ಆ್ಯಪ್ನಗರ

ಶಬರಿಮಲೆ ತೀರ್ಪು ನೀಡುವಾಗ ಸುಪ್ರೀಂಕೋರ್ಟ್‌ ಸಂಪ್ರದಾಯವನ್ನು ಪರಿಗಣಿಸಿಲ್ಲ: ಮೋಹನ್ ಭಾಗವತ್‌

ಸಮಾಜ ಒಪ್ಪಿಕೊಂಡಿರುವಂತಹ ಸಂಪ್ರದಾಯವನ್ನು ಸರ್ವೋಚ್ಛ ನ್ಯಾಯಾಲಯ ಪರಿಗಣಿಸಿಲ್ಲ. ಇದರಿಂದಾಗಿ ನಾಗರಿಕ ಸಮಾಜದಲ್ಲಿ ವಿಭಜನೆ ಹೆಚ್ಚಾಗುತ್ತಿದೆ ಎಂದು ಭಾಗವತ್ ಹೇಳಿದ್ದಾರೆ.

Vijaya Karnataka 18 Oct 2018, 3:15 pm
ನಾಗ್ಪುರ: ಶಬರಿಮಲೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಂಪ್ರದಾಯವನ್ನು ಪರಿಗಣಿಸಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಈ ಕಾರಣಗಳಿಂದಾಗಿಯೇ ಕೇವಲ ಹಿಂದೂ ಸಮಾಜದ ನಂಬಿಕೆಗಳ ಮಾತ್ರ ಯಾಕೆ ಪದೇ ಪದೇ ಈ ರೀತಿ ಆಗುತ್ತಿದೆ ಎಂಬಂತಹ ಪ್ರಶ್ನೆಗಳು ಜನರ ಮನಸ್ಸಿಗೆ ಬರುತ್ತದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಹೇಳಿದ್ದಾರೆ.
Vijaya Karnataka Web mohan bhagwat


''ಸಮಾಜದ ಶಾಂತಿ ಹಾಗೂ ಆರೋಗ್ಯಕ್ಕಾಗಿ ಈ ಪರಿಸ್ಥಿತಿ ಅನಾನುಕೂಲಕರ'' ಎಂದು ಸರಸಂಘಚಾಲಕ ವಾರ್ಷಿಕ ವಿಜಯದಶಮಿ ಭಾಷಣದ ವೇಳೆ ಹೇಳಿದ್ದಾರೆ. ಅಲ್ಲದೆ, ಎಲ್ಲ ಅಂಶಗಳನ್ನು ಹಾಗೂ ನಾಗರಿಕರ ಮನಸ್ಥಿತಿಯನ್ನು ಪರಿಗಣಿಸದೆ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಇದರಿಂದ ಹೊಸ ಸಾಮಾಜಿಕ ಕ್ರಮವು ಸೃಷ್ಟಿಯಾಗುವುದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಶಬರಿಮಲೆ ದೇವಾಲಯದ ತೀರ್ಪು ಸಹ ಇದೇ ಸಂಕಟದ ಪರಿಸ್ಥಿತಿಯನ್ನು ತೋರಿಸುತ್ತಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಕೋಟ್ಯಂತರ ಭಕ್ತರ ನಂಬಿಕೆ ಹಾಗೂ ಅಸಂಖ್ಯಾತ ಸಂಖ್ಯೆಯ ಮಹಿಳೆಯರ ಮನವಿಯನ್ನು ಸಹ ಸರ್ವೋಚ್ಛ ನ್ಯಾಯಾಲಯ ಪರಿಗಣಿಸಿಲ್ಲ. ಈ ತೀರ್ಪಿನಿಂದ ಸಮಾಜದಲ್ಲಿ ಶಾಂತಿ, ಸ್ಥಿರತೆ ಹಾಗೂ ಸಮಾನತೆ ಉಂಟಾಗುವ ಬದಲು ಅಶಾಂತಿ, ಪ್ರಕ್ಷುಬ್ಧತೆ ಮತ್ತು ವಿಭಜನೆಯನ್ನು ಸೃಷ್ಟಿ ಮಾಡಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಹೇಳಿದ್ದಾರೆ.

ಅಲ್ಲದೆ, ಆರೋಗ್ಯಕರ ಹಾಗೂ ಶಾಂತಿಯುತ ಸಾಮಾಜಿಕ ಜೀವನವನ್ನು ಕೇವಲ ಕಾನೂನು ಹಾಗೂ ಶಿಕ್ಷೆಗೆ ಹೆದರುವ ವಾತಾವರಣದ ಮೂಲಕ ಹಾಳು ಮಾಡುವುದನ್ನು ಜಗತ್ತಿನಲ್ಲಿ ಎಲ್ಲಿಯೂ ಕಾಣುವುದಿಲ್ಲ ಎಂದು ಭಾಗವತ್ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ