

Vijaya Karnataka Web 27 Jan 2019, 9:26 pm

ಹೈಲೈಟ್ಸ್‌:

  • ಸಂವಿಧಾನ ಪೀಠದ ಸದಸ್ಯರಲ್ಲಿ ಒಬ್ಬರಾದ ಜಸ್ಟಿಸ್‌ ಎಸ್‌.ಎ ಬೊಬ್ಡೆ ಅವರು ಲಭ್ಯರಿಲ್ಲದ ಕಾರಣ ವಿಚಾರಣೆ ಮುಂದೂಡಿಕೆ
  • ಈ ಮೊದಲು ಇಬ್ಬರು ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿತ್ತು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸದಿಲ್ಲಿ: ಜನವರಿ 29ಕ್ಕೆ ಆರಂಭವಾಗಬೇಕಿದ್ದ ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂಮಾಲೀಕತ್ವ ವಿವಾದದ ಮೂಲ ದಾವೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದೂಡಿದೆ. ಪಂಚ ಸದಸ್ಯ ಸಂವಿಧಾನ ಪೀಠದ ಒಬ್ಬ ಸದಸ್ಯರು ಲಭ್ಯವಿಲ್ಲದ ಕಾರಣ ವಿಚಾರಣೆ ರದ್ದುಪಡಿಸಲಾಗಿದೆ.
ಜನವರಿ 29ರಂದು ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ ಅವರು ಲಭ್ಯರಿಲ್ಲದ ಕಾರಣ ಸಿಜೆಐ ರಂಜನ್ ಗೊಗೋಯ್ ಅಂದಿನ ವಿಚಾರಣೆಯನ್ನು ರದ್ದುಪಡಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಪ್ರಕಟಣೆ ತಿಳಿಸಿದೆ.

ಜಸ್ಟಿಸ್‌ ಯು.ಯು ಲಲಿತ್ ಅವರು ವಿಚಾರಣೆಯಿಂದ ಹಿಂದೆ ಸರಿದ ಬಳಿಕ ಜನವರಿ 25ರಂದು ಪಂಚ ನ್ಯಾಯಾಧೀಶರ ಪೀಠವನ್ನು ಪುನಾರಚಿಸಲಾಗಿತ್ತು. ನಂತರ ಇನ್ನೊಬ್ಬ ನ್ಯಾಯಾಧೀಶರಾದ ಎನ್‌.ವಿ ರಮಣ ಕೂಡ ವೈಯಕ್ತಿಕ ಕಾರಣವೊಡ್ಡಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್, ಎಸ್‌.ಎ ಬೊಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್‌ ಮತ್ತು ಎಸ್.ಎ ನಜೀರ್‌ ಪ್ರಸ್ತುತ ಸಂವಿಧಾನ ಪೀಠದ ಸದಸ್ಯರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ