ಆ್ಯಪ್ನಗರ

ನಾನೇ ಜಯಲಲಿತಾ ಮಗಳು ಎಂದವಳ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಬೆಂಗಳೂರು ಮೂಲದ ಮಹಿಳೆಯೊಬ್ಬರು ತಾನು ತಮಿಳುನಾಡಿನ ದಿ.ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಮಗಳು ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ

Vijaya Karnataka Web 27 Nov 2017, 1:27 pm
ಚೆನ್ನೈ: ಬೆಂಗಳೂರು ಮೂಲದ ಮಹಿಳೆಯೊಬ್ಬರು ತಾನು ತಮಿಳುನಾಡಿನ ದಿ.ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಮಗಳು ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಮಹಿಳೆಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಕರ್ನಾಟಕ ಹೈಕೋರ್ಟ್ ಮೊರೆ ಹೊಗುವಂತೆ ಸಲಹೆ ನೀಡಿದೆ.
Vijaya Karnataka Web supreme court hears womans writ petition today claiming jayalalithaa as her mother
ನಾನೇ ಜಯಲಲಿತಾ ಮಗಳು ಎಂದವಳ ಅರ್ಜಿ ತಿರಸ್ಕರಿಸಿದ ಸುಪ್ರೀಂ


ತಾನೇ ಜಯಲಲಿತಾ ಅವರ ಮಗಳು ಎಂದು ಹೇಳಿಕೊಂಡಿರುವ ಅಮೃತಾ ಅಲಿಯಾಸ್ ಮಂಜುಳಾ ಅವರು, ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಜಯಲಲಿತಾ ಅವರ ಆಪ್ತರಾದ ಎಲ್.ಎಸ್.ಲಲಿತಾ ಹಾಗೂ ರಂಜನಿ ರವೀಂದ್ರನಾಥ್ ಅವರು ಸಹ ಅಮೃತಾ ಬೆಂಬಲಕ್ಕೆ ನಿಂತಿದ್ದು, ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರಿದ್ದಾರೆ. . ಈ ಮಹಿಳೆಯನ್ನು ಜಯಲಲಿತಾ ಅವರ ಸಹೋದರಿ ದತ್ತು ಪಡೆದು ಸಾಕಿದ್ದಾರೆ ಎಂದು ಹೇಳಲಾಗುತ್ತಿದೆ.

'ನಾವು ಜಯಲಲಿತಾ ಅವರನ್ನು ಭೇಟಿಯಾಗಲು ಸಾಕಷ್ಟು ಪ್ರಯತ್ನಿಸಿದ್ದೇವು. ಆದರೆ, ನಮ್ಮ ಭೇಟಿಗೆ ಶಶಿಕಲಾ ನಟರಾಜನ್ ಕುಟುಂಬ ಅಡ್ಡಿಯಾಗಿತ್ತು. ಜಯಲಲಿತಾ ಅಂತ್ಯಸಂಸ್ಕಾರದಲ್ಲಿಯೂ ಸಹ ಭಾಗಿಯಾಗಲು ಅನುಮತಿಸಲಿಲ್ಲ' ಎಂದು ಮಹಿಳೆ ಆರೋಪಿದ್ದಾರೆ.

ತನಗೆ ನ್ಯಾಯ ಕಡಿಸುವಂತೆ ಕೋರಿ ಅಮೃತಾ ಅವರು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಸಿಬಿಐ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.

ಜಯಲಲಿತಾ ನಿಧನದ ಬಳಿಕ ತನ್ನ ಜನ್ಮ ರಹಜ್ಯ ಬಹಿರಂಗವಾಗಿದ್ದು, ಅಗಸ್ಟ್ 14, 1980ರಲ್ಲಿ ಜಯಲಲಿತಾ ಅವರ ಮೈಲಾಪುರ ನಿವಾಸದಲ್ಲಿ ತನ್ನ ಜನನವಾಗಿದೆ. ಆದರೆ. ಈ ವಿಷಯವನ್ನು ರಹಸ್ಯವಾಗಿಡಲಾಗಿತ್ತು ಎಂದು ಅಮೃತಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ