ಆ್ಯಪ್ನಗರ

ಅಯೋಧ್ಯೆ ಕೇಸ್: ಜನವರಿ 29ಕ್ಕೆ ವಿಚಾರಣೆ ಮುಂದೂಡಿಕೆ

ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಇಂದು ಮತ್ತೆ ಮುಂದೂಡಲಾಗಿದೆ. ಸಾಂವಿಧಾನಿಕ ಪೀಠದ ಪೈಕಿ ಒಬ್ಬರು ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿದ ಕಾರಣ ವಿಚಾರಣೆ ಜನವರಿ 29ರಂದು ಮುಂದೂಡಲಾಗಿದೆ.

TIMESOFINDIA.COM 10 Jan 2019, 6:57 pm

ಹೈಲೈಟ್ಸ್‌:

  • ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆ ಜ. 29ಕ್ಕೆ ಮುಂದೂಡಿಕೆ
  • ಪಂಚ ಸದಸ್ಯರ ಪೀಠದಿಂದ ಹಿಂದೆ ಸರಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಯು.ಯು.ಲಲಿತ್
  • ಜನವರಿ 29 ರಂದು ಪ್ರಕರಣದ ವಿಚಾರಣೆ ಆರಂಭವಾಗುವ ದಿನಾಂಕ ನಿಗದಿ ಸಾಧ್ಯತೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸದಿಲ್ಲಿ: ಧರ್ಮ ಮತ್ತು ರಾಜಕೀಯ ಬೆಸೆದುಕೊಂಡಿರುವ ಬಹು ಚರ್ಚಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಲಾಗಿದೆ. ಪ್ರಕರಣದ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಲಾಗಿದ್ದು, ಪಂಚ ಸದಸ್ಯರ ಸಂವಿಧಾನ ಪೀಠದ ಪೈಕಿ ಒಬ್ಬರು ನ್ಯಾಯಮೂರ್ತಿ ಈ ಕೇಸಿನ ವಿಚಾರಣೆಯಿಂದ ಹಿಂದೆ ಸರಿದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.

ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವನ್ನು ರಚಿಸಿದ್ದರು. ಆದರೆ, ಈ ಪೀಠದಿಂದ ನ್ಯಾಯಮೂರ್ತಿ ಯು.ಯು.ಲಲಿತ್ ಹಿಂದೆ ಸರಿದಿದ್ದು, ಈ ಹಿನ್ನೆಲೆ ಅವರ ಬದಲಿಗೆ ಬೇರೆ ನ್ಯಾಯಮೂರ್ತಿಯನ್ನು ಈ ಸಾಂವಿಧಾನಿಕ ಪೀಠಕ್ಕೆ ನೇಮಿಸಬೇಕಿದೆ. ಈ ಹಿನ್ನೆಲೆ ವಿಚಾರಣೆ ಜನವರಿ 29ಕ್ಕೆ ಮುಂದೂಡಲಾಗಿದೆ.



ಇನ್ನು, ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆ ಭೂ ವಿವಾದದ ಬಗ್ಗೆ ಯಾವುದೇ ವಿಚಾರಣೆ ನಡೆಯುವುದಿಲ್ಲ. ಕೇವಲ ವಿಚಾರಣೆ ಆರಂಭವಾಗುವ ದಿನಾಂಕ ನಿಗದಿಯನ್ನು ಘೋಷಿಸಲಾಗುವುದು ಎಂದು ವಿಚಾರಣೆಗೂ ಮುನ್ನವೇ ಘೋಷಿಸಲಾಗಿತ್ತು. ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಭಾಷಾಂತರ ಮಾಡಬೇಕಿರುವುದರಿಂದ ಹಾಗೂ ಪ್ರಕರಣದ ವಿಚಾರಣೆ ಎಂದಿನಿಂದ ಆರಂಭಿಸಲಾಗುವುದೆಂದು ಸುಪ್ರೀಂಕೋರ್ಟ್ ರಿಜಿಸ್ಟ್ರಿ ವರದಿ ನೀಡಬೇಕಿದೆ.


ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್‌ ನೇತೃತ್ವದ ಪಂಚ ಸದಸ್ಯರ ಪೀಠವನ್ನು ಇತ್ತೀಚೆಗೆ ರಚಿಸಲಾಗಿತ್ತು. ಆದರೆ, 1997ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ವೇಳೆ ಜಸ್ಟೀಸ್‌ ಲಲಿತ್, ವಕೀಲರಾಗಿ ವಾದ ಮಾಡಿದ್ದರು. ಈ ಹಿನ್ನೆಲೆ ಅವರು ಅಯೋಧ್ಯೆ ಭೂ ವಿವಾದ ಕೇಸ್‌ ನಡೆಸುವುದು ಸರಿಯಲ್ಲವೆಂದು ಇತರೆ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ. ಹೀಗಾಗಿ, ಪಂಚ ಸದಸ್ಯರ ಪೀಠದಿಂದ ನ್ಯಾಯಮೂರ್ತಿ ಯು.ಯು.ಲಲಿತ್ ಹಿಂದೆ ಸರಿದಿದ್ದಾರೆ.


ವಿವಾದಿತ 2.7 ಎಕರೆ ಜಾಗವನ್ನು ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ರಾಮಲಲ್ಲಾ ಟ್ರಸ್ಟ್‌, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಸಮನಾಗಿ ಹಂಚಿಕೆ ಮಾಡಿತ್ತು. ಇದರ ವಿರುದ್ಧ ಸುಮಾರು 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳ ವಿಚಾರಣೆ ಸುಪ್ರೀಂಕೋರ್ಟ್ ಪಂಚ ಸದಸ್ಯರ ಪೀಠದಲ್ಲಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ