ಆ್ಯಪ್ನಗರ

ವ್ಹೀಲ್‌ಚೇರ್‌ನಿಂದ ಎದ್ದು ನಡೆದಾಡುವಂತೆ ಸೂಚಿಸಿದ ಸುಪ್ರೀಂ

ಅಂಗವಿಕಲರೊಬ್ಬರಿಗೆ ವ್ಹೀಲ್‌ಚೇರ್‌ನಿಂದ ಎದ್ದು ನಡೆದಾಡುವಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ಸೂಚಿಸಿದ ಘಟನೆ ಶುಕ್ರವಾರ ನಡೆದಿದೆ...

Vijaya Karnataka 28 Oct 2017, 6:00 am

ಹೊಸದಿಲ್ಲಿ: ಅಂಗವಿಕಲರೊಬ್ಬರಿಗೆ ವ್ಹೀಲ್‌ಚೇರ್‌ನಿಂದ ಎದ್ದು ನಡೆದಾಡುವಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ಸೂಚಿಸಿದ ಘಟನೆ ಶುಕ್ರವಾರ ನಡೆದಿದೆ.

ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾದ ನಮಿತ್‌ ಸಕ್ಸೇನಾ ಅವರು ಸರಣಿ ಟ್ವೀಟ್‌ಗಳ ಮೂಲಕ ಈ ವಿಷಯ ತಿಳಿಸಿದ್ದಾರೆ.

''ವಾಹನ ಅಪಘಾತದಲ್ಲಿ ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬರು, ವಿಮೆ ಕ್ಲೇಮ್‌ ವಿಳಂಬ ಸಂಬಂಧ ತಕರಾರು ಇತ್ಯರ್ಥಕ್ಕಾಗಿ ಮಧ್ಯ ಪ್ರದೇಶದ ಇಂದೋರ್‌ನಿಂದ ಆಗಮಿಸಿದ್ದರು. ಆತನಿಗೆ ನಡೆದಾಡುವುದಿರಲಿ, ಎದ್ದು ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಅಂಥದ್ದರಲ್ಲಿ, ನ್ಯಾಯಮೂರ್ತಿಗಳು ಪೋಡಿಯಂವರೆಗೂ ನಡೆಯುವಂತೆ ಆತನಿಗೆ ಸೂಚಿಸಿದರು. ಕೊನೆಗೆ ಮಗನ ನೆರವಿನಿಂದ ಆ ವ್ಯಕ್ತಿಯನ್ನು ಆತನ ಮಗ ಅಕ್ಷರಶಃ ಪೋಡಿಯಂವರೆಗೂ ಎಳೆದೊಯ್ಯಬೇಕಾಯಿತು. ಕರುಣೆ ಎಲ್ಲಿದೆ?,'' ಎಂದು ಸಕ್ಸೇನಾ ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

''ವ್ಯಕ್ತಿಗೆ ನಡೆಯಲು ಸಾಧ್ಯವಿಲ್ಲ ಎಂಬುದು ಖಚಿತವಾದ ಮೇಲೆ ನ್ಯಾಯ ಪೀಠ ವಿಶೇಷ ರಜಾ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದೆ. ಅಂತಹ ವ್ಯಕ್ತಿಯನ್ನು ಈ ರೀತಿ ಪರೀಕ್ಷೆಗೆ ಒಳಪಡಿಸುವುದು ಅನಗತ್ಯವಾಗಿತ್ತು,'' ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯದ ನಡೆಯ ಬಗ್ಗೆ ಟ್ವಿಟರ್‌ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಮಾನುಷ ನಡೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಇಂತಹ ಆಘಾತಕಾರಿ ಘಟನೆ ನಡೆದರೂ ಬಾರ್‌ ಕೌನ್ಸಿಲ್‌ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ